Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.05.2023 (Kids Special)
Share:

By Village Missionary Movement

Saturday, 20-May-2023

ಧೈನಂದಿನ ಧ್ಯಾನ(Kannada) – 21.05.2023 (Kids Special)

 

ನಿಜವಾದ Friend

 

"ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ" - ಜ್ಞಾನೋಕ್ತಿ 27:6

 

ಬೇಸಿಗೆ ರಜೆ ಕೊಟ್ಟಾಯ್ತು, ತುಂಬಾ ಜಾಲಿಯಾಗಿದ್ದೀರಾ? ಬಿಸಿಲು ತುಂಬಾ ಹೆಚ್ಚಾಗಿರುವುದರಿಂದ ಊರು ಸುತ್ತಬಾರದು, ಚೆನ್ನಾಗಿ ನೀರು ಕುಡಿಯಬೇಕು ಅಪ್ಪ-ಅಮ್ಮನ ಮಾತು ಕೇಳಬೇಕು, ಸರೀನಾ! ನಿಮಗೆ ಸ್ನೇಹಿತರು ಇದ್ದಾರಲ್ಲ, ಅದರಲ್ಲೂ Close friend ಇರ್ತಾರೆ ತಾನೇ, ನಿಮ್ಮೊಂದಿಗೆ ಬೆರೆಯುವ ಸ್ನೇಹಿತರು ಒಳ್ಳೆಯವರಾ ಎಂದು ನೋಡಬೇಕು. ಇಂದು ಅದರ ಬಗ್ಗೆಯೇ ಒಂದು ಕಥೆಯನ್ನು ಕೇಳಲಿದ್ದೇವೆ. ಕೇಳೋಣ್ವಾ!

 

ಒಂದು ಕಾಡಿನಲ್ಲಿ ಕತ್ತೆ ಮತ್ತು ಹುಲಿ ಸ್ನೇಹಿತರಾಗಿದ್ದರಂತೆ. ಏನಪ್ಪಾ ಇದು, ಇವರಿಬ್ಬರು ಒಟ್ಟಿಗೆ ಸ್ನೇಹಿತರಾಗಿರಲು ಅವಕಾಶವೇ ಇಲ್ಲ ಎಂದು ತಾನೇ ಯೋಚಿಸುತ್ತಿದ್ದೀರ, ಸರಿ ಹಾಗಾದರೆ ಬನ್ನಿ ಇವರಿಬ್ಬರು ಏನು ಮಾತನಾಡಿಕೊಂಡರು ಎಂದು ಕೇಳೋಣ್ವಾ? ಕತ್ತೆಯು ಹುಲಿಯನ್ನು ನೋಡಿ ಹೇಳ್ತಂತೆ, ಆ ಹುಲ್ಲು ಎಷ್ಟು ಸುಂದರವಾಗಿದೆ ಅಂತಾ. ನೀವು ನೇರಳೆ ಬಣ್ಣವನ್ನು ನೋಡಿದ್ದೀರಾ? ಎಂದು ಹೇಳಲು, ಹುಲ್ಲು ಹಸಿರಾಗಿಯೇ ಇರುತ್ತದೆ ಎಂದಿತು ಹುಲಿ. ಹೀಗೆ ನೇರಳೆ ಅಥವಾ ಹಸಿರು ಎಂಬ ವಾಗ್ವಾದ ನಡೆಯಿತು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಸಿಂಹರಾಜ ಬಂದರು. ಸಮಸ್ಯೆ ಏನು ಎಂದು ಕೇಳಿದರು. ನಡೆದ ಸಂಗತಿಯನ್ನು ತಿಳಿಸಲು ಸಿಂಹರಾಜನು ಯೋಚಿಸಿ, ಹುಲಿಗೆ ಒಂದು ವಾರದವರೆಗೆ ಆಹಾರವಿಲ್ಲವೆಂದು ತೀರ್ಪು ನೀಡಿತು. ಏನು ರಾಜ ಹುಲ್ಲು ಹಸಿರು ಬಣ್ಣದಲ್ಲಿಯೆ ತಾನೆ ಇರುತ್ತೆ, ನಾನು ಸರಿಯಾಗಿ ತಾನೆ ಹೇಳಿದೆ ಎಂದಿತು ಹುಲಿ . ನೀನು ಹೇಳಿದ್ದಕ್ಕೆ ನಿನಗೆ ಶಿಕ್ಷೆಯಲ್ಲ. ಕಾಡಿಗೆ ಮಂತ್ರಿಯಾಗಿರುವ ನೀನು, ಕತ್ತೆಯೊಂದಿಗೆ friendship ಇಟ್ಟುಕೊಂಡಿದ್ಯ. ನೀನು ನಿಜ ಹೇಳಿದರೂ ಒಪ್ಪಿಕೊಳ್ಳದ friend ನಿನಗೆ friend-ಆ? ನಿನ್ನ ಉನ್ನತವಾದ ಜವಾಬ್ದಾರಿಯನ್ನು ಅರಿಯದೆ silly matterಗೆ ಹೋಗಿ ಕತ್ತೆಯ ಜೊತೆ ಜಗಳವಾಡುತಿದ್ಯ ನೋಡು, ಅದಕ್ಕಾಗಿಯೇ ನಿನಗೆ ಈ ಶಿಕ್ಷೆ ಎಂದಿತು.

 

 ಒಳ್ಳೆಯ friend ಎಷ್ಟು ಮುಖ್ಯ ಎಂದು ನಿಮಗೆ ಗೊತಾಯ್ತಾ? ನಿಮ್ಮ ಜೀವನದಲ್ಲಿ ಒಳ್ಳೆಯ ಸ್ನೇಹಿತರು ಸಿಗಬೇಕೆಂದು prayer ಮಾಡಬೇಕು. ತಪ್ಪಾದ ಕೆಲಸಗಳನ್ನು ಮಾಡುವಾಗ ಅದನ್ನು ಸರಿಪಡಿಸುವುದೇ ಒಳ್ಳೆಯ ಸ್ನೇಹಿತನ ಗುರುತಾಗಿದೆ. So, ನೀವು ಸಹ ಒಳ್ಳೆಯ ಮಕ್ಕಳಾಗಿರಬೇಕು, ಮತ್ತು ನಿಮ್ಮ ಸ್ನೇಹಿತರನ್ನು ಒಳ್ಳೆಯ ದಾರಿಯಲ್ಲಿ ನಡಿಸಬೇಕು. Ok ನಾ ಕುಟ್ಟೀಸ್?

- ಶ್ರೀಮತಿ. ದೆಬೊರಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al