Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.03.2021
Share:

By Village Missionary Movement

Saturday, 13-Mar-2021

ಧೈನಂದಿನ ಧ್ಯಾನ(Kannada) – 13.03.2021

ಅದ್ಭುತ

"...ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು" - ಅಪೊಸ್ತಲ 10:38

ಇಂಗ್ಲೆಂಡ್ ದೇಶದಲ್ಲಿ ಜೀವಿಸುತ್ತಿದ್ದ ಒಂದು ಸಹೋದರಿಗೆ 6 ತಿಂಗಳಿಂದ ಎರಡು ಕಾಲುಗಳು ನಡೆಯಲಾಗದಂತಾಯಿತು. ಅವರ ತಾಯಿ ಒಂದು ಆಲಯಕ್ಕೆ ಕರೆದುಕೊಂಡು ಹೋದರು. ಆಗ ಅಲ್ಲಿರುವ ಸೇವಕರು ಪ್ರಾರ್ಥಿಸಿದರು. ಆಗ ಆ  ಸಹೋದರಿ "ಕಾಲು ಸುಡುತ್ತಿದೆ, ಸುಡುತ್ತಿದೆ" ಎಂದು ಕೂಗಾಡಿದರು. ಅವರಿಗೆ ಆ ಸೇವಕರು ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸು ಅದ್ಭುತ ಮಾಡುತ್ತಾರೆಂದು ಹೇಳಿ ಅವರು ಕೈಹಿಡಿದು ಎತ್ತಿ ನಡೆಸಿದರು. ಎಂಥಾ ಆಶ್ಚರ್ಯ! " 6 ತಿಂಗಳಿಂದ ನಡೆಯಲಾಗದೆ ಇದ್ದೇ ಆಗಲೇ ಯೇಸುವಿನ ನಾಮದಲ್ಲಿ ನಡೆಯುತ್ತಿದ್ದೇನೆ"  ಎಂದು ಆ ಸಹೋದರಿ ಸಾಕ್ಷಿ ಹೇಳಿದರು.

ಇದರಂತೆ ನಾವು ಇಂದು ಅಪೊಸ್ತಲ ಕೃತ್ಯಗಳು  3ನೇ ಅಧ್ಯಾಯದಲ್ಲಿ ಒಂದು ವ್ಯಕ್ತಿಯನ್ನು ನೋಡಬಹುದು. ತನ್ನ ತಾಯಿಯ ಗರ್ಭದಿಂದ ಹುಟ್ಟಿದಾಗಿನಿಂದಲೂ  ಕುಂಟನಾಗಿದ್ದ ಒಬ್ಬನಿದ್ದನು. ಅವನನ್ನು ನೋಡುವಾಗಲೆಲ್ಲ ಅವರ ಹೆತ್ತವರಿಗೆ ಬಹಳ ದುಃಖವಾಗಿರಬಹುದು. ಏಕೆಂದರೆ 40 ವರ್ಷವಾದ ತನ್ನ ಮಗನನ್ನು ದಿನವೂ ಹೆಗಲಮೇಲೆ ಹೊತ್ತುಕೊಂಡು ತನ್ನ ಊರಿನಲ್ಲಿರುವ ದೇವಾಲಯದ ಮುಂದೆ ಕೂರಿಸಿ ಭಿಕ್ಷೆ ಬೇಡಿಸುತ್ತಿದ್ದರು.

ಒಂದು ದಿನ ಆ ಮಾರ್ಗವಾಗಿ ಆಲಯಕ್ಕೆ ಬರುತ್ತಿದ್ದ ಪೇತ್ರ ಯೋಹಾನನ್ನು ಕಂಡು ಭಿಕ್ಷೆ ಕೇಳಿದನು. ಆಗ ಪೇತ್ರ ಯೋಹಾನರು ಅವನಿಗೆ ನಮ್ಮನ್ನು ದೃಷ್ಟಿಸಿ ನೋಡು ಎಂದು ಹೇಳಿದರು. ಆಗ ಅವನು ಅವರ ಬಳಿಯಲ್ಲಿ ತನಗೆ ತನ್ನ ಕುಟುಂಬಕ್ಕೆ ಏನಾದರೂ ಸಿಗುತ್ತದೆ ಎಂದು ನೆನೆಸಿ ಅವರನ್ನು ನೋಡಿದನು. ಆಗ ಪೇತ್ರನು, ಯೋಹಾನನು ನಮ್ಮ ಬಳಿ ಚಿನ್ನ, ಬೆಳ್ಳಿ ಇಲ್ಲ, ನಮ್ಮ ಬಳಿ ಇರುವುದನ್ನು ನಿನಗೆ ಕೊಡುತ್ತೇನೆ ಎಂದು ಹೇಳಿ ಅವನ ಕೈಹಿಡಿದು ಎಬ್ಬಿಸಿ " ಯೇಸುವಿನ ನಾಮದಲ್ಲಿ ನೀನೆದ್ದು ನಡೆ"  ಎಂದು ಹೇಳಿದರು. ಕೂಡಲೇ ಅವನು ನಡೆದು ಅವರೊಂದಿಗೆ ದೇವಾಲಯಕ್ಕೆ ಹೋದನು.

ಹೌದು, ನನ್ನ ಪ್ರಿಯರೇ! ಯೇಸುಕ್ರಿಸ್ತನ ಹೆಸರು ಒಂದು ಸಾಧಾರಣವಾದ ಹೆಸರಲ್ಲ, ಯೇಸುವಿನ ನಾಮದಲ್ಲಿ ಅದ್ಭುತಗಳು ನಡೆಯುತ್ತವೆ. ನಾವು ಯೇಸುವಿನ ನಾಮದಲ್ಲಿ ರೋಗಿಗಳಿಗಾಗಿ ಪ್ರಾರ್ಥಿಸುವಾಗ ಅದ್ಭುತ ಖಂಡಿತವಾಗಿ ನಡೆಯುತ್ತದೆ. ಅದ್ಭುತವನ್ನು ಹೊಂದಿಕೊಳ್ಳುವವರು ತಾವಾಗಿಯೇ ಆಲಯಕ್ಕೆ ಬರುತ್ತಾರೆ, ದೇವರನ್ನು ಹಿಂಬಾಲಿಸುತ್ತಾರೆ.ಆದ್ದರಿಂದ ರೋಗಿಗಳಿಗಾಗಿ ಪ್ರಾರ್ಥಿಸಲು ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಂಡು ನಂಬಿಕೆಯಿಂದ ಪ್ರಾರ್ಥಿಸೋಣ. ದೇವರು ಸ್ವಸ್ಥತೆಯನ್ನು ಕೊಡುತ್ತಾರೆ. ಅನೇಕರು ಯೇಸುವಿನ ಬಳಿಗೆ ಸೇರಿಸಲ್ಪಡುತ್ತಾರೆ, ಆಮೆನ್!
-    Mrs. ರೂಬಿ ಅರುಳ್

ಪ್ರಾರ್ಥನಾ ಅಂಶ:-
1 ಲಕ್ಷ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ 1ಲಕ್ಷ ವ್ಯಕ್ತಿಗಳು ಕರ್ತನಿಗಾಗಿ ಎದ್ದೇಳಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al