Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.06.2023
Share:

By Village Missionary Movement

Monday, 12-Jun-2023

ಧೈನಂದಿನ ಧ್ಯಾನ(Kannada) – 13.06.2023

 

ಕಾಯುವಿಕೆ

 

"ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು" - ಜ್ಞಾನೋಕ್ತಿ 13:12

 

"ಕಾಯುವಿಕೆ" ಎಂಬುದು ಇಷ್ಟವಾಗದ ವಿಷಯವಾಗಿದೆ. ನಾವು ಕೆಲವು ಆಶೀರ್ವಾದಗಳಿಗಾಗಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದು ಅದು ನಮಗೆ ಸಿಗದಿದ್ದಾಗ, ನಾವು ಖಿನ್ನತೆಗೆ ಒಳಗಾಗುತ್ತೇವೆ. ನಂತರ ನಾವು ಅದಕ್ಕಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಿಬಿಡುತ್ತೇವೆ. ಕೆಲಸಕ್ಕಾಗಿ, ಮದುವೆಗಾಗಿ, ಮನೆ ಕಟ್ಟುವುದಕ್ಕಾಗಿ, ಸಂತಾನ ಭಾಗ್ಯಕ್ಕಾಗಿ ಹೀಗೆ ಹಲವು ಕಾರ್ಯಗಳಿಗಾಗಿ ಕಾಯುವಾಗ ಸೋತು ಹೋಗುತ್ತೇವೆ. ಆದರೆ ಯೇಸುವನ್ನು ಅರಿತಿರುವ ನಾವು ಯಾವುದಕ್ಕೂ ಸೋತುಹೋಗಬೇಕಾದ ಅಗತ್ಯವಿಲ್ಲ. ಸತ್ಯವೇದದಲ್ಲಿ ಹೆಚ್ಚು ದಿನ ಕಾದಿರುವವರು ಹೆಚ್ಚು ಆಶೀರ್ವಾದಗಳನ್ನು ಪಡೆದರು ಎಂದು ನೋಡಬಹುದು.

 

ಹನ್ನಳು ಮಕ್ಕಳಿಲ್ಲದೆ ಬಂಜೆಯಾಗಿದ್ದಳು. ಪತಿಯು ತನ್ನನ್ನು ಪ್ರೀತಿಸುತ್ತಿದ್ದರೂ, ಅವನ ಇನ್ನೊಬ್ಬ ಹೆಂಡತಿ ಪೆನಿನ್ನಳು ತನ್ನ ಮಾತು ಮತ್ತು ನಡತೆಯಿಂದ ಹನ್ನಳನ್ನು ನೋಯಿಸುತ್ತಲೇ ಇದ್ದಳು. ಅವಳು ತನ್ನ ಹೃದಯದ ಎಲ್ಲಾ ದುಃಖಗಳನ್ನು ದೇವರ ಬಳಿ ಸುರಿದು, ಹರಕೆ ಮಾಡಿ ಪ್ರಾರ್ಥಿಸಿದಳು. ಅವಳ ಪ್ರಾರ್ಥನೆಗೆ ಮನುಮರುಗಿದ ದೇವರು ಅವಳಿಗೆ ಸುಂದರ ಮಗನಾದ ಸಮುವೇಲನನ್ನು ಕೊಟ್ಟರು. ಅವರು ಇಸ್ರಾಯೇಲ್ ದೇಶದವರಿಗೆ ಪ್ರವಾದಿಯಾಗಿ, ರಾಜರನ್ನು ಅಭಿಷೇಕಿಸುವವರಾಗಿ, ಜನರನ್ನು ನ್ಯಾಯವಿಚಾರಿಸುವವರಾಗಿ ಇದ್ದರು.

 

ರೆಬೆಕ್ಕಾ ಕೂಡ 20 ವರ್ಷಗಳ ಕಾಲ ಬಂಜೆಯಾಗಿದ್ದಳು. ದೀರ್ಘ ವರ್ಷಗಳ ಕಾಯುವಿಕೆಯ ನಂತರ, ದೇವರು ಅವಳಿಗೆ ಅವಳಿ ಮಕ್ಕಳಾದ ಏಶಾವ ಮತ್ತು ಯಾಕೋಬನನ್ನು ಕೊಟ್ಟರು. ಅವಳ ಗರ್ಭದಿಂದ ಎರಡು ದೊಡ್ಡ ಜನಾಂಗಗಳು ಜನಿಸಿದವು. ಇದಲ್ಲದೆ, ಯಾಕೋಬನಿಂದ ಯೆಹೂದವು, ಯೆಹೂದ ಕುಲದಿಂದ ಯೇಸು ಕ್ರಿಸ್ತನು ಜನಿಸಿದರು.

 

ಹಾಗೆಯೇ ಅನೇಕ ವರ್ಷಗಳಿಂದ ಬಂಜೆಯಾಗಿದ್ದ ಮನೋಹನ ಹೆಂಡತಿಯು ಬಲಿಷ್ಠನಾದ ಸಂಸೋನನಿಗೆ ಜನ್ಮ ನೀಡಿದಳು. ಅವನು ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನು ವಿಮೋಚಿಸುವವರಾಗಿದ್ದರು. ಹೊಸ ಒಡಂಬಡಿಕೆಯಲ್ಲಿ, ಜೆಕರಿಯಾ-ಎಲಿಜಬೆತ್ ದಂಪತಿಗಳು ವಯಸ್ಸಾಗುವವರೆಗೂ ಕಾಯುತ್ತಾ ಹತಾಶರಾಗಿದ್ದ ಪರಿಸ್ಥಿತಿಯಲ್ಲೂ, ವೃದ್ಧಾಪ್ಯದಲ್ಲಿ ಗರ್ಭಧರಿಸಿ ಸ್ನಾನಿಕನಾದ ಯೋಹಾನನಿಗೆ ಜನ್ಮ ನೀಡಿದರು. ಅವರು ಯೇಸುಕ್ರಿಸ್ತನಿಗೂ ಮೊದಲು ದಾರಿಯನ್ನು ನೆಟ್ಟಗೆ ಮಾಡಿ, ಜನರನ್ನು ನೇರವಾಗಿ ಪರಲೋಕ ರಾಜ್ಯದ ಕಡೆಗೆ ನಡೆಸಿದ ಪ್ರವಾದಿಯಾಗಿದ್ದರು. ನಾವೂ ಸಹ ಅನೇಕ ವಿಷಯಗಳಿಗಾಗಿ ಕಾದಿದ್ದು ಸೋತು ಹೋಗದೇ, ಕರ್ತನಿಗಾಗಿ ತಾಳ್ಮೆಯಿಂದ ಕಾದಿರೋಣ. ಯೆಶಾಯ 40:31 ರ ಪ್ರಕಾರ ಕರ್ತನು ನಮಗೆ ಹೊಸ ಬಲವನ್ನು ಕೊಡುತ್ತಾರೆ. ನಮ್ಮ ಜೀವನದ ಹಾದಿಯಲ್ಲಿ ದಣಿವರಿಯಿಲ್ಲದೆ ಓಡಲು ಬಲವನ್ನು ನೀಡುತ್ತಾರೆ. ಬಯಸಿದ ಕಾರ್ಯವು ಕೈಗೂಡಿದಾಗ ಜೀವವೃಕ್ಷವನ್ನು ಕಂಡುಕೊಂಡ ಹಾಗೆ ಬಹು ಸಂತೋಷ ಮತ್ತು ಸಮಾಧಾನವನ್ನು ನೀಡುತ್ತದೆ. ಕರ್ತನು ತಾನೇ ನಮ್ಮ ಕಾಯುವಿಕೆಯನ್ನು ಜೀವವೃಕ್ಷವಾಗಿ ಮಾರ್ಪಡಿಸಲಿ.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯದ ಸೇವೆಗಳಿಗಾಗಿ ಅಲ್ಲಿ ಕೆಲಸ ಮಾಡುವ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza tlcasino amgbahis holiganbet wbahis casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş superbetin superbetin superbetin giriş marsbahis marsbahis giriş