Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.06.2023
Share:

By Village Missionary Movement

Wednesday, 14-Jun-2023

ಧೈನಂದಿನ ಧ್ಯಾನ(Kannada) – 14.06.2023

 

ಒಂದು ಅದ್ಭುತ ಸಾಕ್ಷಿ

 

"...ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು;..." - ಯೋವೇಲ 2:28

 

ಚೆನ್ನೈನ ಒಂದು ನಿರ್ದಿಷ್ಟ ಪ್ರದೇಶದಲ್ಲಿ, ಒಬ್ಬ ಬಡ ವಿಧವೆ ತಾಯಿ, ತನಗೆ ಮೂವರು ಮಕ್ಕಳಿದ್ದರೂ ತನ್ನ ಎಂಟು ವರ್ಷದ ಮೊಮ್ಮಗಳೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ದಾರೆ. ಆ ತಾಯಿ ಅಧಿಕವಾಗಿ ಸತ್ಯವೇದವನ್ನು ಓದಿ, ಉಪವಾಸವಿದ್ದು ಭಾರದಿಂದ ಪ್ರಾರ್ಥಿಸುವವರು. ಪ್ರತಿದಿನ ದೇವರನ್ನು ಹುಡುಕುವವರು ಮತ್ತು ಕ್ರಮವಾಗಿ ಪ್ರತಿ ಭಾನುವಾರ ಚರ್ಚ್‌ಗೆ ಹೋಗುವವರು. ವಾಕ್ಯವನ್ನು ಚೆನ್ನಾಗಿ ಕೇಳಿ ಮನದಲ್ಲಿ ಇಟ್ಟುಕೊಂಡು ಮೊಮ್ಮಗಳಿಗೆ ಕಲಿಸುತ್ತಿದ್ದರು. ಅವಳನ್ನು ಸೇವೆಗೆ ಅರ್ಪಿಸಿ, ತನ್ನ ಅಲ್ಪ ಆದಾಯದಲ್ಲಿ ವಿದ್ಯಾಭ್ಯಾಸ ಮಾಡಿಸಿ, ಭಕ್ತಿಯಾಗಿ ಬೆಳೆಸುತ್ತಿದ್ದಾರೆ. ಅವಳೂ ಅಜ್ಜಿಯ ಆಸೆಯಂತೆ ದೇವರ ಪ್ರೀತಿಯ ಮಗುವಾಗಿ ಬೆಳೆಯುತ್ತಿದ್ದಾಳೆ.

 

ಮನೆಯಲ್ಲಿ ಆ ತಾಯಿ ಒಬ್ಬಂಟಿಯಾಗಿದ್ದದರಿಂದ, ಅವಳು ತನ್ನ ಮನೆಯ ಮಧ್ಯದಲ್ಲಿ ಕುರ್ಚಿಯನ್ನು ಹಾಕಿ ಯೇಸು ಅದರ ಮೇಲೆ ಕುಳಿತಿರುವುದಾಗಿಯೂ ಸತ್ಯವೇದದ ಪ್ರಕಾರ "ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ." (ಯೆಹೋಶುವ 1:5) ಎಂಬ ವಾಕ್ಯದ ಪ್ರಕಾರ ತನ್ನನ್ನು ಬಲಪಡಿಸಿಕೊಂಡು ತನ್ನ ಮೊಮ್ಮಗಳಿಗೆ ಬೋಧಿಸುತ್ತಿದ್ದರು. ಕರ್ತನಾದ ದೇವರು ತನ್ನ ಪರಿಪೂರ್ಣವಾದ ಪ್ರಸನ್ನತೆಯಿಂದ ಅವರನ್ನು ತುಂಬಿಸಿ ರಕ್ಷಿಸುತ್ತಿದ್ದಾರೆ. ಕಳೆದ ವಾರದಲ್ಲಿ ಒಂದು ಸಂಜೆ, ಅವರಿಬ್ಬರೂ ಪ್ರಾರ್ಥಿಸುತ್ತಿರುವಾಗ, ಅವರ ಮೊಮ್ಮಗಳು ಕಣ್ಣು ತೆರೆದಾಗ ಎಂಥಾ ಆಶ್ಚರ್ಯ! ತಾವು ಇಟ್ಟಿದ್ದ ಕುರ್ಚಿಯ ಮೇಲೆ ಕರ್ತನಾದ ಯೇಸುಕ್ರಿಸ್ತನು ಕುಳಿತಿರುವುದನ್ನು ಕಂಡಳು. ಪ್ರಿಯನ ಕೈ ಮತ್ತು ಕಾಲುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಅವರ ಇಡೀ ದೇಹವು ಆತ್ಮದಂತೆ ಕಾಣಿಸಿತು. ಅದನ್ನು ನೋಡಿದಾಗ ಆ ಹುಡುಗಿ ಸಂತೋಷದಿಂದ ಕೂಡಿದ ಭಯದೊಂದಿಗೆ ತನ್ನ ಅಜ್ಜಿಯನ್ನು ಅಪ್ಪಿಕೊಂಡಳು.

 

ಕೊನೆಯ ದಿನಗಳಲ್ಲಿ, "…ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು... ಕನಸುಗಳನ್ನು ಕಾಣುವರು" ಎಂದು ಯೋವೇಲ 2:28 ರಲ್ಲಿ ಓದುವ ಪ್ರಕಾರ ನಡೆಯಿತು. ಕರ್ತನೇ ತನ್ನ ಮಕ್ಕಳಿಗೆ ಕೋಟೆಯು ದುರ್ಗವು ಮತ್ತು ಆಸರೆಯಾಗಿ ಇರುವುದನ್ನು ಬಹಿರಂಗಪಡಿಸಿದ್ದಾರೆ. ಹೌದು, ನಮ್ಮ ದೇವರು ನಮ್ಮೊಂದಿಗಿದ್ದಾರೆ ಮತ್ತು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾರೆ. ಹಾಗಾಗಿ ಯಾವುದರ ಬಗ್ಗೆಯೂ ಚಿಂತಿಸಬೇಡಿರಿ.

- Mr. ಭಾಕ್ಯನಾಥನ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ, ಕಣ್ಮಣಿಯೇ ಕೇಳ್, ಯೆಹೋಶುವನೇ ಎದ್ದೇಳು, ಕತ್ತೆಗಳ ಕೈಪಿಡಿಯಂತಹ ಪತ್ರಿಕೆಗಳ ಸೇವೆಯಲ್ಲಿ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al