Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.05.2023
Share:

By Village Missionary Movement

Saturday, 20-May-2023

ಧೈನಂದಿನ ಧ್ಯಾನ(Kannada) – 20.05.2023

 

ನಾನೇ ಕಾರಣ

 

"ನಿಮಗೆ ತೀರ್ಪು ಆಗದಂತೆ ನೀವೂ ತೀರ್ಪು ಮಾಡಬೇಡಿರಿ" - ಮತ್ತಾಯ 7:1

 

ಒಬ್ಬ ಬೋಧಕರ ಮನೆಯೊಳಗೆ ಮರವನ್ನು ಕಡಿಯಲು ಒಂದು ಮರಕಡಿಯುವವರನ್ನು ಕರೆಸಲಾಗಿತ್ತು. ಮರ ಕಡಿಯುವಾಗ ಅವರ ಹಣೆಯಿಂದ ಬೆವರು ನೆಲದ ಮೇಲೆ ಬೀಳುತ್ತಿತ್ತು. ಅದನ್ನು ಒರೆಸಿಕೊಳ್ಳುತ್ತಾ, "ಎಲ್ಲಾ ಆದಾಮನು ಮಾಡಿದ ಪಾಪದಿಂದಲೇ ಬಂದಿದ್ದು. ಆದಾಮನ ಅವಿಧೇಯತೆಯಿಂದಲೇ ತಾನೇ ನನಗೆ ಈ ಗತಿ. ಅದರಿಂದಲೇ ತಾನೇ ನಾನು ಶಾಪದಿಂದ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ" ಎಂದು ಪ್ರಲಾಪಿಸುತ್ತಲೇ ಕೆಲಸ ಮಾಡುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬೋಧಕರು ಇವರಿಗೆ ಸತ್ಯವನ್ನು ಸಾಬೀತುಪಡಿಸಲು ಬಯಸಿದ್ದರು.

 

ಸಂಜೆ ಮರಕಡಿಯುವವನು ತನ್ನ ಕೂಲಿಯನ್ನು ತೆಗೆದುಕೊಳ್ಳಲು ಬೋಧಕರ ಬಳಿಗೆ ಬಂದನು. ಬೋಧಕರು ಸಂಬಳದೊಂದಿಗೆ ಒಂದು ಪ್ಯಾಕೆಟ್ ನೀಡಿ ಇದನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ನಾಳೆ ಕೆಲಸಕ್ಕೆ ಬರುವಾಗ ಇದನ್ನು ತನ್ನಿ, 100 ರೂಪಾಯಿ ಕೊಡುತ್ತೇನೆ ಎಂದರು. ಮರಕಡಿಯುವವನು ಅದನ್ನು ತೆಗೆದುಕೊಂಡು ಹೋದನು. ಈ ಪೊಟ್ಟಣವನ್ನು ಸುರಕ್ಷಿತವಾಗಿಡೋದಕ್ಕೇ 100 ರೂಪಾಯಿ ಅಂದರೆ, ಅದರೊಳಗೆ ಇನ್ನೆಷ್ಟು ದುಬಾರಿ ವಸ್ತು ಇರಬಹುದೆಂದು ಯೋಚಿಸಿ ಅದನ್ನು ತೆರೆದನು. ಒಂದು ಇಲಿ ಚೀಲದಿಂದ ಹಾರಿ ಕಾಡಿಗೆ ಓಡಿಹೋಯಿತು. ಮರುದಿನ ಬೋಧಕರಿಗೆ ವಿಷಯ ತಿಳಿಸಿದನು. ಬೋಧಕರು, "ನಿನ್ನೆಯೆಲ್ಲಾ ನೀನು ಆದಾಮನ ಅವಿಧೇಯತೆಯಿಂದಲೇ ಕಷ್ಟಪಡುತ್ತಿದ್ದೇನೆ ಎಂದು ಪ್ರಲಾಪಿಸುತ್ತಿದ್ದಲ್ಲಾ, ಈಗ ನೀನು ವಿಧೇಯತೆ ತೋರಿದ್ದೀಯಾ?" ಎಂದರು. ಕೆಲವರು ಏದೆನ್ ತೋಟದ ಮಧ್ಯದಲ್ಲಿ ಯಾಕೆ ಒಳ್ಳೆಯದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರವನ್ನು ದೇವರು ಇಟ್ಟಿರಬೇಕಾಗಿತ್ತು ಎಂದು ಹೇಳುತ್ತಾರೆ? ಅದನ್ನು ಇಡದೇ ಇದ್ದಿದ್ದರೆ, ಹವ್ವಳು ಪಾಪ ಮಾಡುತ್ತಿರಲಿಲ್ಲವಲ್ಲಾ! ಎನ್ನುತ್ತಾರೆ.

 

ಮನುಷ್ಯನ ಮೂಲಭೂತ ಸಮಸ್ಯೆಗಳಲ್ಲಿ ಒಂದು ತನ್ನ ತಪ್ಪುಗಳಿಗೆ ಇತರರನ್ನು ದೂಷಿಸುವುದು! ಆ ದಿನ ತಾನು ಮಾಡಿದ ತಪ್ಪಿಗೆ ಆದಾಮನು ಹವ್ವಳನ್ನು ದೂಷಿಸಿದ. ಅವಳೋ ಸರ್ಪವನ್ನು ತೋರಿಸಿದಳು. ಇಂದಿಗೂ ನಾವು ಹಾಗೆಯೇ ವರ್ತಿಸುತ್ತಿದ್ದೇವೆ. ಮಕ್ಕಳು ತಮ್ಮ ಪೋಷಕರನ್ನು ದೂಷಿಸುತ್ತಾರೆ ಮತ್ತು ಪೋಷಕರು ತಮ್ಮ ಮಕ್ಕಳನ್ನು ದೂಷಿಸುತ್ತಾರೆ. ಕೆಲವರು ತಮ್ಮ ತಪ್ಪುಗಳಿಗಾಗಿ ಸಮಾಜ ಮತ್ತು ಸರ್ಕಾರವನ್ನು ದೂಷಿಸುತ್ತಾರೆ. ಆದರೆ ತೀರ್ಪಿನ ದಿನದಂದು ನಾವು ದೇವರ ಮುಂದೆ ನಿಂತಾಗ ನಮ್ಮ ತಪ್ಪಿಗಾಗಿ ನಾವು ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಆದುದರಿಂದ ಪ್ರಿಯರೇ, ನಾವು ನಮ್ಮ ತಪ್ಪುಗಳನ್ನು ಇತರರ ಮೇಲೆ ಹೊರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೇ, ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ದೇವರ ಬಳಿ ಕ್ಷಮೆಯನ್ನು ಕೇಳಿದರೆ ನ್ಯಾಯ ತೀರ್ಪಿನ ದಿನದ ಬಗ್ಗೆ ಭಯಪಡುವ ಅಗತ್ಯವಿಲ್ಲ.

- Mrs. ಜ್ಯೋತಿ ಆನಂದ್

 

ಪ್ರಾರ್ಥನಾ ಅಂಶ:

ಬೈಬಲ್ ಕಾಲೇಜು ವಿದ್ಯಾರ್ಥಿಗಳು ತಂಗಲು ಅಗತ್ಯವಾಗಿರುವ ಹಾಸ್ಟೆಲ್ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş