Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.05.2023 (Kids Special)
Share:

By Village Missionary Movement

Sunday, 28-May-2023

ಧೈನಂದಿನ ಧ್ಯಾನ(Kannada) – 28.05.2023 (Kids Special)

 

ರುಚಿಕರ ಅತಿಥಿ

 

“... ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು" - ಪ್ರಸಂಗಿ 3:1

 

Bro. ಶೇಖರ್ ಕುಟುಂಬವು ಯೇಸುವನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದ ಕುಟುಂಬವಾಗಿತ್ತು. ಗಂಡ ಮತ್ತು ಹೆಂಡತಿ, ಮಗ ಮತ್ತು ಮಗಳನ್ನು ಒಳಗೊಂಡಿರುವ ಕುಟುಂಬ. ಕುಟುಂಬ ಪ್ರಾರ್ಥನೆ, ಸತ್ಯವೇದ ಓದುವಿಕೆ ಧ್ಯಾನ, ವಾಕ್ಯ ಕಂಠಪಾಠ ಮಾಡುವುದು ಪ್ರತಿದಿನ ಕಡ್ಡಾಯವಾಗಿತ್ತು. ಕರ್ತನನ್ನು ಮಹಿಮೆಪಡಿಸಲು ಕುಟುಂಬವಾಗಿ ಒಟ್ಟಿಗೆ ಹಾಡುವುದು, ಭಾನುವಾರದ ಆರಾಧನೆ, ಮಕ್ಕಳ ಸಬ್ಬತ್ ತರಗತಿಗಳು ಯಾವುದನ್ನೂ ಮಕ್ಕಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ದೇವರು ಆ ಕುಟುಂಬವನ್ನು ತುಂಬಾ ಆಶೀರ್ವದಿಸಿದರು. ಸಂತೋಷವು ಉಕ್ಕಿ ಹರಿಯಿತು.

 

ಒಂದು ದಿನ ಅಪ್ಪ ಒಬ್ಬ ಸಂತೋಷಕರ ಅತಿಥಿಯನ್ನು ಮನೆಗೆ ಕರೆತಂದರು. ಅವರು ಅಪ್ಪ ಇದ್ದಾಗ ಮಾತ್ರಎಲ್ಲರೊಂದಿಗೆ ಇರುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ಪುನಃ ಎಲ್ಲಾ ಕುಟುಂಬ ಕಾರ್ಯಗಳು ಮೊದಲಿನಂತೆ ನಡೆಯುತ್ತಿದ್ದವು. ಆದರೆ ಎಲ್ಲರೊಂದಿಗೆ ಚೆನ್ನಾಗಿ ಬೆರೆಯುವ ಇವರು ಬೆಳಗ್ಗೆ ಎದ್ದ ತಕ್ಷಣ ಮನೆಯವರ ಜೊತೆ ಮಾತನಾಡಲು ಆರಂಭಿಸುತ್ತಾರೆ. ಸಮಯ ಹೇಗೆ ಹೋಗುತ್ತಿದೆ ಎಂಬುದೇ ಅವರಿಗೆ ಗೊತ್ತಾಗುತ್ತಿರಲಿಲ್ಲ. ಬೆಳಗಿನ ಹಾಡು, ಪ್ರಾರ್ಥನೆ, ಸತ್ಯವೇದ ಧ್ಯಾನ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಯಿತು. ಅವರೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಾ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಇಷ್ಟಪಡುತ್ತಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮಕ್ಕಳು ಓದಬೇಕಾದ ಸಂದರ್ಭದಲ್ಲೂ ಅತಿಥಿಗಳ ಜೊತೆ ಕಾಲ ಕಳೆಯುವ ಭರದಲ್ಲಿ ತಮ್ಮ ವಿದ್ಯಾಭ್ಯಾಸವನ್ನೇ ಮರೆತುಬಿಟ್ಟರು. ಊಟದ ಸಮಯದಲ್ಲಿಯೂ ಸಹ ಅತಿಥಿಗಳು ಜೊತೆಯಲ್ಲೇ ಇರುತ್ತಿದ್ದರು. ಹಾಗಾಗಿ ಕುಟುಂಬ ಸಮೇತರಾಗಿ ಅಂದು ಊರಿನಲ್ಲಿ ನಡೆದ ಘಟನೆಗಳು, ಅವಘಡಗಳು, ರಾಜಕೀಯ ಸ್ಥಿತಿಗತಿಗಳು ಹೀಗೆ ನೋಡುತ್ತಾ ಸಮಯ ಕಳೆದು ಹೋಯಿತು. ರಾತ್ರಿಯ ಪ್ರಾರ್ಥನೆ ಹೊರಟೇ ಹೋಯಿತು. ಹೊಸ ಅತಿಥಿ ಕುಟುಂಬವನ್ನೇ ತನ್ನ ಕಡೆಗೆ ತಿರುಗಿಸಿದನು. ಅವರು ದೇವರನ್ನು, ಜನರನ್ನು ಮತ್ತು ಕುಟುಂಬವನ್ನು ಮರೆಯುವಂತೆ ಮಾಡಿದರು. ಆಲಯಕ್ಕೆ ಹೋಗುವುದೂ ತಡವಾಗಿ, ಕೆಲ ದಿನಗಳ ನಂತರ ಸಭೆಗೆ ಹೋಗುವುದೇ ನಿಂತು ಹೋಯಿತು. ಸಬ್ಬತ್ ಶಾಲೆ ಮರೆತೇ ಹೋಯಿತು.

 

ಈ ರುಚಿಕರ ಅತಿಥಿ ಯಾರು ಗೊತ್ತಾ? ? ಬೇರೆ ಯಾರೂ ಅಲ್ಲ Mr. T.V. ಯೇ. ದೇವರಿಗೆ ಕೊಡಬೇಕಾದ ಬೆಳಗಿನ ಸಮಯ, ಸಂಸಾರದಲ್ಲಿ ಒಬ್ಬರಿಗೊಬ್ಬರು ಮಾತನಾಡುತ್ತಾ, ಸಹಾಯ ಮಾಡಿಕೊಳ್ಳುವ ಸಮಯ, ಆಲಯಕ್ಕೆ ಹೋಗಿ ದೇವರನ್ನು ಕೊಂಡಾಡುವ ಸಮಯ ಹೀಗೆ ಎಲ್ಲಾ ಸಮಯವನ್ನು ತನ್ನ ಕಡೆಗೆ ವಶಮಾಡಿಕೊಂಡಿತು Mr. T.V. ಮನೆಯಲ್ಲಿ ಜಗಳಗಳು, ವಿಷಾದಗಳು ಪ್ರಾರಂಭವಾದವು. ಅಪ್ಪ ಗಂಭೀರವಾಗಿ ಯೋಚಿಸಿದರು. ಮಕ್ಕಳ ಮಾತು ಕೂಡ ಕಾರ್ಟೂನ್‌ಗಳಂತೆಯೇ ಇರುವುದನ್ನು ಅವರು ನೋಡಿದರು. ಮಕ್ಕಳು ದೇವರ ಭಯದಲ್ಲಿ ಮತ್ತು ಅಧ್ಯಯನದಲ್ಲಿ ಹಿಂದುಳಿದಿರುವುದನ್ನು ಅವರು ಕಂಡರು. ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡರು. ಅತಿಥಿಯನ್ನು ಮಾರಾಟ ಮಾಡಲು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟು ತೆಗೆದುಕೊಂಡು ಹೋಗುವ ಸಮಯದಲ್ಲಿ ಹೋದಾಗ ಕುಟುಂಬವೇ ಆತಂಕಕ್ಕೊಳಗಾಯಿತು. ಆದರೆ ಒಂದೆರಡು ದಿನಗಳಲ್ಲಿ ಮತ್ತೆ ಸಹಜ ಸ್ಥಿತಿ ಮರಳಿತು. ಮನೆಯಲ್ಲಿ ಹಾಡುಗಳು, ಬಾಯಲ್ಲಿ ಹಾಡಿನ ಶಬ್ಧ ಪ್ರತಿಧ್ವನಿಸಲು ಪ್ರಾರಂಭಿಸಿತು.

 

ಮುದ್ದು ಪುಟಾಣಿಯೇ ! ನೀನು ಟಿ.ವಿ.ಗೆ ಅಡಿಕ್ಟ್ ಆಗಬೇಡ. ಟಿವಿ ಜೊತೆ ಪೂರ್ತಿ ಸಮಯ ಕಳೆಯಬೇಡ. ಟಿವಿ ನೋಡುವಾಗ ತುಂಬಾ ಜಾಗರೂಕನಾಗಿರು. ಸ್ವಲ್ಪ ಸಮಯದವರೆಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ವೀಕ್ಷಿಸಿದ ನಂತರ, ಅದನ್ನು ಆಫ್ ಮಾಡಿ ಬಿಡು ಸರೀನಾ. ಅದೇ ಯಾವಾಗಲೂ ಒಳ್ಳೆಯದು.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin