Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.06.2023
Share:

By Village Missionary Movement

Monday, 19-Jun-2023

ಧೈನಂದಿನ ಧ್ಯಾನ(Kannada) – 20.06.2023

 

ಗುಂಪಾಗಿ ಒಟ್ಟಾಗಿರಿ

 

"ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ" - ಫಿಲಿಪ್ಪಿ 2:4

 

ಒಂದು ದೊಡ್ಡ ಕಂಪನಿಯಲ್ಲಿ ಪ್ರಮುಖ ಹುದ್ದೆಗಾಗಿ interview ನಡೆಯಿತು. ಅದಕ್ಕೆ 150 ಜನ ಬಂದಿದ್ದರು. ಅವರನ್ನು ಮೂರು ಕೊಠಡಿಗಳಲ್ಲಿ 50, 50 ಜನರಾಗಿ ಕೂರಿಸಿದರು. ನಂತರ ಪ್ರತಿಯೊಬ್ಬರಿಗೂ ಒಂದೊಂದು ಬಲೂನ್ ನೀಡಲಾಯಿತು. ಇದೇನು ಚಿಕ್ಕ ಮಕ್ಕಳಿಗೆ ಕೊಡುವಂತೆ ಬಲೂನುಗಳನ್ನು ನೀಡುತ್ತಿದ್ದಾರಲ್ಲಾ ಎಂದು ಭಾವಿಸಿದರು. ನಂತರ ಈ ಬಲೂನ್ ಅನ್ನು 5 ನಿಮಿಷಗಳ ಕಾಲ ಭದ್ರಪಡಿಸಬೇಕು ಎಂದು ಹೇಳಿದರು. ಎರಡು ಕೋಣೆಗಳಲ್ಲಿದ್ದವರು ಬಲೂನ್ ಹಿಡಿದಿರುವವರಿಗೆ ಮಾತ್ರವೇ ಕೆಲಸ ಕೊಡುತ್ತಾರೆ ಎಂದುಕೊಂಡು ಇತರರ ಬಲೂನ್ ಒಡೆಯಲು ಆರಂಭಿಸಿದರು. ಮೂರನೇ ಕೊಠಡಿಯಲ್ಲಿದ್ದ 50 ಮಂದಿಯೂ ಬಲೂನನ್ನು ಭದ್ರವಾಗಿಟ್ಟುಕೊಂಡಿದ್ದರು. 5 ನಿಮಿಷಗಳ ನಂತರ 150 ಜನರನ್ನೂ ಕರೆಯಲಾಯಿತು. ಬಲೂನ್ ಅನ್ನು ಭದ್ರವಾಗಿಟ್ಟುಕೊಂಡಿದ್ದ 50 ಮಂದಿಗೂ ಉದ್ಯೋಗ ಖಚಿತಪಡಿಸಲಾಯಿತು. ಆ ಮ್ಯಾನೇಜರ್ ಹೇಳಿದರು, ಬೇರೆಯವರಿಗೆ ಕೆಲಸ ಸಿಗಬಾರದು ಎಂದು ನೆನೆಸಿ ಅವರ ಬಲೂನ್ ಅನ್ನು ಒಡೆದಿದ್ದೀರ.. ಕೊನೆಗೆ ನಿಮಗೂ ಕೆಲಸವಿಲ್ಲದಂತಾಯಿತು. ನಮ್ಮ ಕಂಪನಿಯಲ್ಲಿ ಟೀಮ್ ವರ್ಕ್ ಮಾಡುವುದಕ್ಕಾಗಿಯೇ ಜನರ ಅವಶ್ಯಕತೆ ಇದೆ ಎಂದು ಹೇಳಿ ಉಳಿದವರನ್ನು ಕಳುಹಿಸಿದರು.

 

ಇತ್ತೀಚಿನ ದಿನಗಳಲ್ಲಿ ಗುಂಪಾಗಿ ಒಟ್ಟಿಗೆ ಇರುವುದನ್ನು ನೋಡುವುದೇ ಕಷ್ಟ. ಯಾರ ಕಾಲು ಯಾವಾಗ ಎಳೆಯೋಣ ಎಂದು ಕಾಯುತ್ತಿರುವವರೇ ಹೆಚ್ಚು. ಸತ್ಯವೇದದಲ್ಲಿ ದಾನಿಯೇಲ್, ಹನನ್ಯ, ವಿಾಶಾಯೇಲ, ಅಜರ್ಯ ಎಂಬವರು ಬಾಬೆಲಿಗೆ ಸೆರೆಹಿಡಿಯಲ್ಪಟ್ಟು ಹೋದಾಗ ಇವರು 4 ಜನರೂ ಐಕ್ಯವಾಗಿ ಒಟ್ಟಾಗಿದ್ದರು. ರಾಜಭೋಜನದಿಂದ ಅಪವಿತ್ರವಾಗಬಾರದೆಂಬ ನಿರ್ಧಾರದಲ್ಲಿ ಜೊತೆಯಾಗಿ ನಿಂತು 10 ಪಟ್ಟು ಸಮರ್ಥರಾಗಿ ಕಾಣಲ್ಪಟ್ಟರು. ರಾಜನು ಕಂಡ ಕನಸನ್ನೂ ಮತ್ತು ಅದರ ಅರ್ಥವನ್ನೂ ಹೇಳದಿದ್ದರೆ ಕೊಲ್ಲಬೇಕೆಂದು ಆದೇಶ ಬಂದಾಗ 4 ಜನರೂ ಪ್ರಾರ್ಥಿಸಿದರು. ಕನಸು ದಾನಿಯೇಲನಿಗೆ ಪ್ರಕಟವಾಯಿತು ಮತ್ತು ಅವನು ದೇಶದಲ್ಲಿ ಉನ್ನತಿ ಹೊಂದಿದನು. ಆಗಲೂ ಅವನು ತನ್ನ 3 ಸ್ನೇಹಿತರಿಗಾಗಿ ರಾಜನನ್ನು ಪ್ರಾರ್ಥಿಸಿದನು ಆಗ ಪ್ರಾಂತ್ಯದ ವ್ಯವಹಾರಗಳನ್ನು ವಿಚಾರಿಸುವಂತೆ ಅವರೂ ಉನ್ನತಿಗೆ ಬಂದರು. ಪ್ರಂಸಂಗಿ ಕೂಡ ಒಂಟಿಯಾಗಿರುವುದಕ್ಕಿಂತ ಇಬ್ಬರು ಒಟ್ಟಿಗೆ ಇರುವುದು ಲೇಸು ಎಂದು ಹೇಳಿದರು. ಕೀರ್ತನಾಗಾರನು ಸಹ ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು ಎಂದು ಹೇಳಿದರು.

 

ಪ್ರತಿಯೊಂದು ಕ್ರೈಸ್ತನೂ ಕ್ರಿಸ್ತನಲ್ಲಿ ಬೆಳೆಯಲು ಸತ್ಯವೇದ ಧ್ಯಾನ, ಪ್ರಾರ್ಥನೆ ಎಷ್ಟು ಮುಖ್ಯವೋ ಅದರಂತೆಯೇ ಪರಿಶುದ್ಧರೊಂದಿಗಿನ ಒಡನಾಟವೂ ಅಷ್ಟೇ ಮುಖ್ಯ. ಸ್ನೇಹಿತರೊಂದಿಗಿನ ಸಹವಾಸವು ದಾನಿಯೇಲನಿಗೆ ತಾತ್ಕಾಲಿಕ ಮತ್ತು ಆಧ್ಯಾತ್ಮಿಕ ಆಶೀರ್ವಾದಗಳನ್ನು ಹೇಗೆ ತಂದಿತೋ ಅದರಂತೆಯೇ ಪರಿಶುದ್ಧರೊಂದಿಗಿನ ಸಹವಾಸವು ಸಹ ನಮ್ಮ ಬೆಳವಣಿಗೆಗೆ ಫಲಪ್ರದವಾಗಿದೆ. ಇದಕ್ಕಾಗಿ ನಾವು ಇತರರನ್ನು ನಮಗಿಂತ ಶ್ರೇಷ್ಠರೆಂದು ನಮ್ರತೆಯಿಂದ ಪರಿಗಣಿಸಬೇಕು. ಮತ್ತು ಪೌಲನು ಹೇಳುವಂತೆ, ಪ್ರೀತಿಯಲ್ಲಿ ಹೊರತು ಬೇರೆ ಯಾವುದರಲ್ಲೂ ಸಾಲಗಾರರಾಗಿರದೇ ಒಬ್ಬರ ಭಾರವನ್ನೊಬ್ಬರು ಹೊತ್ತುಕೊಂಡು ಒಬ್ಬರಿಗಾಗಿ ಒಬ್ಬರು ಪ್ರಾರ್ಥಿಸಬೇಕು. ಹೌದು, ಒಟ್ಟಿಗೆ ಕೆಲಸ ಮಾಡೋಣ. ಜಯ ಹೊಂದೋಣ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ವೈದ್ಯಕೀಯ ಕೆಲಸಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş