By Village Missionary Movement
Wednesday, 14-Jun-2023ಧೈನಂದಿನ ಧ್ಯಾನ(Kannada) – 15.06.2023
ಶೋಧನೆಯ ಪರಿಣಾಮಗಳು
"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ" - 1 ಪೇತ್ರ 5:7
ಕ್ರಿಸ್ತನ ಸಂಕಟಗಳಿಗೆ ಸಾಕ್ಷಿಯೂ ಇನ್ನು ಮುಂದೆ ಬಹಿರಂಗವಾಗುವ ಮಹಿಮೆಗೆ ಪಾಲುದಾರನೂ ಆಗಿರುವ ಪೇತ್ರನು ಮೇಲ್ಕಂಡ ಬುದ್ಧಿವಾದವನ್ನು ಬರೆಯುತ್ತಾರೆ. ಯೋಬನು ತನ್ನ ಶೋಧನೆಯ ಸಮಯದಲ್ಲಿ ದೇವರನ್ನು ದೂಷಿಸದೆ ಅವರನ್ನೇ ನೋಡುತ್ತಾ, ತನ್ನ ಭಾರಗಳನ್ನು ಅವರ ಮೇಲೆ ಹಾಕಿಬಿಟ್ಟು, "...ನನ್ನ ವಿಮೋಚಕನು ಜೀವಸ್ವರೂಪನೆಂದು ಬಲ್ಲೆನು" (ಯೋಬ 19:25) ಎಂದು ಧೈರ್ಯವಾಗಿ ನಂಬಿಕೆಯಿಂದ ಹೇಳುತ್ತಾರೆ. ಮೊದಲನೆಯದಾಗಿ ಅವರು ಅನುಭವಿಸಿದ ಶೋಧನೆ ಅವರ ಮಕ್ಕಳು ಮತ್ತು ಆಸ್ತಿಯ ನಷ್ಟ. ಎರಡನೆಯದು, ತನ್ನ ಹೆಂಡತಿ "ದೇವರನ್ನು ದೂಷಿಸಿ ಸಾಯಿ" ಎಂದು ಹೇಳಿದ, ನೋವಿನ ನಂಬಿಕೆಯಿಲ್ಲದ ಮಾತುಗಳು. ಮೂರನೆಯದಾಗಿ, ಅವರು ತನ್ನನ್ನು ತಾನೇ ದೇವರಿಗೆ ಹೊಸದಾಗಿ ಸಮರ್ಪಿಸಿಕೊಂಡದ್ದು. "...ಈ ಎಲ್ಲಾ ವಿಷಯಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪ ಮಾಡಲಿಲ್ಲ." ಸಾಮಾಜಿಕ ಬಹಿಷ್ಕಾರ, ಒಳ್ಳೆಯ ಸ್ಥಿತಿಯಿಂದ ಹೀನವಾದ ಸ್ಥಿತಿ, ಇವುಗಳಲ್ಲಿ ಯಾವುದೂ ಸಹ ಯೋಬನ ಆತ್ಮವನ್ನು ಹಾನಿ ಮಾಡಲು ಸಾಧ್ಯವಾಗಲಿಲ್ಲ. ಬದಲಾಗಿ, ತನ್ನನ್ನು ಹೊಸದಾಗಿ ದೇವರಿಗೆ ಸಮರ್ಪಿಸಿಕೊಂಡು ತಾಳ್ಮೆಯಿಂದ ಕಾಯುತ್ತಿದ್ದರು. ಇದರ ಪರಿಣಾಮವಾಗಿ, ಯೋಬನು, ನಲವತ್ತೆರಡನೆಯ ಅಧ್ಯಾಯದಲ್ಲಿ, ಎರಡರಷ್ಟು ಆಶೀರ್ವಾದವನ್ನು, ನಾಲ್ಕು ತಲೆಮಾರುಗಳ ಮಕ್ಕಳನ್ನು ನೋಡಲು, ಪೂರ್ಣ ಆಯುಷ್ಯುಳ್ಳವರಾಗಿ ಸಾಯುವ ಅವಕಾಶವನ್ನೂ ಪಡೆದರು. ಯೋಬನ ತಾಳ್ಮೆಯ ಬಗ್ಗೆ ಯಾಕೋಬ 5:11 ರಲ್ಲಿ ಓದುತ್ತೇವೆ.
ಯೇಸುಕ್ರಿಸ್ತನು ದೀರ್ಘ ಸಹನೆಯುಳ್ಳವರಾಗಿ ತಂದೆಯ ಚಿತ್ತವನ್ನು ಪೂರೈಸಲು ಸಿದ್ಧರಾಗಿ ಶಿಲುಬೆಯಲ್ಲಿ ಮರಣದವರೆಗೂ ತನ್ನನ್ನು ತಗ್ಗಿಸಿಕೊಂಡರು. ನಮ್ಮ ಪಾಪಗಳು, ಅಪರಾಧಗಳು ಮತ್ತು ಅಕ್ರಮಗಳಿಗಾಗಿ ಸಾಯಲು ಮತ್ತು ನಮಗೆ ಸಮಾಧಾನವನ್ನು ಉಂಟುಮಾಡುವ ಶಿಕ್ಷೆಯನ್ನು ಸ್ವೀಕರಿಸಲು ಅವರು ಸಿದ್ಧವಾಗಿದ್ದರು. ಸೈತಾನನಿಂದ ಶೋಧಿಸಲ್ಪಟ್ಟರು. ಸಭಾಮಂದಿರದ ನಾಯಕರು, ಮುಖ್ಯ ಯಾಜಕರು, ಸದ್ದುಕಾಯರು, ಫರಿಸಾಯರು ಮತ್ತು ಯೆಹೂದ್ಯ ಜನಾಂಗದಿಂದ ಅವರು ನಿಂದಿಸಲ್ಪಟ್ಟರು, ಪರಿಹಾಸ್ಯ ಮಾಡಲ್ಪಟ್ಟು, ತಿರಸ್ಕರಿಸಲ್ಪಟ್ಟರು. ಯಾವ ಪಾಪವನ್ನೂ ಅರಿಯದ ಅವರು, ಶಿಲುಬೆಯನ್ನು ಸಹಿಸಿಕೊಳ್ಳಲು ತನ್ನನ್ನು ಒಪ್ಪಿಸಿಕೊಟ್ಟರು. ಇದರ ಪರಿಣಾಮವಾಗಿ ನಾವು ಆತನ ರಕ್ತದಿಂದ ನಮ್ಮ ಪಾಪಗಳಿಂದ ಮುಕ್ತರಾಗುತ್ತೇವೆ; ಅವರ ಹೆಸರಿನಿಂದ ನಾವು ಸಂತೋಷ, ಶಾಂತಿ, ಆರೋಗ್ಯವನ್ನು ಪಡೆಯುತ್ತೇವೆ; ಆತನ ಪುನರುತ್ಥಾನದ ಮೂಲಕ ನಮಗೆ ನಿತ್ಯಜೀವವನ್ನು ವಾಗ್ದಾನ ಮಾಡಲಾಗಿದೆ. ನಾವು ನಿತ್ಯ ದೇವರನ್ನು ಸೇರುವವರೆಗೂ, ಕ್ರಿಸ್ತನಲ್ಲಿ ನೆಲೆಗೊಂಡಿರೋಣ. ಮಾರನಾಥ! ಯೇಸು ಶೀಘ್ರವಾಗಿ ಬರುತ್ತಾರೆ.
- Mrs.ಜಯಂತಿ ಭಾಕ್ಯನಾಥನ್.
ಪ್ರಾರ್ಥನಾ ಅಂಶ:
ಏಳು ಸಾವಿರ ಮಿಷನರಿಗಳು ಒಂದು ಲಕ್ಷ ಹಳ್ಳಿಗಳು ಎಂಬ ಗುರಿಯನ್ನು ತಲುಪಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482