By Village Missionary Movement
Saturday, 03-Jun-2023ಧೈನಂದಿನ ಧ್ಯಾನ(Kannada) – 04.06.2023 (Kids Special)
ಪೀಟರ್ ಮಾಮ Boat
"ನಿನ್ನ ನೇಮಗಳನ್ನು ಅನುಸರಿಸಿದ್ದರಿಂದ ಇದೆಲ್ಲಾ ನನಗೆ ದೊರಕಿತು” - ಕೀರ್ತನೆ: 119:56
Hai ಪುಟಾಣಿಗಳೇ! ರಜೆಯ ದಿನಗಳಲ್ಲಿ ಚೆನ್ನಾಗಿ Enjoy ಮಾಡುದ್ರಾ? ಕಡಲತೀರಕ್ಕೆ ಹೋಗಿ ಮರಳಿನಲ್ಲಿ ಮನೆಕಟ್ಟಿ ಆಟವಾಡುವುದು, ಪ್ರಾಕೃತಿಕವಾಗಿ ತಂಪು... ತಂಪಾದ ಗಾಳಿ, ಸಾಲುಗಟ್ಟಿ ನಿಂತಿರುವ Boat ಗಳು ನೋಡಲು ಚಂದ. ಬೀಚ್, ಪಾರ್ಕ್ ಹೀಗೆ ಎಲ್ಲ ಸ್ಥಳಗಳಿಗೂ ಹೋಗಿ ಚೆನ್ನಾಗಿ ಎಂಜಾಯ್ ಮಾಡಿರ್ತೀರ. ಹೌದು ತಾನೇ! ಇಂದು Boat ನಲ್ಲಿ ನಡೆದ ಸತ್ಯ ಘಟನೆಯನ್ನು ಕೇಳೋಣ್ವಾ?
Boat ನಲ್ಲಿ ಮೀನು ಹಿಡಿದು ಆ ಮೀನುಗಳನ್ನು ಮಾರಾಟ ಮಾಡಿ ಒಳ್ಳೆಯ ಹಣ ಸಂಪಾದಿಸುತ್ತಿದ್ದರು ಪೀಟರ್ ಮಾಮ. ಒಂದು ದಿನ ರಾತ್ರಿಯಿಡೀ ಎಷ್ಟೇ ಪ್ರಯಾಸಪಟ್ಟರೂ ಒಂದೇ ಒಂದು ಮೀನು ಸಿಗಲಿಲ್ಲ... ಪೀಟರ್ ಅಂಕಲ್ ತುಂಬಾ ಚಿಂತಾಕ್ರಾಂತರಾಗಿದ್ದರು. ಕನಿಷ್ಠ ಬಲೆಯನ್ನಾದರೂ ಕ್ಲೀನ್ ಮಾಡೋಣ ಎಂದುಕೊಂಡು ಸಮುದ್ರದಲ್ಲಿ ಬಲೆ ಜಾಲಿಸುತ್ತಿದ್ದರು. ಆ ಸಮಯದಲ್ಲಿ Hero ತರ Jesus ಬಂದ್ರು ನೋಡಿ ..., ಯೇಸುವನ್ನು ನೋಡಿದ ಜನರು ಗೆನ್ನೆಜರೆತ್ ಸಮುದ್ರ ತೀರದ ಕಡೆಗೆ ಗುಂಪು ಗುಂಪಾಗಿ ಬರಲಾರಂಭಿಸಿದರು. ಪೀಟರ್ ಮಾಮನ ಮುಖ ದುಃಖವಾಗಿತ್ತು. ಪ್ರಸಂಗದ ನಂತರ ಯೇಸು ದೋಣಿಯನ್ನು ಆಳಕ್ಕೆ ತೆಗೆದುಕೊಂಡು ಹೋಗಿ ಬಲೆ ಬೀಸು ಎಂದು ಹೇಳಿದರು....ನಾವು ರಾತ್ರಿಯಿಡೀ ಆಳದಲ್ಲೇ ತಾನೇ ಹಾಕಿದ್ದು, ನಾನೊಬ್ಬ ಅನುಭವಿ ಮೀನುಗಾರ. ಎಂದೆಲ್ಲಾ ಹೇಳದೆ ಪೀಟರ್ ಮಾಮ ಯೇಸಪ್ಪ ಹೇಳಿದ ಹಾಗೆಯೇ ಆಳದಲ್ಲಿ ಬಲೆ ಬೀಸಿದರು. ಬಲೆ ಹರಿಯುವಷ್ಟು ತುಂಬಾ ಮೀನುಗಳು ದೊರಕಿದವು, ಬೇರೆ ದೋಣಿಯಲ್ಲಿದ್ದವರನ್ನೂ ಸಹಾಯಕ್ಕೆ ಕರೆದರು. ಆ Boat ತುಂಬಿ ತುಳುಕುತ್ತಿತ್ತು. ಎಂತಹ ವಿಸ್ಮಯ. ಯೇಸಪ್ಪ ಹೇಳಿದಂತೆ ಮಾಡಿದರೆ ಇಷ್ಟೊಂದು ಆಶೀರ್ವಾದ ಇರುತ್ತದಾ? ಎಂದು ಆಶ್ಚರ್ಯಪಟ್ಟರು. ಮೀನು ಹಿಡಿಯುತ್ತಿದ್ದ ಪೀಟರ್ ಮಾಮನನ್ನು ಮನುಷ್ಯರನ್ನು ಹಿಡಿಯುವವರಾಗಿ Jesus ಮಾರ್ಪಡಿಸಿದರು. ಯೇಸುವಿಗೆ ಸಿಕ್ಕಿಬಿದ್ದರು. ಯೇಸಪ್ಪನಿಗೆ ವಿಧೇಯರಾದರೆ ಈ ಲೋಕದಲ್ಲಿಯೂ ಮತ್ತು ಪರಲೋಕದಲ್ಲಿಯೂ ತುಂಬಾ Blessing ಅಲ್ವಾ ಪುಟಾಣಿಗಳೇ. ನೀವೂ ಸಹ ಯೇಸಪ್ಪನ ಮಾತಿಗೆ ಅಂದರೆ ಆತನ ವಾಕ್ಯಕ್ಕೆ ವಿಧೇಯರಾಗಿ ಜೀವಿಸುವಾಗ, ಶ್ರೇಷ್ಠತೆ ಮತ್ತು ಆಶೀರ್ವಾದ ನಿಮ್ಮನ್ನು ಹುಡುಕಿ ಬರುತ್ತದೆ. ಏನು ಪುಟಾಣಿಗಳೇ ನಮ್ಮ ಹೆತ್ತವರಿಗೆ ವಿಧೇಯರಾಗೋದೆ ತುಂಬಾ ಕಷ್ಟ, ಅದರಲ್ಲಿ ಬೇರೆ Jesus ಗೆ ಬೇರೆ ಹೇಗೆ ವಿಧೇಯರಾಗೋದು ಅಂತಾ ತಾನೇ ಯೋಚುಸ್ತಾ ಇದ್ದೀರ. ನಿಮ್ಮನ್ನ ಅವರಿಗೆ ಸಮರ್ಪಿಸಿಬಿಟ್ಟರೆ ತುಂಬಾ ಸುಲಭ. Ok ನಾ.
- Sis.ಬ್ಯೂಲ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482