Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.05.2023
Share:

By Village Missionary Movement

Monday, 15-May-2023

ಧೈನಂದಿನ ಧ್ಯಾನ(Kannada) – 15.05.2023

 

ನೋ (No)

  

"ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು" - ಜ್ಞಾನೋಕ್ತಿ 6:32

 

ಅಮೂಲ್ಯವಾದ ಯೌವನಸ್ಥರೇ! ವಿವಾಹಪೂರ್ವ ಲೈಂಗಿಕತೆ ತಪ್ಪು. ಇದು ನಮ್ಮ ಜೀವನವನ್ನು ಹಾಳುಮಾಡುತ್ತದೆ. ವಿವಾಹಪೂರ್ವ ಲೈಂಗಿಕತೆಯು ಇರಬಾರದು ಎಂಬುದಕ್ಕೆ ಕೆಲವು ಉತ್ತಮ ಕಾರಣಗಳನ್ನು ನೋಡೋಣ.

 

1. ಮದುವೆಗೆ ಮೊದಲು, ಮದುವೆಯ ಸಂಬಂಧದ ಹೊರಗೂ ಲೈಂಗಿಕತೆ ಇರಬಾರದು ಎಂದು ದೇವರು ಆಜ್ಞಾಪಿಸುತ್ತಾರೆ (ವಿಮೋಚನಕಾಂಡ 20:14) ಬದಲಾಗಿ ಮದುವೆಯ ಸಂಬಂಧದಲ್ಲಿ ಅದನ್ನು ಅವರೇ ಇಟ್ಟಿದ್ದಾರೆ.

 

2. ವಿವಾಹಪೂರ್ವ ಸಂಭೋಗವನ್ನು ಬೇಡವೆಂದು ನಿರ್ಧರಿಸಿದಾಗ, ಹಲವು ವಿಧವಾದ ಅಪರಾಧ, ನಿರಾಶೆ ಮತ್ತು ಆತಂಕದಿಂದ ಕಾಪಾಡಿಕೊಳ್ಳುತ್ತೀರ. ನೀವು ದೇವರ ಪ್ರತಿರೂಪದಲ್ಲಿ ರಚಿಸಲ್ಪಟ್ಟಿದ್ದೀರಿ. ನಿಮ್ಮ ಘನತೆಯನ್ನು ಇತರರು ಅಪಹಾಸ್ಯ ಮಾಡಲು ಬಿಡಬೇಡಿ.

 

3. ನೀವು ವಿವಾಹಪೂರ್ವ ವಿಷಯದಲ್ಲಿ ತೊಡಗಿಸಿಕೊಂಡಾಗ ನೀವು ಪ್ರೀತಿಸಲ್ಪಡುವುದಿಲ್ಲ ಬದಲಾಗಿ ಬಳಸಲ್ಪಡುತ್ತೀರಿ. ಎಂಬುದನ್ನು ಮರೆತುಬಿಡಬೇಡಿರಿ.

 

4. ಯುವ ಸಹೋದರಿಯರೇ, ಮದುವೆಗೆ ಮುಂಚೆಯೇ ಒಂದು ನಿಂದನೀಯ ಸಂಬಂಧದಿಂದಾಗಿ ನೀವು ಅಕ್ರಮ ಮಗುವನ್ನು ಗರ್ಭಧರಿಸಬಹುದು. ಇದು ನಿಮಗೆ ಸಮಾಜದಲ್ಲಿ ದೊಡ್ಡ ಅವಮಾನ ತರುತ್ತದೆ. ಗರ್ಭಪಾತವು ಕೊಲೆಯಾಗಿದೆ. ಅದು ಸಹ ಜೀವಕ್ಕೆ ಅಪಾಯ.

 

5. ಮದುವೆಗೆ ಮೊದಲು ವ್ಯಭಿಚಾರ ಮಾಡದಿರಲು ನಿರ್ಧರಿಸುವ ಮೂಲಕ, ನೀವು ಏಡ್ಸ್ ಎಂಬ ಗುಣಪಡಿಸಲಾಗದ ಕೊಲೆಗಾರ ರೋಗದಿಂದ ಪಾರಾಗಬಹುದು.

 

6. ವಿವಾಹಪೂರ್ವ ಲೈಂಗಿಕತೆಯು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಅಧ್ಯಯನಗಳು ಸ್ಥಗಿತಗೊಳ್ಳಬಹುದು ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳಬಹುದು.

 

7. ವಿವಾಹಪೂರ್ವ ಸಂಭೋಗದಲ್ಲಿ ತೊಡಗುವುದರಿಂದ ನೀವು ನಿಮ್ಮ ದೇವರ ಪೂರ್ವನಿರ್ಧರಿತ ಸಂಗಾತಿಯನ್ನು ಕಳೆದುಕೊಳ್ಳುತ್ತೀರಿ.

 

ಇದನ್ನು ಓದುತ್ತಿರುವ ವಿವಾಹಿತ ಸ್ನೇಹಿತರೇ, ಮೇಲಿನ ಸಲಹೆ ನಿಮಗೂ!

- ಜೂನ್ ಗಾರ್ಲ್ಯಾಂಡ್

 

ಪ್ರಾರ್ಥನಾ ಅಂಶ:

ವಿವಿಬಿಎಸ್ ಸೇವೆಗಳಿಗೆ ಸ್ವಯಂಸೇವಕರಾಗಿ ಬರುವ ಯೌವನಸ್ಥರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel