Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.06.2023
Share:

By Village Missionary Movement

Saturday, 03-Jun-2023

ಧೈನಂದಿನ ಧ್ಯಾನ(Kannada) – 03.06.2023

 

ಹೋಲಿಸಿ ನೋಡುವುದು

 

"ನಿನ್ನದನ್ನು ತಕ್ಕೊಂಡು ಹೋಗು; ..." - ಮತ್ತಾಯ 20:14

 

ಒಂದು ಬೆಳಿಗ್ಗೆ ನಾನು ಮತ್ತಾಯ 20 ನೇ ಅಧ್ಯಾಯವನ್ನು ಓದುತ್ತಿದ್ದೆ. ಈ ಸಾಮ್ಯದಲ್ಲಿ ಬರುವ ಮಾಲಿಕನ ಬಗ್ಗೆ ಯೋಚಿಸಿದೆ. ಈ ಮಾಲಿಕನು ಯಾಕೆ ಎಲ್ಲರಂತೆ ಸಂಬಳ ಕೊಡಲಿಲ್ಲ? ಸ್ವಲ್ಪ ಹೊತ್ತು ಕೆಲಸ ಮಾಡಿದವರಿಗೂ ಮತ್ತು ಹೆಚ್ಚು ಗಂಟೆ ಕೆಲಸ ಮಾಡಿದವರಿಗೂ ಒಂದೇ ಸಂಬಳವನ್ನು ನೀಡುತ್ತಿದ್ದಾರಲ್ಲಾ ಎಂದು ನನಗೆ ಆಶ್ಚರ್ಯವಾಯಿತು. ಆಗಲೇ, ಹೋಲಿಸಿ ನೋಡುವುದು ಸರಿಯಲ್ಲ ಎಂದು ಅರಿವಾಯಿತು. ಕುಮಾರ್ ಚೆನ್ನಾಗಿ ಓದಿ ಸರ್ಕಾರಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ. ಆನಂದ ಪ್ರವಾಹದಲ್ಲಿ ಈಜುತ್ತಿದ್ದ. ಆದರೆ ಮರುದಿನ ಬೆಳಿಗ್ಗೆ ಕುಮಾರ್ ಸಂತೋಷದ ಲಕ್ಷಣಗಳಿಲ್ಲದೆ ದುಃಖದಿಂದ ಮುಳುಗಿದನು. ಯಾಕೆ ಗೊತ್ತಾ? ಅವನ ಸ್ನೇಹಿತ ರವಿ ತನಗಿಂತ ಐದು ಅಂಕ ಹೆಚ್ಚು ಪಡೆದಿದ್ದಾನೆಂದು ಅವನಿಗೆ ತಿಳಿಯಿತು. ಹೋಲಿಸಿ ನೋಡುವುದು ಸಂತೋಷದ ಪ್ರಮುಖ ಶತ್ರು. ನಾವು ಏನು ಸಾಧಿಸಿದ್ದೇವೊ ಅದರಲ್ಲಿ ಸಂತೋಷಪಡಬೇಕು.

 

ದೇವರು ನಮಗೆ ಕೊಟ್ಟಿರುವ ಮಾರ್ಗದಲ್ಲಿ ನಾವು ಓಡಬೇಕು. ಇತರರ ಸಾಧನೆಗಳನ್ನು ಹೋಲಿಸುವುದರಿಂದ ಸಂತೋಷವು ಮರೆಯಾಗುತ್ತದೆ. ಕೆಲವರು ಎಷ್ಟು ಎತ್ತರಕ್ಕೆ ಬೆಳೆದರೂ ಮತ್ತೊಬ್ಬರ ಉನ್ನತಿಯೊಂದಿಗೆ ಹೋಲಿಸಿ ನೋಡುತ್ತಾ ತಮಗೆ ಸಿಕ್ಕಿರುವ ಉನ್ನತಿಯನ್ನು ಅನುಭವಿಸದೆ ಹೋಗುತ್ತಿದ್ದಾರೆ. ದೇವರು ನಮಗೆ ನೀಡಿರುವ ಉತ್ತಮ ಪ್ರತಿಭೆಗಳಿಗೆ ನಾವು ಕೃತಜ್ಞರಾಗಿರಬೇಕು. ನಾವು ಇತರರ ಪ್ರತಿಭೆ ಮತ್ತು ಉತ್ತಮ ಸಂದರ್ಭಗಳನ್ನು ಗಮನಿಸಲು ಪ್ರಾರಂಭಿಸಿದರೆ, ನಮ್ಮಲ್ಲಿ ಎಲ್ಲವೂ ಇದ್ದರೂ ಸಹ ನಾವು ಸಂತೋಷವಾಗಿರುವುದಿಲ್ಲ. ದೇವರು ನಮಗೆ ಇಟ್ಟಿರುವ ಮಾರ್ಗದಲ್ಲಿ ಓಡೋಣ. ಖಂಡಿತವಾಗಿಯೂ ದೇವರು ನಮ್ಮ ಜೀವನದಲ್ಲಿ ಒಳ್ಳೆಯದನ್ನು ನೀಡುತ್ತಾರೆ. ಹೋಲಿಸಿ ನೋಡಿ ನಮಗೆ ನಾವೇ ದೇವರ ಆಶೀರ್ವಾದದ ಎಲ್ಲೆಯನ್ನು ಕಡಿಮೆ ಮಾಡಬಾರದು.

 

ತಾಯಿಯೊಬ್ಬಳು ತನ್ನ ಕಿರಿಯ ಮಗನಿಗಾಗಿ ಪ್ರಾರ್ಥಿಸುವಾಗ, "ಅವನು ತನ್ನ ಹಿರಿಯ ಮಗನಂತೆ ವೈದ್ಯಕೀಯ ಕೋರ್ಸ್‌ಗೆ ಸೇರಿಕೊಂಡರೆ ಸಾಕು ಸ್ವಾಮಿ!" ಎಂದಳು. ದೇವರು "ನೀನ್ಯಾರು ಕಿರಿಯ ಮಗನಿಗೆ ಎಲ್ಲೆಯನ್ನು ಹಾಕಲು ಪೂರ್ವದಲ್ಲಿದ್ದ ಆಲಯದ ಮಹಿಮೆಗಿಂತ ಈಗಿನ ಆಲಯದ ಮಹಿಮೆಯು ಹೆಚ್ಚಾಗಿರುತ್ತದೆ" ಆಲಯ ಎಂದರೇನು? ನೀವೇ ಆ ಆಲಯ ಎಂದರು. ಅಂದಿನಿಂದ ತಾಯಿ ತನ್ನ ಮಕ್ಕಳಿಗಾಗಿ ಪ್ರಾರ್ಥಿಸಲು ಬಹಳ ಜಾಗರೂಕರಾಗಿದ್ದರು. ಆದ್ದರಿಂದ ಪೋಷಕರೇ! ನಿಮ್ಮ ಮಕ್ಕಳನ್ನು ಇತರರಿಗೆ ಹೋಲಿಸಿ ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಬೇಡಿ! ದೇವರ ಚಿತ್ತದಲ್ಲಿ ನೆಲೆಗೊಂಡಿರಿ.

- Mrs. ಬೆರ್ಲಿನ್ ಸೆಲ್ಫಾಯ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಂಪುಗಳು ನಡೆಯುವ ಮನೆಗಳಲ್ಲಿ ದೇವರ ಆಶೀರ್ವಾದವಿರಲಿ ಎಂದು ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş