By Village Missionary Movement
Thursday, 01-Jun-2023ಧೈನಂದಿನ ಧ್ಯಾನ(Kannada) – 01.06.2023
ಹೊಗಳುವಿರಿ! ಪ್ರಯೋಜನ ಪಡೆಯುವಿರಿ!
"...ಒಳ್ಳೆಯ ಮಾತು ಅದನ್ನು ಹಿಗ್ಗುವಂತೆ ಮಾಡುವದು" - ಜ್ಞಾನೋಕ್ತಿ.12:25
ವಿದೇಶಿ ಮಕ್ಕಳಿಗೆ, ಕಣ್ಣುರೆಪ್ಪೆಗಳು ನೀಲಿ ಅಥವಾ ಕಂದು ಬಣ್ಣದಲ್ಲಿರುತ್ತವೆ. ಶಾಲೆಯೊಂದರಲ್ಲಿ ಒಂದು ಸಂಶೋಧನೆ ನಡೆಸಿದರು. "ನೀಲಿ ಕಣ್ಣುಗಳನ್ನು ಹೊಂದಿರುವ ಜನರು ಜ್ಞಾನವಂತರು ಮತ್ತು ವಿವೇಕಿಗಳು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ" ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಿದರು. ಆ ತಿಂಗಳ ಪರೀಕ್ಷೆಯಲ್ಲಿ ನೀಲಿ ಕಣ್ಣಿನ ಮಕ್ಕಳು ಹೆಚ್ಚು ಅಂಕ ಗಳಿಸಿದರು. ಕೆಲವು ತಿಂಗಳುಗಳ ನಂತರ, ಶಿಕ್ಷಕರು ವಿದ್ಯಾರ್ಥಿಗಳಿಗೆ, "ಸಂಶೋಧಕರು ವ್ಯಾಪಕವಾದ ಸಂಶೋಧನೆಯ ನಂತರ ನೀಲಿ ಕಣ್ಣು ಹೊಂದಿರುವ ಜನರು ಕಲಿಯಲು ಉತ್ತಮ ಜ್ಞಾಪಕಶಕ್ತಿಯನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದರು" ಎಂದು ಹೇಳಿದರು. ಅದರ ನಂತರದ ಪರೀಕ್ಷೆಗಳಲ್ಲಿ ನೀಲಿ ಕಣ್ಣಿನ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಿದ್ದರು. ಹೊಗಳಿಕೆ ಒಳ್ಳೆಯ ಪ್ರತಿಫಲವನ್ನು ನೀಡುತ್ತದೆ ಎಂದು ತಿಳಿದುಕೊಂಡರು ಶಿಕ್ಷಕರು.
ನಮ್ಮ ಕರ್ತನಾದ ಯೇಸು ಕ್ರಿಸ್ತನು ಹೊಗಳುವುದನ್ನು ನೋಡೋಣ. ಯೇಸು ಕ್ರಿಸ್ತನು ಬೇಥಾನ್ಯದ ಮರಿಯಳನ್ನು "ಉತ್ತಮವಾದದ್ದನ್ನು ಆರಿಸಿಕೊಂಡಳು " ಎಂದು, ಕಾನಾನ್ಯ ಸ್ತ್ರೀಯನ್ನು "ನಿನ್ನ ನಂಬಿಕೆ ಬಹಳ" ಎಂದು ಮತ್ತು ಶತಾಧಿಪತಿಯ ನಂಬಿಕೆಯನ್ನು "ನಾನು ಇಸ್ರಾಯೇಲ್ಯರಲ್ಲಿಯೂ ಇಂಥಹ ನಂಬಿಕೆಯನ್ನು ಕಾಣಲಿಲ್ಲ" ಎಂದು ಯೇಸುಕ್ರಿಸ್ತನು ಹೊಗಳುವುದನ್ನು ಕಾಣಬಹುದು.
ಮಕ್ಕಳು ದೇವರು ಕೊಟ್ಟಿರುವ ಸ್ವಾತಂತ್ರ್ಯ. ನಾವು ಅವರನ್ನು ಕರ್ತನಿಗಾಗಿ ಬೆಳೆಸುತ್ತಾ ಮಾರ್ಗದರ್ಶನ ನೀಡಬೇಕು. "ನಿಮ್ಮ ಮಕ್ಕಳು ಮನಗುಂದದಂತೆ ಅವರನ್ನು ಕೆಣಕಿ ಕೋಪವನ್ನೆಬ್ಬಿಸ ಬೇಡಿರಿ" (ಕೊಲೊಸ್ಸೆ. 3:21) ಎಂದು ಸತ್ಯವೇದವು ನಮಗೆ ಸೂಚಿಸುತ್ತಿದೆ. ಅಷ್ಟೇ ಅಲ್ಲ, "ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು" (ಮತ್ತಾ. 18:6) ಎಂದು ಸತ್ಯವೇದವು ನಮಗೆ ಎಚ್ಚರಿಸುತ್ತಿದೆ.
ಇದು ಹೊಸ ಶೈಕ್ಷಣಿಕ ವರ್ಷದ ಆರಂಭ. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಿ ಉತ್ತಮ ಮಾರ್ಗದಲ್ಲಿ ಮುನ್ನಡೆಸಬೇಕು. ಮಕ್ಕಳು ನಿರುತ್ಸಾಹಗೊಳ್ಳುವಂತೆ ಅವರನ್ನು ಗದರಿಸಬಾರದು. ಮತ್ತೊಬ್ಬರಿಗೆ ಹೋಲಿಸಿ ನೋಯಿಸಬಾರದು. ಮಕ್ಕಳ ಪ್ರತಿಭೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅವರ ಪ್ರತಿಭೆ ಮತ್ತು ಸದ್ಗುಣಗಳನ್ನು ಹೊಗಳಿರಿ. ನೀವು ಉತ್ತಮ ಫಲಿತಾಂಶಗಳನ್ನು ನೋಡುತ್ತೀರ.
- Mrs. ವನಜಾ ಬಾಲರಾಜ್
ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482