Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.05.2023
Share:

By Village Missionary Movement

Tuesday, 23-May-2023

ಧೈನಂದಿನ ಧ್ಯಾನ(Kannada) – 23.05.2023

 

ಮಗುವಿಗಾಗಿ

 

"...ಯೆರೂಸಲೇವಿುನ ಸ್ತ್ರೀಯರೇ, ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ" - ಲೂಕ 23:28

 

ಜಾನ್ ಸ್ಕಡರ್ ಅಮೆರಿಕಾದಲ್ಲಿ ಪ್ರಸಿದ್ಧ ವೈದ್ಯರಾಗಿದ್ದರು. ಆದರೆ ಅವರು ತಮ್ಮ ಆರಾಮದಾಯಕ ಅವಕಾಶಗಳನ್ನು ತ್ಯಾಗ ಮಾಡಿದರು ಮತ್ತು ಮಿಷನರಿಯಾಗಿ ಸೇವೆ ಮಾಡಲು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಬಂದರು. ಅವರು ಮಾತ್ರವಲ್ಲ, ಅವರ ಒಂಬತ್ತು ಮಕ್ಕಳು ಉತ್ತರ ಭಾರತದಲ್ಲಿ ಮಿಷನರಿಗಳಾಗಿ ಸೇವೆ ಸಲ್ಲಿಸಿದರು. ಸುಮಾರು 600 ವರ್ಷಗಳಿಂದ ಒಂದು ಸ್ಕಡರ್ ಕುಟುಂಬವು ಭಾರತದಲ್ಲಿ ಒಬ್ಬರ ನಂತರ ಒಬ್ಬರು ಸೇವೆ ಸಲ್ಲಿಸುತ್ತಿದ್ದಾರೆ.

 

ಒಮ್ಮೆ ಸ್ಕಡರ್ ಅವರ ಸ್ನೇಹಿತರೊಬ್ಬರು ಅವರ ಬಳಿ ಹೀಗೆ ಕೇಳಿದರು, "ನಿಮ್ಮ ಕುಟುಂಬದ ಶ್ರದ್ಧಾಪೂರ್ವಕ ಸೇವೆಯ ರಹಸ್ಯವೇನು?" ಎಂದರು. ಸ್ಕಡರ್ ಹೇಳಿದ್ದೇನು ಗೊತ್ತಾ? “ನನ್ನ ಹೆಂಡತಿ ಒಂದು ಪ್ರಾರ್ಥಿಸುವ ತಾಯಿಯಾಗಿದ್ದದ್ದೇ. ಅವಳ ಪ್ರಾರ್ಥನಾ ಜೀವನದ ಮೂಲಕವೇ ಮಕ್ಕಳಿಗೆ ರಕ್ಷಣೆಯ ಅನುಭವ ಸಿಕ್ಕಿತು. ನನ್ನ ಮಕ್ಕಳ ಪ್ರತಿ ಜನ್ಮದಿನದಂದು ಇಡೀ ದಿನ ಪ್ರಾರ್ಥನೆಯಲ್ಲಿ ಕಳೆಯುತ್ತಾಳೆ. ಅಂದು ವಿಶೇಷವಾಗಿ ಆ ಮಗುವಿನ ರಕ್ಷಣೆ, ವಿದ್ಯಾಭ್ಯಾಸ ಆರೋಗ್ಯ ಮತ್ತು ಮಗುವಿನ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ" ಎಂದು ಹೇಳಿದರು.

 

ತಾಯಂದಿರೇ! ಇಂತಹ ಒಂದು ಸಾಕ್ಷಿ ನಿಮ್ಮ ಬಗ್ಗೆ ಮಾತನಾಡಲು ಸಾಧ್ಯವೇ? ಅನೇಕ ಪರಿಶುದ್ಧರ ಜೀವನದ ಮಹತ್ವದ ತಿರುವಿಗೆ ತಾಯಂದಿರು ಕಾರಣರಾಗಿದ್ದಾರೆ. ಜಾನ್ ವೆಸ್ಲಿ ಮತ್ತು ಅಬ್ರಹಾಂ ಲಿಂಕನ್ ನಂತಹ ವ್ಯಕ್ತಿಗಳು ಜಯಶೀಲರಾಗಿ ಕಾಣಲು ದೈವಭಕ್ತಿಯುಳ್ಳ ಅವರ ತಾಯಂದಿರ ಪ್ರಾರ್ಥನೆ ಮತ್ತು ಸಾಕ್ಷಿ ಜೀವನವೇ ಕಾರಣ. ಇಂದು, ನಾವು ನಮ್ಮ ಮಕ್ಕಳ ಅಸಹಕಾರ, ಬುದ್ಧಿವಂತಿಕೆಯ ಕೊರತೆ ಮತ್ತು ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಬೇಕೆಂದು ಕೇಳುವ ಅನೇಕ ಪ್ರಾರ್ಥನಾ ಅಂಶಗಳನ್ನು ಸೇವಕರಿಗೆ ಕಳುಹಿಸುತ್ತೇವೆ ಮತ್ತು ನಾವು ನಮ್ಮ ನೆರೆಹೊರೆಯವರಿಗೆ ಮತ್ತು ಸಂಬಂಧಿಕರಿಗೆ ಈ ಕುಂದುಕೊರತೆಗಳ ಬಗ್ಗೆ ಹೇಳಿ ಅವರ ಸಹಾನುಭೂತಿ ಪಡೆಯಲು ಅಳುತ್ತಿದ್ದೇವೆ ಹೊರತು, ಅವರಿಗಾಗಿ ಗಂಟೆಗಟ್ಟಲೆ ದೇವರ ಬಳಿ ಪ್ರಾರ್ಥಿಸುತ್ತಿದ್ದೇವೆಯೇ? ಒಂದು ದಿನ ಅದಕ್ಕಾಗಿ ಪ್ರತ್ಯೇಕಿಸಿ ಉಪವಾಸ ಮಾಡಿ ಅವರಿಗಾಗಿ ಪ್ರಾರ್ಥಿಸುತ್ತಿದ್ದೇವೆಯೇ?

 

ಒಬ್ಬ ದೇವ ಮನುಷ್ಯ, “ನಾನು ಚಿಕ್ಕವನಿದ್ದಾಗ, ನನ್ನ ತಾಯಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ನನ್ನ ಸಹೋದರ ಸಹೋದರಿಯರು ಮಲಗಿರುವಾಗ ನಮ್ಮೆಲ್ಲರ ಪಕ್ಕದಲ್ಲಿ ಕುಳಿತು ನಮ್ಮ ತಲೆಯ ಮೇಲೆ ಕೈಯಿಟ್ಟು ಪ್ರಾರ್ಥಿಸುತ್ತಿದ್ದರು. ಅದರ ಫಲವಾಗಿ ಇಂದು ನಾವೆಲ್ಲರೂ ದೇವರಲ್ಲಿ ಭಯಭಕ್ತಿ ಉಳ್ಳವರಾಗಿದ್ದೇವೆ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದೇವೆ ಮತ್ತು ದೇವರ ಸೇವೆಯನ್ನು ಮಾಡುತ್ತಿದ್ದೇವೆ’’ ಎಂದು ಸಾಕ್ಷಿ ಹೇಳಿದರು. ಹೌದು, ತಾಯಂದಿರೇ, ನಿಮ್ಮ ಮಕ್ಕಳ ಅಭ್ಯಾಸಗಳಿಗಾಗಿ, ವಿದ್ಯಾಭ್ಯಾಸಕ್ಕಾಗಿ, ಕೆಲಸಕ್ಕಾಗಿ, ಮದುವೆಗಾಗಿ, ಹೀಗೆ ಎಂತಾ ಚಿಕ್ಕ ಕಾರ್ಯವಾಗಿದ್ದರೂ ಪರವಾಗಿಲ್ಲ. ಮೊದಲು ದೇವರಿಗೆ ತಿಳಿಸಿರಿ. ಅವರು ಎಲ್ಲವನ್ನೂ ಮಾರ್ಪಡಿಸಲು ಶಕ್ತನು.

- Mrs. ಜೆಬಾ ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಆಸ್ಪತ್ರೆ ಸೇವೆಯ ಮೂಲಕ ಭೇಟಿಯಾಗುವ ರೋಗಿಗಳಿಗೆ ದೇವರು ಪರಿಪೂರ್ಣವಾದ ಸ್ವಸ್ಥತೆಯನ್ನು ನೀಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş