Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.05.2023
Share:

By Village Missionary Movement

Wednesday, 17-May-2023

ಧೈನಂದಿನ ಧ್ಯಾನ(Kannada) – 17.05.2023

 

ಕಣ್ಣೀರು ಅಗತ್ಯ

 

"...ನಾನು ಬಹಳವಾಗಿ ಅತ್ತೆನು" - ಪ್ರಕಟಣೆ. 5:4

  

ಪವಿತ್ರ ಬೈಬಲ್ ಕಣ್ಣೀರಿನಿಂದ ಬರೆಯಲ್ಪಟ್ಟಿರುವ ಒಂದು ಪುಸ್ತಕವಾಗಿದೆ. ಅದನ್ನು ಕಣ್ಣೀರಿನಿಂದ ಓದುವವರಿಗೆ ಮಾತ್ರ ಅದು ತನ್ನ ನಿಧಿಯನ್ನು ಬಹಿರಂಗಪಡಿಸುತ್ತದೆ. ಕರ್ತವ್ಯಕ್ಕಾಗಿ ಅಥವಾ ಸಮಯ ಕಳೆಯುವುದಕ್ಕಾಗಿ ಓದುವವರಿಗೆ ದೇವರು ಏನನ್ನೂ ಬಹಿರಂಗಪಡಿಸುವುದಿಲ್ಲ.

 

ಸೀನಾಯಿ ಪರ್ವತದ ಮೇಲೆ ದೇವರ ಸಮ್ಮುಖದಲ್ಲಿ ಕಣ್ಣೀರಿನಿಂದ ಮತ್ತು ನಡುಕದಿಂದ ಕಾದಿದ್ದ ಮೋಶೆಯೊಂದಿಗೇನೆ ದೇವರು ಮಾತಾಡಿದರು. ತನ್ನ ಜನರಾದ ಇಸ್ರಾಯೇಲ್ಯರಿಗೆ ಬದಲಾಗಿ ತನ್ನ ಹೆಸರನ್ನು ಜೀವ ಪುಸ್ತಕದಿಂದ ಅಳಿಸಿಹಾಕಬೇಕೆಂದು ಮನವಿ ಮಾಡಿದ ಮೋಶೆಯ ಕಣ್ಣೀರಿನ ಪ್ರಾರ್ಥನೆಯಿಂದ ಒಂದು ದೇಶವೇ ರಕ್ಷಿಸಲ್ಪಟ್ಟಿತು. ದಾನಿಯೇಲನ ಕಣ್ಣೀರಿನಿಂದ ತುಂಬಿದ ದೀರ್ಘ ಉಪವಾಸ ಪ್ರಾರ್ಥನೆಯು ಪರಲೋಕದಿಂದ ಗಬ್ರಿಯೇಲ್ ದೂತನನ್ನು ಇಳಿಯುವಂತೆ ಮಾಡಿ ದೇವರ ರಹಸ್ಯಗಳನ್ನು ಬಹಿರಂಗಪಡಿಸಲು ಕಾರಣವಾಯಿತು. ಯೇಸುವಿನ ಪ್ರೀತಿಯ ಶಿಷ್ಯನಾದ ಯೋಹಾನನು, ಪ್ರಕಟಣೆ ಗ್ರಂಥದಲ್ಲಿ, ಮುದ್ರಿಸಲ್ಪಟ್ಟ ಸುರುಳಿಯನ್ನು ತೆರೆದು ನೋಡಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಸುರಿಸಿದನು. ತಕ್ಷಣವೇ ಹಿರಿಯರೊಬ್ಬರು ಅವನನ್ನು ಸಮಾಧಾನಪಡಿಸಿ ಯೂದಾ ಕುಲದಲ್ಲಿ ಜನಿಸಿದ ಸಿಂಹವು ಆ ಏಳು ಮುದ್ರೆಗಳನ್ನು ಬಿಚ್ಚುವಲ್ಲಿ ಜಯಹೊಂದಿದನು ಎಂದನು. ಅನೇಕ ಕೀರ್ತನೆಗಳನ್ನು ಕಣ್ಣೀರಿನಿಂದಲೇ ಬರೆಯಲಾಗಿದೆ.

 

ನಾವು ಈ ಲೋಕದ ಉಜ್ಜೀವನದ ಇತಿಹಾಸವನ್ನು ನೋಡಿದರೆ, ಅನೇಕ ಕ್ರೈಸ್ತ ನಾಯಕರು ಮತ್ತು ಸುವಾರ್ತಾಬೋಧಕರು ನಾಶವಾಗುತ್ತಿರುವ ಲೋಕಕ್ಕಾಗಿ ದೇವರ ಸಮ್ಮುಖದಲ್ಲಿ ಕಣ್ಣೀರಿನಿಂದ ಬೇಡುವವರಾಗಿದ್ದರು. ಕರ್ತನಾದ ಯೇಸು ಕ್ರಿಸ್ತನು ಸಹ ದುಃಖದ ವ್ಯಕ್ತಿಯಾಗಿದ್ದರು ಎಂದು ಬರೆಯಲ್ಪಟ್ಟಿರುವ ಪ್ರಕಾರ ಇವರು ಕೂಡ ಅಂತಹ ಹೃದಯವನ್ನು ಹೊಂದಿದ್ದರು.

 

ಇಂದು ಕ್ರೈಸ್ತ ಧರ್ಮದಲ್ಲಿ ಕಾಣುತ್ತಿರುವ ದೊಡ್ಡ ಕೊರತೆಯೆಂದರೆ ಮುರಿದ ಹೃದಯ ಮತ್ತು ಕಣ್ಣೀರಿನ ಕಣ್ಣುಗಳೇ ಆಗಿವೆ. ಸತ್ಯವೇದವನ್ನು ಬೋಧಿಸುವ ಅನೇಕ ಬೋಧಕರು ಕಣ್ಣೀರು ಇಲ್ಲದೆ ಇದ್ದಾರೆ ಆದ್ದರಿಂದಲೇ ಅವರ ಸೇವೆಯು ಫಲವಿಲ್ಲದೆ ಬರಿದಾಗಿದೆ. ವಿಶ್ವಾಸಿಗಳ ಬಳಿ ನಾಶವಾಗುವ ಆತ್ಮಗಳ ಬಗ್ಗೆ ಭಾರ ಕಡಿಮೆಯಾಗಿದೆ. ಹೀಗೆ ನಾನು ಇದನ್ನು ಹೇಳುವಾಗ, ಏನೋ ಕೃತಕವಾಗಿ ಒಂದು ಕ್ರೈಸ್ತನು ಕಣ್ಣೀರನ್ನು

ಸುರಿಸಿದರೆ ಅದೊಂದು ಮಾಯಾಜಾಲವಾಗಿ ಏನನ್ನಾದರೂ ಸಾಧಿಸುತ್ತದೆ ಎಂದು ನಾವು ಭಾವಿಸಬಾರದು. ಇದು ಹೃದಯದಿಂದ ಬರುವ ಭಾರವಲ್ಲ; ಒಬ್ಬ ಕ್ರೈಸ್ತನಿಗೆ ಆತ್ಮದಿಂದ ಭಾರ ಪ್ರಕಟವಾಗಬೇಕು. ಇಂದಿನ ಕ್ರೈಸ್ತ ಪ್ರಪಂಚದ ಅತ್ಯಗತ್ಯ ಅಗತ್ಯವೆಂದರೆ ತಾಳ್ಮೆ, ಭಯಭಕ್ತಿ, ಮುರಿದ ಹೃದಯ ಮತ್ತು ಕಣ್ಣೀರು. ದೇವರು ಇವೆಲ್ಲವುಗಳನ್ನು ಶೀಘ್ರದಲ್ಲೇ ನಮ್ಮೊಳಗೆ ಕಳುಹಿಸಲಿ.

 

ವಿನಾಶ ಮತ್ತು ಪಾಪವು ಎಲ್ಲೆಡೆ ಹೆಚ್ಚುತ್ತಿರುವ ಈ ಅಂತ್ಯ ದಿನಗಳಲ್ಲಿ ಕಣ್ಣೀರು ಮತ್ತು ಪ್ರಲಾಪದಿಂದ ಪ್ರಾರ್ಥಿಸುವುದು ನಮ್ಮಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇವರು ನಮಗೆ ಅಂತಹ ಆಧ್ಯಾತ್ಮಿಕ ಭಾರವನ್ನು ನೀಡಲಿ.

- A.W. ಡೋಜರ್

 

ಪ್ರಾರ್ಥನಾ ಅಂಶ:

ನಮ್ಮ ಪೂರ್ಣ ಸಮಯದ ಸೇವಕರ ಕುಟುಂಬಗಳಲ್ಲಿ ಇನ್ನೂ ರಕ್ಷಣೆ ಹೊಂದದವರು ಯೇಸುವಿನ ಪ್ರೀತಿಯನ್ನು ರುಚಿ ನೋಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş