Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.06.2023
Share:

By Village Missionary Movement

Monday, 05-Jun-2023

ಧೈನಂದಿನ ಧ್ಯಾನ(Kannada) – 05.06.2023

 

ಎಲ್ಲಾ ಯೌವನಸ್ಥರಿಗೂ

 

"ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳು ಹೇಗೋ ಹಾಗೆಯೇ" - ಕೀರ್ತನೆ 127:5

 

ಚರ್ಚ್‌ನ ಯೌವನಸ್ಥರಿಗೆ ಸಂಬಂಧಿಸಿದಂತಹ ಚಲನಚಿತ್ರ ತೋರಿಸುವುದಕ್ಕಾಗಿ ನಾವು ಹಲವಾರು ದಿನಗಳಿಂದ ಪ್ರಾರ್ಥನೆಯೊಂದಿಗೆ ಕಾಯುತ್ತಿದ್ದೆವು. ತೋರಿಸುವಂತಹ ರಾತ್ರಿಯೂ ಬಂತು. ಗ್ರಾಮದ ಎಲ್ಲಾ ಕಡೆಗಳಲ್ಲಿ ಆ ದಿನದ ಜಾಹೀರಾತು ಫಲಕಗಳನ್ನು ಹಾಕಲಾಗಿತ್ತು. ಈ ಚಲನಚಿತ್ರವು ನ್ಯೂಯಾರ್ಕ್‌ನಲ್ಲಿ ಭೀಕರ ಅಪರಾಧಗಳಲ್ಲಿ ಭಾಗಿಯಾಗಿರುವ ಯುವಕರ ಗುಂಪು ಯುವ ಸೇವಕನ ಮೂಲಕ ಯೇಸುವನ್ನು ಹೇಗೆ ಸ್ವೀಕರಿಸಿತು ಎಂಬುದನ್ನು ವಿವರಿಸುವಂತದ್ದಾಗಿತ್ತು. ಅದಲ್ಲದೆ ಅನೇಕ ಯೌವನ ಮಕ್ಕಳು ಚರ್ಚ್‌ನ ಯುವ ಸಮೂಹಕ್ಕೆ ಸೇರಲು ಕಾರಣವಾಗಿರುತ್ತದೆ ಎಂದು ಆ ಚರ್ಚ್ ನ ಯೌವನಸ್ಥರ ಬೋಧಕರಾದ ಸ್ಟೀವ್ ವಿಶ್ವಾಸ ವ್ಯಕ್ತಪಡಿಸಿದರು.

 

ಆದರೆ ಆ ಸಂಜೆ ಅತ್ಯಂತ ಮಹತ್ವದ ಫುಟ್ಬಾಲ್ ಪಂದ್ಯ ಪ್ರಸಾರವಾಗಲಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಹಾಗಾಗಿ ಅಂದು ಅವರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಯೌವನಸ್ಥರು ಬಂದಿದ್ದರು. ಮಂದ ಬೆಳಕಿನ ನಡುವೆ ಸಮಯಕ್ಕೆ ಸರಿಯಾಗಿ ಸಿನಿಮಾ ಪ್ರಸಾರವಾಯಿತು. ಇದ್ದಕ್ಕಿದ್ದಂತೆ ಟಿ ಡಾಗ್ (T Dog) ಎಂಬ ಯುವಕರ ಗುಂಪಿಗೆ ಸೇರಿದ ಐವರು ಯುವಕರು ಆ ಜಾಗಕ್ಕೆ ಬಂದರು. ಅವರಿಗೆ ಯೇಸುವಿನ ಪರಿಚಯವಿರಲಿಲ್ಲ. ಇದು ಕ್ರೈಸ್ತರಿಗೆ ಮಾತ್ರವಾ ಅಥವಾ ಇದನ್ನು ನಾವೂ ನೋಡಬಹುದಾ? ಉಚಿತವೇ ತಾನೇ? ಎಂದು ಕೇಳಿ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಸಿನಿಮಾ ಮುಗಿಯುವವರೆಗೂ ಕುಳಿತು ಸಿನಿಮಾ ನೋಡಿ ಖುಷಿಪಟ್ಟರು. ಬೋಧಕರಾದ ಸ್ಟೀವ್ ರವರಿಗೆ ಸ್ವಲ್ಪ ಸಂಕಟವಾಗಿದ್ದರೂ ಆಹ್ವಾನಿಸದ ಅತಿಥಿಗಳಾಗಿದ್ದ ಅವರನ್ನು ನೋಡಿ ತುಂಬಾ ಸಂತೋಷಪಟ್ಟರು.

 

ಚರ್ಚ್‌ನಲ್ಲಿ ಯೌವನಸ್ಥರ ನಡುವೆ ಮಾಡುವಂತಹ ಸೇವೆಯ ಹಾಗೆಯೇ ಚರ್ಚ್‌ನ ಹೊರಗಿನ ಯೌವನಸ್ಥರಿಗೂ ಸೇವೆ ಮಾಡಲು ಇಂದು ನಾವು ಕರೆಯಲ್ಪಟ್ಟಿದ್ದೇವೆ. ಈ ಹಿಂಡಿಗೆ ಸೇರಿದ ಮೇಕೆಗಳು ಹೊರಗಿವೆ. ಅವು ಕೂಡ ಇಲ್ಲಿಗೆ ಬರಬೇಕೆಂದು ಯೇಸುಕ್ರಿಸ್ತನು ಹೇಳಿರುವುದನ್ನು ನಾವು ಅರಿತಿದ್ದೇವೆ. ಆದುದರಿಂದ, ನಮ್ಮ ದೇವರ ಇಷ್ಟವನ್ನು ತಿಳಿದುಕೊಂಡು, ಕುರಿಗಳನ್ನು ಹಿಂಡಿಗೆ ಸೇರಿಸುವ ಕೆಲಸದಲ್ಲಿ ನಾವು ಸಕ್ರಿಯರಾಗೋಣ!

- Bro.ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಂಪುಗಳನ್ನು ಒಟ್ಟು ಗೂಡಿಸಿ ನಡೆಸುವಂತಹ ಅನೇಕ ದೆಬೋರಗಳು ಎದ್ದೇಳುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş betcio jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet