Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.06.2023
Share:

By Village Missionary Movement

Thursday, 08-Jun-2023

ಧೈನಂದಿನ ಧ್ಯಾನ(Kannada) – 08.06.2023

 

ಗೋಡೆಯ ಮೇಲೆ ಬರೆದ ಕೈಬೆರಳುಗಳು

 

"ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು;..." - ದಾನಿಯೇಲ 5:5

 

ಇಂದಿನ ಸತ್ಯವೇದ ಭಾಗದಲ್ಲಿ ಗೋಡೆಯ ಮೇಲೆ ಬೆರಳುಗಳಿಂದ ಬರೆದದ್ದನ್ನು ಬೆಲ್ಯಚ್ಚರನೆಂಬ ಅರಸನು ನೋಡಿದಾಗ ಕಳೆಗುಂದಿದನು. ಅವನ ಕಾಲುಗಳು ನಡುಗುತ್ತಿದ್ದವು. ಸಾವಿರಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಿದ್ದರು. ಬರಹವನ್ನು ಎಲ್ಲರೂ ನೋಡುವಂತೆ ಬರೆಯಲಾಗಿತ್ತು. ಎಂದಿನಂತೆ ಜ್ಯೋತಿಷ್ಯರನ್ನೂ, ಶಕುನರನ್ನೂ, ಜ್ಞಾನಿಗಳನ್ನೂ, ಕರೆಸಲಾಯಿತು. ಅರ್ಥವನ್ನು ಹೇಳುವಂತೆ ಕೇಳಿದರು. ಆದರೆ ಯಾರೂ ಬರಹವನ್ನು ಓದಲು ಮತ್ತು ಅರ್ಥವನ್ನು ಹೇಳಲು ಸಾಧ್ಯವಾಗಲಿಲ್ಲ.

 

ದಾನಿಯೇಲನನ್ನು ಕರೆಸಲಾಯಿತು. ಆಗ ಈ ಬರಹವನ್ನು ಏಕೆ ಬರೆಯಲಾಯಿತು? ಅದರರ್ಥ ಏನು? ಎಂದು ವಿವರಿಸಿದರು. ಈ ಬೆರಳಿನ ಬರಹವನ್ನು ದೇವರು ಕಳುಹಿಸಿದ ಕಿರು ಸಂದೇಶ (S.M.S) ಎಂದು ಕರೆಯಬಹುದು. ಮೆನೇ ಮೆನೇ ತೇಕಲ್‌ ಉಫ ರ್ಸಿನ್‌, ಎಂಬ ನಾಲ್ಕೇ ಪದಗಳನ್ನು ಬರೆಯಲಾಗಿತ್ತು. ಅದರಲ್ಲಿ ಮೆನೇ, ಮೆನೇ ಎಂದು ಎರಡು ಬಾರಿ ಬರೆಯಲಾಗಿತ್ತು. ಬರೆಯಲು ಕಾರಣಗಳೇನು? ಮೊದಲನೆಯದಾಗಿ, ಇದೆಲ್ಲವನ್ನು ತಿಳಿದಿದ್ದರೂ, ಅವರು ತನ್ನ ಹೃದಯವನ್ನು ತಗ್ಗಿಸಲಿಲ್ಲ ಮತ್ತು ಪರಲೋಕದ ಕರ್ತನಿಗೆ ವಿರುದ್ಧವಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡರು. ಎರಡನೆಯದಾಗಿ, ಅವರು ದೇವರಿಗೆ ಸಲ್ಲಬೇಕಾದ ಗೌರವ ಮತ್ತು ಮರ್ಯಾದೆಯನ್ನು ನೀಡದೆ ದೇವರ ದೇವಾಲಯದ ವಸ್ತುಗಳನ್ನು ಹೀನವಾಗಿ ಬಳಸಿದರು. ಅರಸನನ್ನು ತಕ್ಕಡಿಯಲ್ಲಿ ನಿಲ್ಲಿಸಿದಾಗ ಕೊರತೆಯಾಗಿ ಕಾಣಲ್ಪಟ್ಟನು.

 

ಹೌದು, ಇದೇ ದೇವರು ಇಂದು ನಿನ್ನನ್ನೂ ನನ್ನನ್ನೂ ನೋಡುತ್ತಿದ್ದಾರೆ. ಅವರು ನಮ್ಮ ಎಲ್ಲಾ ಆಲೋಚನೆಗಳು, ಕಾರ್ಯಗಳು ಮತ್ತು ಉದ್ದೇಶಗಳನ್ನು ನಿಲ್ಲಿಸಿ ನೋಡುತ್ತಾರೆ. ಅಹಂಕಾರವು ಯಾವಾಗಲೂ ದೇವರಿಗೆ ವಿರುದ್ಧವಾದದ್ದು. ತಾಳ್ಮೆಯಿಂದಿದ್ದೇವೆ ಅನ್ನುವುದಾದರೆ ಇಂದೇ ಯೋಚಿಸೋಣ. ನಮಗೆ ಮೆನೇ, ಮೆನೇ ತೇಕಲ್‌ ಉಫ ರ್ಸಿನ್‌, ಎಂಬ S.M.S ಬಂದಿದೆಯೇ ಎಂದು ಪರಿಶೀಲಿಸೋಣ. ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳೋಣ. ಆಗ ಆತನು ನಮ್ಮನ್ನು ಹೆಚ್ಚಿಸುತ್ತಾರೆ.

 

ಪ್ರಾರ್ಥನಾ ಅಂಶ:

ಟ್ಯೂಷನ್ ಸೆಂಟರ್ ಸೇವೆಗಳ ಮೂಲಕ ಭೇಟಿಯಾದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet