Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.05.2023
Share:

By Village Missionary Movement

Monday, 22-May-2023

ಧೈನಂದಿನ ಧ್ಯಾನ(Kannada) – 22.05.2023

 

ಆತಿಥ್ಯ

 

"ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರ ಮಾಡಿರಿ" -1 ಪೇತ್ರ 4:9

 

ಆತಿಥ್ಯ-ಆತಿಥ್ಯವು ಒಂದು ನಿಜವಾದ ಕ್ರೈಸ್ತನಿಗೆ ವಿಶಿಷ್ಟವಾದ ಗುರುತಾಗಿದೆ. ಆತಿಥ್ಯವು ಇತರರಿಗೆ ಕ್ರಿಸ್ತನ ಪ್ರೀತಿಯನ್ನು ಪ್ರದರ್ಶಿಸಲು ಉತ್ತಮ ಮಾರ್ಗವಾಗಿದೆ. ಲಾಜರನು, ಮರಿಯಳು ಮತ್ತು ಮಾರ್ಥಳು ಈ ಮೂವರು ಆತಿಥ್ಯ ನೀಡುವುದರಲ್ಲಿ ಶ್ರೇಷ್ಠರು. ಯೇಸು ಕ್ರಿಸ್ತನು ಅವರ ಮನೆಯಲ್ಲಿ ಇರಲು ಬಯಸಿದರು. ಪ್ರತಿಯೊಂದು ಕ್ರೈಸ್ತರ ಮನೆಯೂ ಹೀಗಿರಬಹುದು. ಕರ್ತನ ನಾಮದ ಮಹಿಮೆಗಾಗಿ ನಾವು ಯಾರನ್ನಾದರೂ ಉಪಚರಿಸಿದರೆ, ಅದು ದೇವರನ್ನೇ ಉಪಚರಿಸಿದ ‌ಹಾಗೆ ಪರಿಗಣಿಸಲಾಗುತ್ತದೆ. ಈ ಆತಿಥ್ಯದ ಬಗ್ಗೆ ನಾವು ಕೆಲವು ಪ್ರಾಯೋಗಿಕ ಸಲಹೆಗಳನ್ನು ಪಡೆಯೋಣವೇ?

 

1. ನಾವು ದೇವರನ್ನು ಹೇಗೆ ಉಪಚರಿಸುತ್ತೇವೊ ಹಾಗೆಯೇ ನಮ್ಮ ಎಲ್ಲಾ ಅತಿಥಿಗಳನ್ನು ಉಪಚರಿಸಬೇಕು. ಅದು ಸರಿಯಾದ ನಡವಳಿಕೆ.

 

2. ನಮ್ಮ ಆತಿಥ್ಯವನ್ನು ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಮೀಸಲಿಡಬಾರದು. ಬಡವರು, ಅಂಗವಿಕಲರು ಮತ್ತು ಬಡವರನ್ನು ಆಹ್ವಾನಿಸಬೇಕು.

 

3. ಅತಿಥಿಗಳು ಹೋದ ನಂತರ ಅವರ ಬಗ್ಗೆ ಕೆಟ್ಟದಾಗಿ ಮಾತನಾಡದಿರುವುದು ಒಳ್ಳೆಯ ಗುಣ. ಅವರ ನಡತೆ ಏನೇ ಇರಲಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬಿಡೋಣ.

 

4. ಆತಿಥ್ಯವು ದುಬಾರಿಯಾದದ್ದು, ನಮ್ಮ ಇತರ ಕೆಲಸಗಳನ್ನು ತಡೆಮಾಡುತ್ತದೆ ಎಂಬುದು ನಿಜವಾಗಿದ್ದರೂ, ಇದು ಎಲ್ಲಕ್ಕಿಂತ ಮುಖ್ಯವಾದ ಸೇವೆಯೆಂದು ಪರಿಗಣಿಸಬೇಕು.

 

5. ದುಬಾರಿಯಾದ ಭೋಜನವನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಆಡಂಬರದ ತಿಂಡಿ ತಿನಿಸುಗಳನ್ನು ಮಾಡುವ ಅಗತ್ಯವಿಲ್ಲ. ಸಂತೋಷದಿಂದ ಸರಳವಾದ ಆಹಾರವನ್ನು ನೀಡಿದರೂ ಉತ್ತಮವೇ.

 

6. ನಮ್ಮ ಆತಿಥ್ಯದ ಉದ್ದೇಶವು ಸ್ವಯಂ-ಹೆಮ್ಮೆಯನ್ನು ತೋರಿಸಿಕೊಳ್ಳುವಂತದ್ದಾಗಿರಬಾರದು. ಇದನ್ನು ಕ್ರಿಸ್ತನ ಮೇಲಿನ ಪ್ರೀತಿಯಿಂದ ಮಾಡಬೇಕೇ ಹೊರತು ಹೆಸರು ಮತ್ತು ಖ್ಯಾತಿಗಾಗಿ ಅಲ್ಲ.

 

ಪ್ರಿಯರೇ! ನಿಮ್ಮ ಸಭೆಗೆ ಹೊಸದಾಗಿ ಬರುವ ಕುಟುಂಬದ ಸದಸ್ಯರನ್ನು ದಯವಿಟ್ಟು ವಿಚಾರಿಸಿ ಮತ್ತು ಆ ದಿನ ಅವರನ್ನು ನಿಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿ. ಆ ದಿನ ನಮಗೆ ಬೇರೆ ಕೆಲಸವಿದ್ದರೂ ಅದನ್ನು ಬದಿಗಿಟ್ಟು ಹೀಗೆ ಪ್ರೀತಿ ತೋರಿಸಿದರೆ ಆ ಕುಟುಂಬದವರನ್ನು ಸಂತೋಷಪಡಿಸಿದಂತಾಗುತ್ತದೆ. ಮೊಟ್ಟ ಮೊದಲು ಅವರು ಹೊಂದಿದ ಆತಿಥ್ಯದಿಂದಲೇ ಅನೇಕರು ಸತತವಾಗಿ ಸಭೆಗೆ ಬಂದು ಸದಸ್ಯರಾಗಿ ಮಾರ್ಪಡುತ್ತಾರೆ. ಕ್ರಿಸ್ತನ ಸಭೆಗಾಗಿ ನಾವು ಈ ರೀತಿಯ ಯಾವುದಾದರೂ ಒಂದನ್ನು ಮಾಡಬಾರದೇ?

- Mrs. ವಿಲಿಯಂ ಮೆಕ್ಡೊನಾಲ್ಡ್

 

ಪ್ರಾರ್ಥನಾ ಅಂಶ:

ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುವ ಸೇವೆಗಳ ಮೂಲಕ ನಾವು ಭೇಟಿಯಾಗುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş