Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.05.2023
Share:

By Village Missionary Movement

Thursday, 25-May-2023

ಧೈನಂದಿನ ಧ್ಯಾನ(Kannada) – 25.05.2023

 

ನಿಜವಾದ ಆರಾಧನೆ

 

 "ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವದು. ನನ್ನ ರಕ್ಷಣೆಯು ಆತನಿಂದಲೇ" - ಕೀರ್ತನೆ 62:1

 

ಒಮ್ಮೆ, ಪ್ರಸಿದ್ಧ ಬೋಧಕರಾದ ಹೆನ್ರಿ ವಾರ್ಡ್ ಪೀಚರ್ ಅವರನ್ನು ಒಂದು ದೊಡ್ಡ ಚರ್ಚ್‌ನಲ್ಲಿ ಬೋಧಿಸಲು ಆಹ್ವಾನಿಸಲಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಅವರು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಆದುದರಿಂದ ಅವರ ಸಹೋದರನು ಅಲ್ಲಿಗೆ ಬೋಧಿಸಲು ಹೋದರು. ಆ ಸಭೆಯು ಜನರಿಂದ ತುಂಬಿತ್ತು. ಆದರೆ ಉತ್ತಮವಾಗಿ ಬೋಧಿಸುವ ಪ್ರತಿಭೆಯನ್ನು ಹೊಂದಿದ್ದ ಹೆನ್ರಿ ಪೀಚರ್ ಆ ದಿನ ಬೋಧಿಸಲು ಬಂದಿಲ್ಲ ಎಂದು ಸ್ಪಷ್ಟವಾದಾಗ, ಅನೇಕರು ಚರ್ಚ್ ಅನ್ನು ಬಿಟ್ಟು ಹೊರಗೆ ಹೋಗಲು ಪ್ರಾರಂಭಿಸಿದರು. ಪೀಚರ್ ಅವರ ಸಹೋದರ ಅದರ ಬಗ್ಗೆ ಅಸಮಾಧಾನಗೊಳ್ಳಲಿಲ್ಲ. ಗೊಣಗುತ್ತಿದ್ದ ಜನಸಮೂಹದ ಮುಂದೆ ಎದ್ದುನಿಂತು, "ಇಂದು ಬೆಳಿಗ್ಗೆ ಹೆನ್ರಿ ಪೀಚರ್‌ ಅವರನ್ನು ಆರಾಧಿಸಲು ಬಂದವರೆಲ್ಲರೂ ಚರ್ಚ್‌ನಿಂದ ಹೊರಡಿ, ಉಳಿದವರು ಇಲ್ಲಿ ಕುಳಿತು ದೇವರನ್ನು ಆರಾಧಿಸಿ" ಎಂದು ಹೇಳಿದರು.

 

ನಮ್ಮ ಆರಾಧನೆಗಳಲ್ಲಿ ನಾವು ಏನು ಮಾಡುತ್ತಿದ್ದೇವೆ? ಆ ಸೇವಕನ ಮೂಲಕ ದೇವರು ನನ್ನೊಂದಿಗೆ ಏನು ಮಾತನಾಡಲು ಸಿದ್ಧರಾಗಿದ್ದಾರೋ ಎಂದು ಸೇವಕರಲ್ಲಿ ದೇವರನ್ನು ನೋಡುತ್ತಿದ್ದೇವಾ? ಅಥವಾ ಸೇವಕರ ಸಂದೇಶವನ್ನು ಗಮನಿಸಿ "ಸೂಪರ್, ಸುಮಾರಾಗಿದೆ, ಚೆನ್ನಾಗಿಲ್ಲ" ಎಂದು ಸಮೀಕ್ಷೆ ಮಾಡುತ್ತಿದ್ದೇವೆಯೇ? ಅಥವಾ ಒಬ್ಬ ಪ್ರಸಿದ್ಧ ಸೇವಕನ ಮೂಲಕವಾಗಿ ಮಾತ್ರವೇ ದೇವರು ನಮ್ಮೊಂದಿಗೆ ಮಾತನಾಡುತ್ತಾರೆಂದು ಅಂದುಕೊಂಡಿದ್ದೇವಾ? ಈ ರೀತಿಯ ಯೋಚನೆ ನಮ್ಮಲ್ಲಿದ್ದರೆ ಆರಾಧನೆಯನ್ನು ಮುಗಿಸಿ ಹೋಗುವಾಗ ಹಲವು ಕೊರತೆಗಳನ್ನು ಕಂಡು ಹೊರಡುತ್ತೇವೆ.

 

ನನಗೆ ತಿಳಿದ ಒಬ್ಬ ಹಿರಿಯ ದೇವ ಸೇವಕರು ಅಧಿಕಾರದೊಂದಿಗೆ, ಎಚ್ಚರಿಕೆಯೊಂದಿಗೆ ಬೋಧಿಸುವ ಕೃಪೆಯನ್ನು ಹೊಂದಿದ್ದಾರೆ. ಒಮ್ಮೆ ಅವರು ಸಭೆಯೊಂದರಲ್ಲಿ ಉಪದೇಶವನ್ನು ಮುಗಿಸಿದ ನಂತರ, ಒಬ್ಬ ಮಹಿಳೆ ಅವರ ಬಳಿಗೆ ಬಂದು, "ಅಯ್ಯಾ, ಸಂದೇಶವು ತುಂಬಾ ಚೆನ್ನಾಗಿತ್ತು" ಎಂದು ಹೇಳಿದರು. ಸೇವಕರು ತಕ್ಷಣ ಕೇಳಿದರು. "ವಿಧೇಯರಾದಿರಾ?" ಎಂದು. ಹೌದು, ಯಾರು ಬೋಧಿಸುತ್ತಾರೆ? ಹೇಗೆ ಬೋಧಿಸುತ್ತಾರೆ? ಎಂಬುದಕ್ಕಿಂತ ನಾವು ಕೇಳಿದ ಸತ್ಯಕ್ಕೆ ವಿಧೇಯರಾಗುತ್ತಿದ್ದೇವಾ? ಎಂಬುದೇ ಮುಖ್ಯ.

 

ಪ್ರಿಯರೇ! ನೀವು ನಿಜವಾಗಿಯೂ ದೇವರನ್ನು ಆರಾಧಿಸಲು ಬಯಸುತ್ತೀರಾ? ಹಾಗಿದ್ದಲ್ಲಿ, ಹಾಡುಗಳನ್ನು ಗ್ರಹಿಸಿ ಹಾಡಿರಿ. ಓದುವ ದೇವರ ವಾಕ್ಯಗಳ ಮೂಲಕ ದೇವರು ನನ್ನೊಂದಿಗೆ ಮಾತನಾಡುತ್ತಾರೆ ಎಂದು ನಂಬಿರಿ. ಪ್ರಕಟಣೆಗಳಿಗೆ ಗಮನ ಕೊಟ್ಟು ಅದರಲ್ಲಿ ಹೇಳಲ್ಪಡುವ ಆ ವಾರದ ಕಾರ್ಯಕ್ರಮಗಳಿಗಾಗಿ ಮತ್ತು ವಿವಾಹದಲ್ಲಿ ಸೇರುವ ದಂಪತಿಗಳಿಗಾಗಿ ಪ್ರತಿದಿನ ಪ್ರಾರ್ಥಿಸಿರಿ. ಸಂದೇಶದ ಸಮಯದಲ್ಲಿ ಈ ಎಚ್ಚರಿಕೆ ನನಗಲ್ಲ, ಬೇರೆಯವರಿಗೆ, ಏಕೆಂದರೆ ನಾನು ಹಾಗಲ್ಲ ಎಂದು ಸ್ವಾರ್ಥವಾದ ಹೆಮ್ಮೆಯಿಂದಿರದೇ ತಾಳ್ಮೆಯಿಂದ ದೇವರ ವಾಕ್ಯಗಳಿಗೆ ವಿಧೇಯರಾಗಿ. ಇಂತಹ ಮನಸ್ಸಿನಿಂದ ಆಲಯಕ್ಕೆ ಬರುವವರಿಗೆ ಮಾತ್ರವೇ, ನಿಜವಾದ ಆರಾಧನೆಯ ಬೆಲೆ ಅರಿತುಕೊಳ್ಳಲು ಸಾಧ್ಯ.

- Mrs. ಎಬನ್ ಸಂತೋಷ್

 

ಪ್ರಾರ್ಥನಾ ಅಂಶ:

ಪ್ರತಿಯೊಂದು ಸಹ ಸೇವಕರಿಗಾಗಿಯೂ ಮತ್ತು ಅವರ ಮೂಲಕ ಭೇಟಿಯಾಗುವ ವ್ಯಕ್ತಿಗಳಿಗಾಗಿಯೂ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş