By Village Missionary Movement
Friday, 26-May-2023ಧೈನಂದಿನ ಧ್ಯಾನ(Kannada) – 26.05.2023
ಯಾವುದು ಗೆಲುವು
"ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?" - ರೋಮಾ 8:31
ಜರ್ಮನಿ ದೇಶದ ಚಕ್ರವರ್ತಿ ಪೀಟರ್ ದಿ ಗ್ರೇಟ್ ಬರ್ಲಿನ್ ನಗರದ ಮೂಲಕ ಹಾದು ಹೋಗುತ್ತಿದ್ದರು. ಅಲ್ಲೊಂದು ಗೋಡೆಯ ಮೇಲಿದ್ದ ಚಿತ್ರವನ್ನು ಜನರ ದೊಡ್ಡ ಗುಂಪು ಮುಗಿಬಿದ್ದು ನೋಡುತ್ತಿದ್ದರು. ಚಕ್ರವರ್ತಿಯು ಅದು ಏನೆಂದು ಬಹಳ ಗಮನವಿಟ್ಟು ಹತ್ತಿರಹೋಗಿ ನೋಡಿದರು. ಗೋಡೆಯ ಮೇಲೆ ಅವರ ಚಿತ್ರವು ಬಹಳ ಹೀನವಾಗಿ ಗೇಲಿ ಮಾಡುವಂತಹ ಸ್ಥಿತಿಯಲ್ಲಿ ಚಿತ್ರಿಸಲ್ಪಟ್ಟು ಎತ್ತರದಲ್ಲಿ ನೇತು ಹಾಕಿದ್ದರು. ಅವರು ಒಂದು ಕ್ಷಣ ಅದನ್ನು ನೋಡಿದರು. ಅವರ ಹೃದಯದಲ್ಲಿ ವೇದನೆಯು ಮುಳ್ಳಿನಂತೆ ಚುಚ್ಚುತ್ತಿತ್ತು. ನಂತರ ಅವರು ತನ್ನ ಸೇವಕನನ್ನು ನೋಡಿ ಎಲ್ಲರೂ ನೋಡುವಂತೆ ಅದನ್ನು ಕೆಳಗೆ ಇಡು ಎಂದು ಹೇಳಿ ಹೊರಟುಹೋದರು. ಅವನನ್ನು ಅವಮಾನಿಸಬಯಸಿದ ಶತ್ರುಗಳ ಗುಂಪು ನಾಚಿಕೆಯಿಂದ ತಲೆ ತಗ್ಗಿಸಿತು.
ಪ್ರಿಯರೇ! ನೀವು ಸಹ ನಿಮ್ಮ ಕುಟುಂಬ ಅಥವಾ ಕೆಲಸದ ಸ್ಥಳದಲ್ಲಿ ಕ್ರಿಸ್ತನ ನಿಮಿತ್ತ ನಿರ್ಲಕ್ಷಿಸಲ್ಪಡುತ್ತಿರಬಹುದು ಮತ್ತು ಅಪಹಾಸ್ಯಕ್ಕೊಳಗಾಗಿರಬಹುದು. ಅವಮಾನದ ಹಾದಿಯಲ್ಲಿ ಹಾದುಹೋಗುತ್ತಿರಬಹುದು. ನಿಮ್ಮ ಹೃದಯವು ವ್ಯರ್ಥವಾದ ನಿಂದೆಯಿಂದ ತುಂಬಿರಬಹುದು. ಈ ನೋವಿನ ಅನುಭವಕ್ಕಾಗಿ ದೇವರಿಗೆ ಧನ್ಯವಾದಗಳು. ನಿಮ್ಮ ಆಧ್ಯಾತ್ಮಿಕ ಜೀವನದ ಪ್ರಗತಿಗಾಗಿ ದೇವರು ಇದನ್ನು ಅನುಮತಿಸಿರುವುದರಿಂದ ತಾಳ್ಮೆಯಿಂದ ಸ್ವೀಕರಿಸಿ. ಆಗ ಈ ಪರಿಸ್ಥಿತಿಯ ಮೂಲಕ ನಿಮ್ಮನ್ನು ಸೋತುಹೋಗುವಂತೆ ಮಾಡಲು ಪ್ರಯತ್ನಿಸಿದ ಸೈತಾನನು ಸೋಲಿಸಲ್ಪಡುತ್ತಾನೆ, ಗೆಲುವು ನಿಮ್ಮದೇ!
ನೀವು ದೇವರಿಗಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರೂ ಸಹ, ನೀವು ಇತರರಿಂದ ತೀವ್ರ ಟೀಕೆಗೆ ಒಳಗಾದಾಗ ಅದನ್ನು ದೇವರ ಸಲುವಾಗಿ ತಾಳ್ಮೆಯಿಂದ ಸಹಿಸಿಕೊಂಡಿದ್ದರೆ ಅದೇ ನಿಮಗೆ ಗೆಲುವು.
ನೀವು ಸಂಕಟಗಳ ನಡುವೆ ಹಾದು ಹೋಗುವಾಗ ಕ್ರಿಸ್ತನ ನಿಮಿತ್ತ ಬರುವ ಶಿಲುಬೆಯನ್ನು ಹೊರುವಾಗ, ನೀವು ದೇವರ ವಿರುದ್ಧ ಗುಣುಗುಟ್ಟದೇ "ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು" (ಯಾಕೋಬ 1:12) ಎಂಬ ವಾಕ್ಯವನ್ನು ನೆನಪಿಸಿಕೊಂಡು ಜೀವಿಸುವುದಾದರೆ ಅದೇ ನಿಮಗೆ ಗೆಲುವು.
ಅಂತಿಮವಾಗಿ, ಸುಖಕರವಾದ ಸಮಯಕ್ಕಿಂತ ಕಠಿಣವಾದ ಸಮಯದ ಮೂಲಕ ದೇವರು ಇನ್ನೂ ಅಧಿಕವಾಗಿ ನಿಮಗೆ ಬೋಧಿಸಲು ನಿಮ್ಮನ್ನು ರೂಪಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯಬೇಡಿರಿ ನೀವು ಜಜ್ಜಲ್ಪಡುವ ಸಮಯದಲ್ಲಿ ಇನ್ನೂ ಆಳವಾಗಿ ಅವರ ಸ್ವಾರೂಪ್ಯವನ್ನು ಹೊಂದಲು ಹತ್ತಿರವಾಗುತ್ತೀರ ಎಂಬುದನ್ನು ಅವರು ಉಪಯೋಗಿಸುವಂತಹ ರೀತಿಯಲ್ಲಿ ರೂಪಿಸಲ್ಪಡುತ್ತೀರ ಎಂಬುದನ್ನೂ ನೆನಪಿಟ್ಟುಕೊಳ್ಳಿ.
- S. ಪರಮಶಿವನ್
ಪ್ರಾರ್ಥನಾ ಅಂಶ:
ನಮ್ಮ ಸೇವಾ ಕ್ಷೇತ್ರಗಳಲ್ಲಿ ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ನಾವು ಭೇಟಿಯಾಗುವ ಆತ್ಮಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482