Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.06.2023
Share:

By Village Missionary Movement

Saturday, 10-Jun-2023

ಧೈನಂದಿನ ಧ್ಯಾನ(Kannada) – 10.06.2023

 

ಯಾವಾಗಲೂ ಪ್ರಾರ್ಥಿಸಿರಿ

 

"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ…" - ಲೂಕ 18:1

 

ದಣಿದವರಿಗೆ ದೇವರು ಶಕ್ತಿಯನ್ನು ಕೊಡುತ್ತಾರೆ. ದೇವರು ದಣಿದ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದಾರೆ. ಎಲೀಯನಿಗೆ ಹೇಳುತ್ತಾರೆ, "ಬಾಳನ ಮುಂದೆ ಬೊಗ್ಗದ 7,000 ಜನರನ್ನು ನಾನು ಉಳಿಸುತ್ತಿದ್ದೇನೆ" ಎಂದು, ಎಲೀಯನ ಮೇಲಿರುವ ಯೋಜನೆಯನ್ನೂ ಹೇಳಿದರು. ಎಲೀಯ ಆಯಾಸವನ್ನು ತೊರೆದು ಬಲಹೊಂದಿ ದೇವರ ಯೋಜನೆಯನ್ನು ಮಾಡಲು ಮುಂಬರುತ್ತಾರೆ. ದೇವರು ಯೋನನೊಡನೆಯೂ ಮಾತಾಡಿದರು. ಅವರ ದಣಿವು ನೀಗಿದರ ಕುರಿತು ನಮಗೆ ಗೊತ್ತಿಲ್ಲ. ಹೌದು, ದೇವರ ಮಕ್ಕಳೇ, ನಾವು ಕೂಡ ದಣಿಯುವಾಗೆಲ್ಲಾ ದೇವರು ತಮ್ಮ ವಾಕ್ಯದ ಮೂಲಕ ದೇವರ ಮಕ್ಕಳ ಮೂಲಕ ನಮ್ಮೊಂದಿಗೆ ಮಾತನಾಡುತ್ತಾರೆ. ಅದಕ್ಕೆ ನಾವು ಕಿವಿಗೊಡುವಾಗ ದೇವರ ಶಕ್ತಿಯಿಂದ ತುಂಬಿಸಲ್ಪಟ್ಟು ದೇವರಿಗಾಗಿ ಕಾರ್ಯ ಮಾಡಲು ಪ್ರಾರಂಭಿಸಿಬಿಡುತ್ತೇವೆ.

 

ಅನೇಕ ಬಾರಿ ನಾವು ಪ್ರಾರ್ಥನೆಯಲ್ಲಿ ಆಯಾಸಗೊಳ್ಳುತ್ತೇವೆ. ಲೆಂಟ್ ದಿನಗಳಲ್ಲಿ ಹೆಚ್ಚು ಪ್ರಾರ್ಥಿಸುತ್ತೇವೆ, ಉಪವಾಸ ಮಾಡುತ್ತೇವೆ ಮತ್ತು ಆಲಯಕ್ಕೆ ಹೋಗುತ್ತೇವೆ. 40 ದಿನಗಳು ಪೂರ್ಣಗೊಂಡ ನಂತರ, ಇವೆಲ್ಲವೂ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಒಂದು ರೀತಿಯ ತೃಪ್ತಿ. 40 ದಿನಗಳ ಕಾಲ ಪ್ರಾರ್ಥನೆ ಮಾಡಿದ ನಂತರ ನಾವು ಏನನ್ನಾದರೂ ಸಾಧಿಸಿದ್ದೇವೆ ಎಂದು ನಮಗೆ ಅನಿಸುತ್ತದೆ. ಆದರೆ ಮನುಷ್ಯಕುಮಾರನ ಮುಂದೆ ನಿಲ್ಲಲು ಅರ್ಹರಾಗಲು, ನಾವು ಯಾವಾಗಲೂ ಪ್ರಾರ್ಥಿಸುತ್ತಿರಬೇಕು ಎಂದು ಹೇಳುತ್ತಾರೆ. ನಮ್ಮ ಓಟವು ಮುಗಿಯುವವರೆಗೂ ಪ್ರಾರ್ಥಿಸಬೇಕು.

 

ಪ್ರಾರ್ಥನೆಯಲ್ಲಿ ಆಯಾಸ ಬರುತ್ತದೆ ಎಂಬುದರಿಂದಲೇ “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸಿರಿ” ಎಂದು ಸತ್ಯವೇದವು ನಮಗೆ ಸಲಹೆ ನೀಡುತ್ತಿದೆ. ನಮ್ಮ ಪ್ರಾರ್ಥನೆಗೆ ಉತ್ತರವು ತಡವಾದಾಗ, ನಾವು ಕೆಲವು ಒಳ್ಳೆಯದಕ್ಕಾಗಿ ವರ್ಷಾನುಗಟ್ಟಲೆ ಕಾಯುತ್ತಿರುವಾಗ, ದೇವರ ಎಲ್ಲಾ ವಾಗ್ದಾನಗಳು ಮೌನವಾಗಿರುವಾಗ. . . ನಮ್ಮ ಆಯಾಸ ಹೆಚ್ಚಾಗುತ್ತದೆ. ಆದರೆ ಇಂದಿನ ಸತ್ತವೇದದ ವಾಕ್ಯದ ಮೂಲಕ ದೇವರು ಹೇಳುತ್ತಿರುವ ಕಾರ್ಯ "ಪ್ರಾರ್ಥನೆಯಲ್ಲಿ ಒಂದು ದಿನವೂ ಆಯಾಸಪಡಬೇಡಿರಿ. ನಿನ್ನ ಪ್ರಾರ್ಥನೆಗೆ ಖಂಡಿತವಾಗಿಯೂ ಉತ್ತರವಿದೆ ತಕ್ಕ ಸಮಯದಲ್ಲಿ ನಾನು ಉತ್ತರಿಸುತ್ತೇನೆ.

 

ಇದನ್ನು ಓದುತ್ತಿರುವ ಪ್ರಿಯರೇ! ನೀವು ತುಂಬಾ ದಣಿದಿದ್ದೀರಾ ಮತ್ತು ಪ್ರಾರ್ಥನೆಯನ್ನು ನಿಲ್ಲಿಸಲು ಸಿದ್ಧರಿದ್ದೀರಾ? "ಇಲ್ಲ" ನನ್ನ ಪ್ರಾರ್ಥನೆ ಕೇಳಲ್ಪಡಲಿಲ್ಲ ಎಂದು ಅಪನಂಬಿಕೆಯಿಂದ ಬೇಸರವಾಗಿದ್ದೀರಾ? ಇದರ ಮೂಲಕ ದೇವರು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನೀವು ಯಾವಾಗಲೂ ಪ್ರಾರ್ಥಿಸುತ್ತಲೇ ಇರಬೇಕೆಂಬುದು ಅವರ ಬಯಕೆ. ನೀವು ಕೇಳುವ ಕಾರ್ಯಗಳು ಸರ್ವಶಕ್ತನ ಮುಂದೆ ಸಾಮಾನ್ಯವಾದದ್ದು. ತಕ್ಕ ಸಮಯ ಬರುವಾಗ ತನ್ನ ಚಿತ್ತದಂತೆ ನಡೆಸುತ್ತಾರೆ. ಅವರ ಚಿತ್ತ ಯಾವಾಗಲೂ ದೊಡ್ಡದಾಗಿಯೂ, ಒಳ್ಳೇದಾಗಿಯೂ ಇರುತ್ತದೆ. ಇಂದು ಎಡೆಬಿಡದೆ ಯಾವಾಗಲೂ ಪ್ರಾರ್ಥಿಸಲು ತೀರ್ಮಾನಿಸೋಣ. ಕಾರ್ಯಮಾಡೋಣ.

- Mrs.ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಸ್ವಸ್ಥತೆಯನ್ನು ಉಂಟುಮಾಡುವ ಆರಾಧನೆಯ ನೇರಪ್ರಸಾರದ ಮೂಲಕ ಅನೇಕ ಅದ್ಭುತ ಅತಿಶಯಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş