By Village Missionary Movement
Monday, 19-Jun-2023ಧೈನಂದಿನ ಧ್ಯಾನ(Kannada) – 19.06.2023
ವಸಂತವಾದ ವಸಂತ ಕಾಲ
"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು" - ಜ್ಞಾನೋಕ್ತಿ 4:23
ಒಂದು ಬಾರಿ ಸಾಧುಸುಂದರ್ ಸಿಂಗ್ ರವರು ಗಂಗಾ ನದಿಯ ತೀರಕ್ಕೆ ಹೋದರು. ಅಲ್ಲಿದ್ದ ಸಾವಿರಾರು ಜನರು ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಿದ್ದರು. ಅವರೊಂದಿಗೆ ಯೇಸು ಕ್ರಿಸ್ತನ ಬಗ್ಗೆ ಮಾತನಾಡಿದರು. ಫಲವಿಲ್ಲದ ಕಾರಣ ಅವರ ಜೊತೆ ನದಿಯಲ್ಲಿ ಇಳಿದರು. ಅವರು ತನ್ನ ಕೈಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯನ್ನು ತೆರೆದು, ತನ್ನ ಕೊಳೆಯಾದ ಬಟ್ಟೆಗಳನ್ನು ಬಿಚ್ಚಿ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದರು. ಪೆಟ್ಟಿಗೆಯನ್ನು ನೀರಿನಲ್ಲಿ ಮುಳುಗಿಸಿ ಎತ್ತಿ ಅದಕ್ಕೆ ಸೋಪು ಹಾಕಿದರು. ಏನು ಮಾಡುತ್ತಿದ್ದೀಯ! ಎಂದು ಕೇಳಿದವರ ಬಳಿ ಶರ್ಟ್ ನ ಕೊಳೆ ಹೋಗಲು ಒಗೆಯುತ್ತಿದ್ದೇನೆ ಎಂದರು!. ಎಲ್ಲರೂ ನಕ್ಕರು. ಪೆಟ್ಟಿಯೊಳಗೆ ಇರುವ ಶರ್ಟ್ ಗೆ ಪೆಟ್ಟಿಗೆಯ ಮೇಲೆ ಸೋಪು ಹಾಕಿದರೆ ಹೇಗೆ ಕೊಳೆ ಹೋಗುತ್ತದೆ? ಹೌದಲ್ವಾ ಶರ್ಟ್ ಗೆ ತಾನೇ ಸೋಪು ಹಾಕಬೇಕು ಅಂದರು! ಆಗ ಸಾಧು, ನಿಮ್ಮ ಆತ್ಮದಲ್ಲಿ ಇರುವ ಪಾಪದ ಕರೆಗಳಿಗೆ ನದಿಯ ನೀರು ಏನೂ ಮಾಡೋದಿಲ್ಲ. ಬೇಕಾದರೆ ನಿಮ್ಮ ದೇಹದ ಕೊಳೆಯನ್ನು ಹೋಗಿಸುತ್ತದೆ. ನಿಮ್ಮ ಆತ್ಮ ಶುದ್ಧವಾಗಲು ಯೇಸು ಎಂಬ ದೇವರು ಶಿಲುಬೆಯಲ್ಲಿ ರಕ್ತ ಸುರಿಸಿದರು. ಆತನ ರಕ್ತದಿಂದ ನಿಮ್ಮ ಪಾಪಗಳು ನೀಗಿ ಅಂತರಂಗವು ಪವಿತ್ರವಾಗುತ್ತದೆ. ನಿಮಗೆ ಸಮಾಧಾನವೂ ಸಂತೋಷವೂ ಉಂಟಾಗುತ್ತದೆ ಎಂದು ಹೇಳಿದರು. ಆ ನದಿ ತೀರದಲ್ಲಿ ಅನೇಕರು ಯೇಸುಕ್ರಿಸ್ತನ ಸುವಾರ್ತೆಯನ್ನು ಕುರಿತು ಯೋಚಿಸಲಾರಂಭಿಸಿದರು. ಹೌದು, ಇಷ್ಟರಮಟ್ಟಿಗೆ ನಮ್ಮ ಭಾರತ ದೇಶವು ಅನೇಕ ಕುರುಡಾದ ಅಭ್ಯಾಸಗಳಿಗೆ ಸಿಕ್ಕಿ ಬೀಳುತ್ತಿದೆ. ಸಂತೋಷವನ್ನೂ ಸಮಾಧಾನದ ತೃಪ್ತಿಯನ್ನೂ ಜನರು ಹುಡುಕುತ್ತಾ ಏನೋ ಒಂದನ್ನು ಮಾಡಿ ಅದನ್ನು ಪಡೆದುಬಿಡಬಹುದು ಎಂದು ಭಾವಿಸುತ್ತಿದ್ದಾರೆ. ಅವರ ಮನೋನೇತ್ರಗಳು ತೆರೆದುಕೊಳ್ಳಬೇಕಾದರೆ ಸುವಾರ್ತೆ ಒಂದೇ ದಾರಿ!
ಈ ಪ್ರಪಂಚದಲ್ಲಿ ಮಾನವನ ಮನಸ್ಸಿನಲ್ಲಿ ಸ್ವಲ್ಪ ಸಮಯದ ಸಂತೋಷವನ್ನೂ, ಕುತೂಲವನ್ನೂ ಕೊಡುವುದಕ್ಕೆ ಸಾಕಷ್ಟು ಕಾರ್ಯಗಳಿವೆ. ಎಷ್ಟರ ಮಟ್ಟಿಗೆ ನೀವು ಈ ಲೋಕ ಪ್ರಕಾರವಾದ ಕಾರ್ಯಗಳನ್ನು ಹುಡುಕುತ್ತಾ ಹೋಗುತ್ತೀರೋ ಅಷ್ಟರ ಮಟ್ಟಿಗೆ ಅದು "ಇನ್ನೂ ಬೇಕು, ಇನ್ನೂ ಬೇಕು" ಎಂಬ ತಹತಹವನ್ನೇ ರೂಪಿಸುತ್ತದೆ. ಆದ್ದರಿಂದ, ನೀವು ಎಂದಿಗೂ ಲೋಕದ ಸಂತೋಷಗಳಿಂದ ತೃಪ್ತಿ ಹೊಂದಲು ಸಾಧ್ಯವಿಲ್ಲ. ಇದುವೇ ಸತ್ಯ.
ಆದರೆ, ಯೇಸು ಕ್ರಿಸ್ತನು ನಮಗಾಗಿ ಶಿಲುಬೆಯಲ್ಲಿ ಪಾಡುಪಟ್ಟು ಸಂಪಾದಿಸಿದ ಇಷ್ಟು ದೊಡ್ಡದಾದ ರಕ್ಷಣೆಯ ಬಗ್ಗೆ ನಾವು ಚಿಂತೆಯಿಲ್ಲದೆ ಇರಬಹುದೇ? ಅವರು ನೀಡುವ ಸಂತೋಷ, ಸಮಾಧಾನ, ನಂಬಿಕೆ ಎಂದೂ ಹೃದಯದಲ್ಲಿ ಸುತ್ತುತ್ತಲೇ ಇರುತ್ತದೆ.
- S. ಬೆರ್ಲಿನ್ ಸೆಲ್ಭಾಯ್.
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಂದು ಸೇವಕರುಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482