Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.06.2023
Share:

By Village Missionary Movement

Wednesday, 07-Jun-2023

ಧೈನಂದಿನ ಧ್ಯಾನ(Kannada) – 07.06.2023

 

ಸತತ ಪ್ರಯತ್ನ

 

"ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ..." - 2 ಕೊರಿಂಥ. 2:14 

 

ಒಮ್ಮೆ ಒಂದು ಟಿ. ಶರ್ಟ್ ತೆಗೆದುಕೊಳ್ಳಲು ಹಲವಾರು ಅಂಗಡಿಗಳನ್ನು ಹತ್ತಿ ಇಳಿದ ನನಗೆ ನಿರೀಕ್ಷಿಸಿದ ರೀತಿಯಲ್ಲಿ ಸಿಗಲಿಲ್ಲ. ಪ್ರತಿ ಅಂಗಡಿಯವರು ನೀನು ಕೇಳುವ ರೀತಿ ಸಿಗೋದಿಲ್ಲ. ಈಗ ಎಲ್ಲಾ ಕಡೆ ಇದೇ ರೀತಿ ಸಿಗುತ್ತೆ ಎಂದರು. ಹಾಗಾಗಿ ಅವರು ತೋರಿದ ರೀತಿ ತೆಗೆದುಕೊಳ್ಳುವುದು ಹೊರತು ಬೇರೆ ದಾರಿಯಿಲ್ಲ ಎಂದು ನಾನು ಭಾವಿಸಿದೆ. ಆದರೂ ಇನ್ನೂ ಕೆಲವು ಅಂಗಡಿಗಳಲ್ಲಿ ವಿಚಾರಿಸಲು ಬಯಸಿದೆ. ಅಂತಿಮವಾಗಿ ನಾನು ಬಯಸಿದ ಟಿ ಶರ್ಟ್ ಒಂದು ಅಂಗಡಿಯಲ್ಲಿ ಸಿಕ್ಕಿತು. ಇದೊಂದು ಸಾಮಾನ್ಯವಾದ ವಿಷಯವಾಗಿರಬಹುದು.

 

ಗೆಲುವನ್ನು ನಿರೀಕ್ಷಿಸುತ್ತಾ ಮುನ್ನಡೆಯುತ್ತಿರುವ ನಮಗೆ ಸಾಕಷ್ಟು ಮಟ್ಟದಲ್ಲಿ ಸೋಲುಗಳೇ ಎದುರಾಗುತ್ತಿದೆ. ಮೋಶೆ ಗೆಲುವನ್ನು ನಿರೀಕ್ಷಿಸುತ್ತಾ ಫರೋಹನ ಬಳಿಗೆ ಹೋದಾಗ, ಅವರಿಗೆ 9 ಬಾರಿ ಸೋಲೇ ಎದುರಾಯಿತು. ಆದರೆ ದೇವರು ಮೋಶೆಗೆ ಮತ್ತೆ ಮತ್ತೆ ಹೋಗಲು ಪ್ರೇರೇಪಿಸಿದರು. ಕೊನೆಗೆ 10 ನೇ ಬಾರಿ ಜಯ ಉಂಟಾಯಿತು. ದೇವರು ಮೋಶೆಯ ಮೂಲಕ ಇಡೀ ಇಸ್ರಾಯೇಲ್ ಸಮೂಹಕ್ಕೆ ಜಯವನ್ನು ಕೊಟ್ಟರು. ಅಬ್ರಹಾಂ ಲಿಂಕನ್ ಅಮೆರಿಕನ್ ಇತಿಹಾಸದಲ್ಲಿ ಬಹಳ ಮುಖ್ಯವಾದವರು. ಆದರೆ ಅವರು ತನ್ನ ಜೀವನದ ಹಾದಿಯಲ್ಲಿ ಮತ್ತೆ ಮತ್ತೆ ಸೋಲನ್ನು ಮಾತ್ರವೇ ಅನುಭವಿಸಿದರು. ಆದಾಗ್ಯೂ, ಅಬ್ರಹಾಂ ಲಿಂಕನ್ "ಇನ್ನು ಮುಂದೆ ಅವಕಾಶವಿಲ್ಲ" ಎಂದು ನಿಂತು ಬಿಡಲಿಲ್ಲ. ಕೊನೆಗೆ, ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರಾಗಿ ಹೆಚ್ಚಿಸಲ್ಪಟ್ಟರು.

 

ನಮ್ಮ ಜೀವನದ ಮಾರ್ಗದಲ್ಲಿ ನಾವು ಎಷ್ಟೋ ಸೋಲುಗಳನ್ನು ಭೇಟಿಯಾಗಿರಬಹುದು. ಇಸ್ರಾಯೇಲ್ಯರ ಹಾಗೆ ಸೋತು ಹೋಗಿ ಜೀವಿಸುತ್ತಿರಬಹುದು. ಉನ್ನತ ಶಿಕ್ಷಣದ ಪರೀಕ್ಷೆಯ ಫಲಿತಾಂಶಗಳನ್ನು ನಿರೀಕ್ಷಿಸುತ್ತಾ ಕಾದಿರುವ ಸಹೋದರ, ಸಹೋದರಿಯರೇ, ನಾನು ನಿರೀಕ್ಷಿಸುತ್ತಿರುವ ಉತ್ತಮ ಅಂಕಗಳು ಸಿಗುತ್ತದಾ? ಇಲ್ಲವಾ? ಎಂದು ಪ್ರಲಾಪಿಸುತ್ತಿದ್ದೀಯ? ಇನ್ನು ಜಯವೇ ಇಲ್ಲ ಎಂದು ನೀನು ತೀರ್ಮಾನಿಸಿ ಸುಮ್ಮನಾಗಿಬಿಡಬಾರದು. ಜಯ ಸಿಗುವವರೆಗೂ ಮೋಶೆಯಂತೆ, ಅಬ್ರಹಾಂ ಲಿಂಕನ್ ಹಾಗೆ ಬಿಡದೇ ಸತತವಾಗಿ ಪ್ರಯತ್ನಿಸುತ್ತಿರಬೇಕು. ದೇವರ ಮೇಲೆ ಅವಲಂಬಿತವಾಗಿ ದೇವರ ವಾಗ್ಧಾನಗಳನ್ನು ಹಿಡಿದುಕೊಂಡು ಹೋರಾಡಿರಿ. ಯಶಸ್ಸು ಖಚಿತ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ: 

ಟ್ಯೂಷನ್ ಸೆಂಟರ್ ಸೇವೆಯಲ್ಲಿ ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ ಟ್ಯೂಷನ್ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza tlcasino amgbahis holiganbet wbahis casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş superbetin superbetin superbetin giriş marsbahis marsbahis giriş