By Village Missionary Movement
Sunday, 11-Jun-2023ಧೈನಂದಿನ ಧ್ಯಾನ(Kannada) – 11.06.2023 (Kids Special)
ನಿರೀಕ್ಷಣೆ ಇಲ್ಲದ ಪ್ರೀತಿ
"ಪ್ರಿಯರಾದ ಮಕ್ಕಳೇ, ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು" - 1 ಯೋಹಾನ 3:18
ಲೀಡಿಯಾ ತನ್ನ ಬಂಗಲೆಯ ಮನೆಯಲ್ಲಿ ಜಾಲಿಯಾಗಿ ಆಟವಾಡುತ್ತಾ ಅಲ್ಲಿ ಇಲ್ಲಿ ಗುಡು ಗುಡು ಎಂದು ಓಡುತ್ತಿದ್ದಳು. ಆಗ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಡಮಾರ್ ಎಂಬ ಭಯಂಕರ ಸದ್ದು ಕೇಳಿ ಬಂತು, ಕ್ಷಣಾರ್ಧದಲ್ಲಿ ಮನೆ ಹೊತ್ತಿ ಉರಿಯಿತು. ಆಕೆಯ ತಾಯಿ ಮತ್ತು ತಂದೆ ಒಳಗೆ ಸಿಲುಕಿಕೊಂಡಿದ್ದರು. ಲೀಡಿಯಾ ಓ ಎಂದು ಕಿರುಚಿದಳು, ಸಿಲಿಂಡರ್ ಒಡೆದ ಸದ್ದಿಗೆ ನೆರೆಹೊರೆಯವರು, ಸಂಬಂಧಿಕರು ಜಮಾಯಿಸಿದ್ದರು. ಕೆಲವರು ಅಗ್ನಿಶಾಮಕ ಕಚೇರಿಗೆ ಮತ್ತು ಕೆಲವರು ಪೊಲೀಸರಿಗೆ ಕರೆ ಮಾಡುತ್ತಿದ್ದರು, ಆದರೆ ಒಳಗೆ ಉರಿಯುತ್ತಿದ್ದ ಲೀಡಿಯಾ ಮತ್ತು ಆಕೆಯ ಪೋಷಕರನ್ನು ರಕ್ಷಿಸಲು ಯಾರೂ ಮುಂದೆ ಬರಲಿಲ್ಲ. But ಅನಿರೀಕ್ಷಿತವಾಗಿ, ಸಂಬಂಧಿಕರಲ್ಲದ ಮತ್ತು ತನ್ನ ಹೆಂಡತಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಜಾನ್ ಎಂಬವರು, ವೇಗವಾಗಿ ಓಡಿ ಬಂದು, ಮಹಡಿಯ ಮೇಲೆ ಏರಿ ಆ ಮನೆಯೊಳಗೆ ಜಿಗಿದು, ಪುಟ್ಟ ಹುಡುಗಿ ಲೀಡಿಯಾಳನ್ನು ಎತ್ತಿ ಸುರಕ್ಷಿತವಾಗಿ ಹೊರಗೆ ತಂದು ಬಿಟ್ಟರು. ಆತನ ಇಡೀ ದೇಹಕ್ಕೆ ಗಾಯವಾಗಿ, ಮುಖ ಪೂರ್ತಿ ಸುಟ್ಟು ಹೋಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಲೀಡಿಯಾಳ ಪೋಷಕರು ಬೆಂಕಿಯಲ್ಲಿ ಸತ್ತರು.
ದಿನಗಳು ಕಳೆದವು. ಬೆಂಕಿಯಲ್ಲಿ ಸುಟ್ಟು ಸತ್ತುಹೋದ ತಂದೆ ತಾಯಿ ಮತ್ತು ತನ್ನ ಜೀವ ಉಳಿಸಿದ ಜಾನ್ ಅಂಕಲ್ ಬಗ್ಗೆ ಲೀಡಿಯಾ ಅಳುತ್ತಿದ್ದಳು. ಆಕೆಗೆ ಸಾಕಷ್ಟು ಆಸ್ತಿ ಇದ್ದುದರಿಂದ ಅವರ ಸಂಬಂಧಿಕರ ನಡುವೆ ಮಗುವನ್ನು ನಾನು ಬೆಳೆಸುತ್ತೇನೆ ನಾನು ಬೆಳೆಸುತ್ತೇನೆ. ಎಂದು ಪೈಪೋಟಿ ಏರ್ಪಟ್ಟಿತು. ಕೊನೆಗೆ ಅದು ಜಗಳಕ್ಕೆ ತಿರುಗಿ ಪಂಚಾಯತ್ ಮುಖ್ಯಸ್ಥರ ಮೊರೆ ಹೋಗಿತ್ತು. ನಾಯಕ ಎಲ್ಲರನ್ನು ಮನೆ ಮುಂದೆ ನಿಲ್ಲಿಸಿ ಈ ಹುಡುಗಿಯ ಹತ್ತಿರದ ಸಂಬಂಧಿ ಯಾರು ಎಂದು ಕೇಳಿದರು, ಆಗ ನಾನೇ ನಾನು... ನಾನು ಬೆಳೆಸುತ್ತೇನೆ ಎಂದು ದೊಡ್ಡ ಧ್ವನಿಯಲ್ಲಿ ಕೂಗಿದರು. ಈ ಜೋರಾದ ಶಬ್ದಕ್ಕೆ ಪಕ್ಕದಲ್ಲಿ ಮೆಲ್ಲನೆಯ ಧ್ವನಿ ಕೇಳಿಸಿತು ನಾನು ಮಗುವನ್ನು ಬೆಳೆಸುತ್ತೇನೆ ಎಂದು. ಎಲ್ಲರೂ ಹಿಂತಿರುಗಿ ನೋಡಿದಾಗ ಸುಟ್ಟ ಗಾಯಗಳೊಂದಿಗೆ, ಘೋರವಾದ ಮುಖದೊಂದಿಗೆ ಜಾನ್ ನಿಂತಿದ್ದರು. ಪಂಚಾಯತ್ ನಾಯಕನು ನೀನು ಯಾರೊಂದಿಗೆ ಹೋಗುತ್ತೀಯ ಎಂದು ಮಗುವನ್ನು ಕೇಳಿದರು. ಕೂಡಲೇ ಆ ಪುಟ್ಟ ಹುಡುಗಿ ಪಟ್ ಅಂತ, ತನ್ನ ಜೀವವನ್ನೂ ಲೆಕ್ಕಿಸದೇ ನನ್ನ ಪ್ರಾಣವನ್ನು ಕಾಪಾಡಿದ ಜಾನ್ ಅಂಕಲ್ ಜೊತೆ ಹೋಗುತ್ತೇನೆ ಎಂದು ಹೇಳುತ್ತಾ ಓಡಿ ಹೋಗಿ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ತಬ್ಬಿಕೊಂಡು ಮುತ್ತಿಟ್ಟಳು. ಆ ನಾಯಕನು ಸಹ ಅವರೊಂದಿಗೆ ಮಗುವನ್ನು ಕಳುಹಿಸಿ ಬಿಟ್ಟರು.
ಪ್ರೀತಿಯ ಪುಟ್ಟ ತಮ್ಮ ತಂಗಿ ಹೇಗೆ ಈ ಜಾನ್ ಅಂಕಲ್ ಯಾವುದೇ ರೀತಿಯ ನಿರೀಕ್ಷೆ ಇಲ್ಲದೆ ತನ್ನ ಪ್ರಾಣ ಹೋದರೂ ಪರವಾಗಿಲ್ಲ ಎಂದು ಭಾವಿಸಿ ಆ ಮಗುವನ್ನು ಕಾಪಾಡಿದರೋ, ಹಾಗೆಯೇ ನಮ್ಮ ಯೇಸಪ್ಪನಿಗೂ ಕೂಡ ವಿದ್ಯೆ, ಪದವಿ, ಸೌಂದರ್ಯ, ಅಂತಸ್ತು ಇದ್ಯಾವುದೂ ಬೇಕಾಗಿಲ್ಲ. ನಾವು ಹೇಗಿದ್ದರೂ, ಯಾರಾಗಿದ್ದರೂ ಅವರು ಪ್ರೀತಿಸುತ್ತಾರೆ. ಆಪತ್ಕಾಲದಲ್ಲಿ ಓಡಿ ಬಂದು ಸಹಾಯ ಮಾಡುತ್ತಾರೆ.
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482