Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.05.2023
Share:

By Village Missionary Movement

Friday, 19-May-2023

ಧೈನಂದಿನ ಧ್ಯಾನ(Kannada) – 19.05.2023

 

ಶೂನ್ಯ

 

"ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು..." - ಲೂಕ 19:42

 

ಒಬ್ಬ ವ್ಯಕ್ತಿ ವೈದ್ಯರ ಬಳಿಗೆ ಹೋದನು. ಅವನ ಬಳಿ ಮಾತನಾಡಿದ ಡಾಕ್ಟರ್, "ನಿಮಗೆ ದೊಡ್ಡ ಸಮಸ್ಯೆಯೇನೂ ಇಲ್ಲ. ಆದರೆ ಒಂದಿಷ್ಟು ಪರೀಕ್ಷೆ ಮಾಡಿಸಿಕೊಂಡರೆ ಸಮಾಧಾನವಾಗುತ್ತದೆ" ಎಂದರು. ಟೆಸ್ಟ್ ರಿಪೋರ್ಟ್ ಗಳು ಬಂದವು. ಅವರ ದೇಹಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಆ ಮನುಷ್ಯ ವೈದ್ಯರ ಬಳಿ ಯಾವ ರೋಗವೂ ಇಲ್ಲ ಎಂದು ಹೇಳುತ್ತಿದ್ದೀರ. ಆದರೂ, ಏನೋ ಒಂದು ದಣಿವು ನನ್ನೊಳಗೆ ನೆಲೆಗೊಂಡಿದೆ ಮತ್ತು ನನ್ನನ್ನು ಸಂಪೂರ್ಣವಾಗಿ ಅಶಕ್ತನನ್ನಾಗಿ ಮಾಡುತ್ತಿದೆ" ಎಂದರು. ಕೂಲಂಕಷವಾಗಿ ವಿಚಾರಿಸಿದ ನಂತರ ವೈದ್ಯರು ಹೇಳಿದರು, "ನಿಮಗೆ ಮನೋದುಃಖವಿದೆ ಅದಕ್ಕೆ ನಮ್ಮಲ್ಲಿ ಔಷಧಿ ಇಲ್ಲ. ಒಂದು ಕೆಲಸ ಮಾಡಿ, ನಮ್ಮ ಆಸ್ಪತ್ರೆಯ ಹತ್ತಿರ ಸರ್ಕಸ್ ಇದೆ. ಅಲ್ಲಿ ಒಬ್ಬ ಕೋಡಂಗಿ ಇದ್ದಾನೆ. ಅವನು ತನ್ನ ತಮಾಷೆಯ ಕೃತ್ಯಗಳಿಂದ ಇತರರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಾನೆ. ಹಾಗಾಗಿ ನೀವು ಅಲ್ಲಿಗೆ ಹೋದರೆ ನಿಮ್ಮ ಮನಸ್ಸು ಹಗುರಾಗುತ್ತದೆ" ಎಂದು ಆಲೋಚನೆ ಹೇಳಿದರು. ಆ ಮನುಷ್ಯನು ವೈದ್ಯರನ್ನು ಕಂಡು ಕಣ್ಣೀರಿಟ್ಟನು. "ಆ ಕೋಡಂಗಿ ನಾನೇ" ಎಂದನು.

 

ಇದನ್ನು ಓದುತ್ತಿರುವ ನಾವು ಸಹ ನಮ್ಮ ಮಾತು ಮತ್ತು ಕಾರ್ಯಗಳಿಂದ ಅನೇಕರನ್ನು ಮೆಚ್ಚಿಸಬಹುದು. ನಮ್ಮ ಸುತ್ತಮುತ್ತಲಿನ ಜನರು ಯಾವಾಗಲೂ ನಗುತ್ತಿರುತ್ತಾರೆ. ಹಾಗಾಗಿ ನಮ್ಮ ಸುತ್ತಲೂ ದೊಡ್ಡ ಜನಸಮೂಹವನ್ನು ನೋಡಬಹುದು. ಆದರೆ ನಾವು ಮಾತ್ರ ನಮ್ಮೊಳಗೆ ಶೂನ್ಯತೆಯಿದೆ ಎಂದು ಭಾವಿಸಬಹುದು. ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಏನನ್ನಾದರೂ ಹುಡುಕುತ್ತಿರುತ್ತಾನೆ. ಒಬ್ಬರು ಯೋಚಿಸಬಹುದು: ನನ್ನ ಜೀವನಕ್ಕೆ ಸಾಕಷ್ಟು ಹಣ ಸಿಕ್ಕರೆ ನನಗೆ ಚಿಂತೆಯೇ ಇಲ್ಲ ಎಂದು! ಮತ್ತೊಬ್ಬರು ನನಗೆ ಒಳ್ಳೆಯ ಕೆಲಸ ಸಿಕ್ಕರೆ ನನ್ನ ಮನೋಭಾರವೆಲ್ಲಾ ತೀರಿಹೋಗುತ್ತದೆ ಎಂದುಕೊಳ್ಳಬಹುದು. ಇನ್ನು ಕೆಲವರು ವಿದ್ಯೆ, ಪದವಿ, ಉನ್ನತಿ, ಅಂತಸ್ತು, ಒಳ್ಳೆಯ ಸಂಸಾರ ಹೀಗೆ ಯಾವುದಾದರೊಂದರ ಮೂಲಕ ಸಂತೃಪ್ತಿಯನ್ನು ಪಡೆಯಬಹುದು ಎಂದು ಭಾವಿಸಬಹುದು.

 

ಆದರೆ ಪ್ರತಿಯೊಬ್ಬ ಮನುಷ್ಯನೊಳಗೆ ಒಂದು ಶೂನ್ಯವಿದೆ. ಅದನ್ನು ಯೇಸುಕ್ರಿಸ್ತನಾಗಿರುವ ನಿಜವಾದ ದೇವರು ಹೊರತುಪಡಿಸಿ ಯಾರೂ ಮತ್ತು ಯಾವುದೂ ಅದನ್ನು ತುಂಬಲು ಸಾಧ್ಯವಿಲ್ಲ. ನಿಮಗೆ ಅಕಸ್ಮಾತ್ತಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ನಿಧಿ ಸಿಕ್ಕರೂ ಆ ಶೂನ್ಯವನ್ನು ತುಂಬಿ ನೆಮ್ಮದಿ ನೀಡಲಾರದು. ಆದ್ದರಿಂದ ಇಂದು ಯೇಸು ಕ್ರಿಸ್ತನನ್ನು ಸ್ವೀಕರಿಸಿ. ಅವರು ನಿಮ್ಮ ಆತ್ಮದಲ್ಲಿದ್ದಾಗ, ಲೌಕಿಕ ಜೀವನದಲ್ಲಿ ಹಿನ್ನಡೆಗಳಿದ್ದರೂ ಸಹ, ನೀವು ಸಂತೋಷ, ತೃಪ್ತಿ ಮತ್ತು ಶಾಂತಿಯಿಂದ ಇರುತ್ತೀರಿ. ಅವರು ನಿಮ್ಮ ಆತ್ಮಕ್ಕೆ ಬರಲು ಸಿದ್ಧರಾಗಿದ್ದಾರೆ. ನೀವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

- K. ಮುತ್ತುಲಕ್ಷ್ಮಿ

 

ಪ್ರಾರ್ಥನಾ ಅಂಶ:

ಬೈಬಲ್ ಕಾಲೇಜಿಗೆ ಮುಂದಿನ ಜೂನ್‌ ತಿಂಗಳಲ್ಲಿ ದೇವರು ಪೂರ್ವನಿರ್ಧರಿತ ವ್ಯಕ್ತಿಗಳನ್ನು ಹೊಸ ತರಗತಿಗೆ ಕರೆತರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al