By Village Missionary Movement
Friday, 09-Jun-2023ಧೈನಂದಿನ ಧ್ಯಾನ(Kannada) – 09.06.2023
ವಿಶ್ರಾಂತಿ ಇಲ್ಲಿಲ್ಲ
"ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದು ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದು ಹೋರಾಡುತ್ತೇನೆ" – 1 ಕೊರಿಂಥ 9:26
ಯಾರೂ ಸಾಧಕರಾಗಿಯೇ ಹುಟ್ಟುವುದಿಲ್ಲ. ಆದರೆ ಈ ಜಗತ್ತಿನಲ್ಲಿ ಸಾಧಕರಾದವರು ಅನೇಕರಿದ್ದಾರೆ. ಮೇಘದಂತಹ ಹೇರಳವಾದ ಸಾಕ್ಷಿಗಳು ನಮ್ಮನ್ನು ಸುತ್ತುವರೆದಿವೆ, ಇಂದು ಅದರಲ್ಲಿ ಒಂದು ಸಾಕ್ಷಿಯನ್ನು ಮಾತ್ರವೇ ನೋಡಲಿದ್ದೇವೆ. ಅವರೇ ಹೆನ್ರಿ ಫ್ರಾನ್ಸಿಸ್. ಅವರಿಗೆ ವೈದ್ಯಕೀಯ ಶಿಕ್ಷಣವನ್ನು ಓದಬೇಕೆಂಬ ಬಯಕೆ ಇದ್ದರೂ, ದೇವರ ಕರೆಯುವಿಕೆಯನ್ನು ಗ್ರಹಿಸಿ ಬೈಬಲ್ ಕಾಲೇಜಿನಲ್ಲಿ ಓದಿದರು. "ನನ್ನೊಂದಿಗಿರಿ, ನನ್ನ ಪ್ರಿಯ ಕರ್ತನೇ..." ಎಂಬ ಹಾಡನ್ನು ರಚಿಸಿದವರು ಅವರೇ. ಕಾಲವೆಲ್ಲಾ ಕ್ಷಯರೋಗದ ಪರಿಣಾಮಗಳಿಂದ ಬಳಲುತ್ತಿದ್ದರೂ, ಅವರು ತಮ್ಮ ಜೀವನದುದ್ದಕ್ಕೂ ನಂಬಿಕೆ ಮತ್ತು ಆತ್ಮದಲ್ಲಿ ಹೆಚ್ಚಿನ ದೃಢತೆಯಿಂದ ದೇವರಿಗೆ ಅರ್ಪಿಸಿಕೊಂಡರು. ಅವರ ತುಟಿಗಳಿಂದ ಆಗಾಗ್ಗೆ ಉಚ್ಚರಿಸುವ ಒಂದು ಮಾತು "ಲೋಕಕ್ಕಾಗಿ ತುಕ್ಕು ಹಿಡಿದು ಕೆಟ್ಟು ನಾಶವಾಗುವುದಕ್ಕಿಂತ ದೇವರ ಕೆಲಸವನ್ನು ಮಾಡುತ್ತಾ ದಣಿದಿರುವುದು ಉತ್ತಮ". ಈ ಮಾತು ನಮಗೆ ಉತ್ತೇಜನ ನೀಡುತ್ತಿದೆ ಅಲ್ವಾ?
ಅಪೊಸ್ತಲನಾದ ಪೌಲನ ಜೀವನದಲ್ಲಿಯೂ ಬಲಹೀನತೆಗಳಿದ್ದವು. ಅದ್ಯಾವುದನ್ನೂ ಲೆಕ್ಕಿಸದೆ ದೇವರ ಕೃಪೆಯನ್ನಾಧರಿಸಿ ಹಲವು ಬಾರಿ ಹಡಗಿನ ಪ್ರಯಾಣ ಮಾಡಿ, ಪ್ರಯಾಸ, ಹಸಿವು, ಬಾಯಾರಿಕೆ, ಅನೇಕ ಬಾರಿ ನಿದ್ದೆಗೆಡುವುದು, ಹಸಿವು ಉಪವಾಸ, ಚಳಿ ಹೀಗೆ ಅವರ ಯಾತನೆಗಳ ಪಟ್ಟಿ ಬಹಳ ದೊಡ್ಡದಾಗಿರುತ್ತದೆ. ಅವರು ಕ್ರಿಸ್ತನಿಗಾಗಿ ಓಡಿದಂತಹ ಓಟವು ದೊಡ್ಡದು. ತನ್ನ ಜೀವ ಅವರಿಂದ ಬೇರ್ಪಡುವವರೆಗೂ ಕ್ರಿಸ್ತನಿಗಾಗಿ ಓಡುವುದನ್ನು ಸತತವಾಗಿ ಮುಂದುವರೆಸಿದರು. ಯೇಸುವಿನ ಪ್ರೀತಿ ಅವರನ್ನು ಹತ್ತಿರಕ್ಕೆ ಸೆಳೆದುಕೊಂಡಿತು. ತನಗೆ ವಿಶ್ರಾಂತಿಯು ಭೂಮಿಯ ಮೇಲೆ ಇಲ್ಲ ಎಂದು ಅರಿತುಕೊಂಡು, ಪರಲೋಕದ ಕರೆಯುವಿಕೆಯ ಓಟ ಪಂದ್ಯದಲ್ಲಿ ಗೆಲ್ಲುವವರೆಗೂ ಅವರು ಕುಳಿತುಕೊಳ್ಳಲೇ ಇಲ್ಲ.
ಹೌದು, ನನ್ನ ಪ್ರಿಯರೇ, ತಮ್ಮ ದೈಹಿಕ ಬಲಹೀನತೆಗಳ ನಡುವೆಯೂ ದಣಿವರಿಯಿಲ್ಲದೆ ಕರ್ತನಿಗಾಗಿ ಓಡಿದಂತಹ ಹೆನ್ರಿ ಮತ್ತು ಪೌಲ ಇವರಂತಹ ದೇವರ ಮಕ್ಕಳ ಜೀವನವು ನಮಗೆ ಒಂದೇ ಒಂದು ವಿಷಯವನ್ನು ಕಲಿಸುತ್ತಿದೆ. ವಿಶ್ರಾಂತಿ ತೆಗೆದುಕೊಳ್ಳಬೇಡಿ. ದೇವರಿಗಾಗಿ ಏನಾದರೂ ಮಾಡಿ ಎಂದು! ಇದನ್ನು ಚೆನ್ನಾಗಿ ಅರಿತಿದ್ದ ಪೌಲನು ಕೂಡ, "ಗುರಿಗೊತ್ತಿಲ್ಲದವನಾಗಿ ಓಡದೆ" (1 ಕೊರಿಂ. 9:26) ಎಂದು ಹೇಳಿ ತನ್ನ ಓಟವನ್ನು ವಿಜಯಶಾಲಿಯಾಗಿ ಓಡಿ ಮುಗಿಸಿದರು. "ನಮ್ಮ ವಿಶ್ರಾಂತಿ ಸ್ವರ್ಗದಲ್ಲಿದೆ, ಇಲ್ಲಿ ಇಲ್ಲ" ನಿಮ್ಮ ಅರಿಕೆ ಏನು?
ಪ್ರಾರ್ಥನಾ ಅಂಶ:
ತಮಿಳುನಾಡಿನಲ್ಲಿ ನಮ್ಮ ಸೇವೆಯ ಮೂಲಕ ಅಗತ್ಯವಿರುವ ಸಾವಿರ ಸ್ಥಳಗಳಲ್ಲಿ ಸಾವಿರ ಸಭೆಗಳು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482