By Village Missionary Movement
Friday, 02-Jun-2023ಧೈನಂದಿನ ಧ್ಯಾನ(Kannada) – 02.06.2023
ಸಮಯಕ್ಕೆ ತಕ್ಕ ಹಾಗೆ ಮಾಡುವ ದೇವರು
"ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ;..." - ಪ್ರಸಂಗಿ 3:11
ದಾರಿಹೋಕನೊಬ್ಬ ಹೊಲದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಕುಂಬಳಕಾಯಿ ತೋಟದಲ್ಲಿ ಬೃಹದಾಕಾರದ ಕುಂಬಳ ಕಾಯಿಗಳು ಹಣ್ಣಾಗಿ ಬಳ್ಳಿಗಳು ನೆಲಕ್ಕೆ ಹಬ್ಬಿದ್ದವು. ದಾರಿಹೋಕ ಅದನ್ನು ನೋಡಿ, "ಎಂಥಾ ದೇವರ ಸೃಷ್ಟಿ! ನೆಟ್ಟಗೆ ನಿಲ್ಲಲಾರದ ಗಿಡಕ್ಕೆ ಹೋಗಿ ಇಷ್ಟು ದೊಡ್ಡ ಕುಂಬಳಕಾಯಿಗಳನ್ನು ರೂಪಿಸಿದ್ದಾರಲ್ಲಾ" ಎಂದು ಬೇಸರಮಾಡಿಕೊಂಡನು. ಇದನ್ನು ಯೋಚಿಸುತ್ತಲೇ ಬಂದನು. ಬಿಸಿಲ ತಾಪಕ್ಕೆ ವಿಪರೀತ ಆಯಾಸವಾಗಿ ರಸ್ತೆ ಬದಿಯ ಆಲದ ಮರದ ನೆರಳಿಗೆ ಬಂದು ಹಾಗೆ ನಿದ್ದೆ ಮಾಡಿಬಿಟ್ಟನು. ಸ್ವಲ್ಪ ಸಮಯದ ನಂತರ ಆಲದ ಮರದ ಚಿಕ್ಕ ಹಣ್ಣು ಅವನ ತಲೆಯ ಮೇಲೆ ಬಿದ್ದಿತು. ಕುಂಬಳಕಾಯಿಯ ಬಗ್ಗೆ ಯೋಚಿಸುತ್ತಿದ್ದವನು, ಕುಂಬಳಕಾಯಿ ತನ್ನ ತಲೆಯ ಮೇಲೆ ಬಿದ್ದುಬಿಟ್ಟಿತೆಂದು ಕಿರುಚಾಡುತ್ತಾ ಗಾಬರಿಯಿಂದ ಎದ್ದು ನೋಡಿದರೆ, ಒಂದು ಸಣ್ಣ ಆಲದಮರದ ಒಂದು ಚಿಕ್ಕ ಹಣ್ಣು ಬಿದ್ದಿತ್ತು. "ದೇವರೇ, ಈ ದೊಡ್ಡ ಮರದಲ್ಲಿ ಕುಂಬಳಕಾಯಿಯಷ್ಟು ದೊಡ್ಡ ಹಣ್ಣನ್ನು ಸೃಷ್ಟಿಸಿದ್ದರೆ, ನನ್ನ ತಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ನಿಮ್ಮ ಜ್ಞಾನವಂತವಾದ ನಿಮ್ಮ ಕ್ರಿಯೆಗೆ ಧನ್ಯವಾದ" ಎಂದನು.
ಹಳೆಯ ಒಡಂಬಡಿಕೆಯಲ್ಲಿ ಇಸಾಕನು-ರೆಬೆಕ್ಕ ದಂಪತಿಗಳು ನಮಗೆ ಗೊತ್ತು. ಇಸಾಕನಿಗೆ ಹೆಣ್ಣು ನೋಡಲು ಅಬ್ರಹಾಮನು ತನ್ನ ಸೇವಕನನ್ನು ಕರೆದು ಕೆಲವು ಷರತ್ತುಗಳನ್ನು ಹೇಳಿ ಕಳುಹಿಸಿಬಿಡುತ್ತಾರೆ. ಅದರಂತೆ ಆ ಸೇವಕನೂ ಸಹ ಅಬ್ರಹಾಮನ ಮಾತಿಗೆ ವಿಧೇಯನಾಗಿ ಬೆತೂವೇಲನ ಮಗಳಾದ ರೆಬೆಕ್ಕಳ ಮನೆಗೆ ಹೋಗಿ ಕೆಲಸಗಳನ್ನು ಸರಿಯಾಗಿ ಮಾಡಿದರು. ಆಗ ಎಲೀಯೆಜರನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಕರ್ತನನ್ನು ಸ್ತುತಿಸುತ್ತೇನೆ, ಅವರು ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿದರು” ಎಂದು ಹೇಳುತ್ತಾರೆ.
ಹೌದು, ಪ್ರಿಯರೇ! ನಮ್ಮ ದೇವರು ಸಮಯಕ್ಕೆ ತಕ್ಕ ಹಾಗೆ ಮಾಡುವ ದೇವರು, ಅನಂತ ಜ್ಞಾನವುಳ್ಳವರು. ಪ್ರತಿದಿನ ನಮ್ಮನ್ನು ಸರಿಯಾಗಿ, ಸಮದಾರಿಯಲ್ಲಿ ಮಾರ್ಗದರ್ಶನ ಮಾಡುವವರು. ನಮ್ಮನ್ನು ಸೃಷ್ಟಿಸಿದಾಗಿನಿಂದಲೂ, ಪ್ರತಿಯೊಂದನ್ನೂ ನೋಡಿ ನೋಡಿ ನಮ್ಮನ್ನು ಸರಿಯಾಗಿ ರೂಪಿಸಿದ್ದಾರೆ. ಈ ಲೋಕದಲ್ಲಿರುವ ಪ್ರತಿಯೊಂದನ್ನೂ ಸರಿಯಾಗಿ ಸೃಷ್ಟಿಸಿರುವ ದೇವರಿಗೆ ಕೃತಜ್ಞತೆ ಸಲ್ಲಿಸೋಣ.
ಅವರು ನಮ್ಮಲ್ಲಿ ಪ್ರತಿಯೊಬ್ಬರನ್ನು ನೋಡುತ್ತಾನೆ ಮತ್ತು ನಮ್ಮನ್ನು ಉತ್ತಮಗೊಳಿಸಿದನು. ಅವರು ನಮ್ಮ ದೇಹದಲ್ಲಿನ ಅಂಗಪ್ರತಿದಿನ ನಾವು ಅದನ್ನು ನೋಡಿ ಆನಂದಿಸಿದಾಗ, ಅದನ್ನು ಸುಂದರವಾಗಿ ಸೃಷ್ಟಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ.
- ಶ್ರೀಮತಿ. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ :
ತಿಂಗಳ 30 ದಿನಗಳಲ್ಲಿ 30 ಮನೆಗಳಲ್ಲಿ ಪ್ರಾರ್ಥನಾ ಗುಂಪುಗಳನ್ನು ಆಯೋಜಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482