Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.06.2023
Share:

By Village Missionary Movement

Monday, 05-Jun-2023

ಧೈನಂದಿನ ಧ್ಯಾನ(Kannada) – 06.06.2023

 

ಕಲಾತ್ಮಕ ದೇವರು

 

"ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ” - ಜ್ಞಾನೋಕ್ತಿ. 3:11

 

ನಮ್ಮ ಭಾರತವು ಶಿಲ್ಪಕಲೆಗೆ ಪ್ರಸಿದ್ಧವಾಗಿದೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಶಿಲ್ಪಕಲೆಗಳನ್ನು ಕಾಣಬಹುದು. ಸಾಕಷ್ಟು ಪ್ರವಾಸಿ ತಾಣಗಳಿವೆ. ತಮಿಳುನಾಡಿನ ಮಹಾಬಲಿಪುರಂ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಉತ್ತರ ಭಾರತದ ಅಜಂತಾ ಎಲ್ಲೋರಾ ಗುಹೆಗಳು ಬಹಳ ವಿಶೇಷವಾದವು. ವಿಶ್ವದ ಅತಿ ಎತ್ತರದ ಶಿಲ್ಪ ಚೀನಾದಲ್ಲಿದೆ. ಇದರ ಎತ್ತರ 420 ಅಡಿ. ಶಿಲ್ಪ ಪ್ರತಿಷ್ಠಾಪನೆಗಾಗಿ 66 ಅಡಿ ಕಮಲದಂತಹ ಸಿಂಹಾಸನವನ್ನು ನಿರ್ಮಿಸಲಾಗಿದೆ. ಶಿಲ್ಪ ಇರುವ ಕಟ್ಟಡದ ಎತ್ತರವನ್ನು ಸೇರಿಸಿದರೆ ಒಟ್ಟು ಎತ್ತರ 502 ಅಡಿ. ಈ ಶಿಲ್ಪವನ್ನು ಹಿತ್ತಾಳೆಯ ಲೋಹದಿಂದ ಮಾಡಲಾಗಿದೆ. ಇದರ ಮೌಲ್ಯ 90 ಕೋಟಿ ರೂ. ಶಿಲ್ಪಗಳಲ್ಲಿ ಹಲವು ವಿಧಗಳಿವೆ ಮತ್ತು ಶಿಲ್ಪಿಗಳೂ ಇದ್ದಾರೆ.

 

ನಮ್ಮ ಯೇಸುವನ್ನು ಒಂದು ರೀತಿಯ ಶ್ರೇಷ್ಠ ಶಿಲ್ಪಿ ಎಂದು ವರ್ಣಿಸಬಹುದು. ಅವರು ಪಾಪಿಯಾಗಿರುವ ಮನುಷ್ಯನನ್ನು ತೆಗೆದುಕೊಂಡು ಅವನು ಪರಲೋಕದ ಮಹಿಮೆಯನ್ನು ಪ್ರತಿಬಿಂಬಿಸುವ ವ್ಯಕ್ತಿಯಾಗಿ ಕೆತ್ತುವಲ್ಲಿ ಆತನು ಶಕ್ತನಾಗಿದ್ದಾನೆ. ಸಮಾಜದಲ್ಲಿ ಯಾರನ್ನು ಕುರೂಪಿ ಎಂದು ದೂರವಿಡುತ್ತೇವೆಯೋ ಅವರನ್ನೂ ಸಹ ಸುಂದರರನ್ನಾಗಿ ಮಾಡಿದ ಇತಿಹಾಸ ಅವರದು. ಜಗತ್ತಿನ ಯಾವ ಶಿಲ್ಪಿಯೂ ಇದನ್ನು ಮಾಡಲು ಸಾಧ್ಯವಿಲ್ಲ. ಅವರು ಪೇತ್ರನಲ್ಲಿ ಕಂಡುಬರುವ ತಿರಸ್ಕರಿಸುವ ಗುಣವನ್ನು ಕೆತ್ತಿ ಅವರನ್ನು ಶ್ರೇಷ್ಠ ಬೋಧಕನನ್ನಾಗಿ ಮಾರ್ಪಡಿಸಿದರು. ಪೌಲನು, ಮಗ್ಧಲದ ಮರಿಯಳು, ಯಾಕೋಬನಂತಹ ಹಲವರ ಜೀವನವು ದೇವರಿಂದ ಕೆತ್ತಲ್ಪಟ್ಟು ಪರಲೋಕ ಗುಣವನ್ನು ಪಡೆದ ಚರಿತ್ರೆಗಳು ನಮಗೆ ಗೊತ್ತಿರುವಂಥದ್ದೇ.

 

ಕಲಾತ್ಮಕನಾದ ಯೇಸು ನಿಮ್ಮನ್ನೂ ಶಿಲ್ಪವಾಗಿ ಕೆತ್ತಿ, ಉಪಯುಕ್ತವಾದ, ಶಿಲ್ಪವಾಗಿ ಮಾರ್ಪಡಿಸಲು ಸಿದ್ಧವಾಗಿದ್ದಾರೆ. ನಿಮ್ಮನ್ನು ಅವರ ಕೈಗಳಲ್ಲಿ ಬಿಟ್ಟು ಕೊಟ್ಟರೆ ಸಾಕು. ಮಾತನಾಡಲು ತಿಳಿಯದ ಮಂದ ನಾಲಿಗೆಯ ಮೋಶೆಯನ್ನು ರೂಪಿಸಿ ಕೋಟ್ಯಂತರ ಜನರನ್ನು ಮುನ್ನಡೆಸಲು ಆತನನ್ನು ಬಳಸಿದಂತೆಯೇ ಅವರು ನಿಮ್ಮನ್ನೂ ಉಪಯೋಗಿಸಲು ಶಕ್ತನಾಗಿದ್ದಾರೆ. ಭಯಭೀತನಾದ ಗಿದ್ಯೋನನನ್ನು ನ್ಯಾಯಸ್ಥಾಪಕನಾಗಿ ಮಾಡಿದ ಕರ್ತನು ನಿಮ್ಮ ಭಯವನ್ನೂ ಹೋಗಲಾಡಿಸಿ ಇತರರನ್ನು ಮುನ್ನಡೆಸುವ ಸಾಮರ್ಥ್ಯವನ್ನು ಮತ್ತು ಅಭಿಷೇಕವನ್ನು ನೀಡಲು ಸಾಧ್ಯ. ಅವರ ಬಯಕೆಯಂತೆ ನಿಮ್ಮನ್ನು ಕೆತ್ತಲು ಬಿಡಿ. ಅನಗತ್ಯ ಕಾರ್ಯಗಳು, ಕೆಟ್ಟ ಕಾರ್ಯಗಳನ್ನು ಕೆತ್ತಿ ಅವರ ಚಿತ್ತವನ್ನು ಮಾಡುವ ಪಾತ್ರೆಯಾಗಿ ನಿಮ್ಮನ್ನು ರೂಪಿಸುತ್ತಾರೆ. ಆಮೆನ್.

- T. ರಾಜನ್

 

ಪ್ರಾರ್ಥನಾ ಅಂಶ:

ನಮ್ಮ ಸೇವಾ ಕ್ಷೇತ್ರಗಳಲ್ಲಿ ನಡೆಯುವ ಟ್ಯೂಷನ್ ಕೇಂದ್ರಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel