Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.05.2023
Share:

By Village Missionary Movement

Saturday, 13-May-2023

ಧೈನಂದಿನ ಧ್ಯಾನ(Kannada) – 13.05.2023

 

ಪ್ರಾರ್ಥನೆ ಮತ್ತು ಕ್ರಿಯೆ

 

"... ಕ್ರಿಯೆಗಳಿಲ್ಲದವನಾಗಿದ್ದರೆ... ಅಂಥ ನಂಬಿಕೆಯು ಇವನನ್ನು ರಕ್ಷಿಸುವದೋ?" - ಯಾಕೋಬ 2:14

 

ಕುಮಾರ್ ಒಬ್ಬ ದೇವರ ಪರಮ ಭಕ್ತನಾಗಿದ್ದನು. ಅವನಿಗೆ ಹಾಕಿ ಕ್ರೀಡೆ ಎಂದರೆ ತುಂಬಾ ಇಷ್ಟ. ಹಾಗಾಗಿ ಹೇಗಾದರೂ ಮಾಡಿ ಹಾಕಿಯಲ್ಲಿ ಚಾಂಪಿಯನ್ ಆಗಬೇಕು ಎಂಬುದೇ ಅವನ ಜೀವಶ್ವಾಸವಾಗಿತ್ತು. ದೇವರೇ ನನ್ನನ್ನು ಚಾಂಪಿಯನ್ ಮಾಡಿ ಎಂದು ಪ್ರತಿದಿನ ಪ್ರಾರ್ಥಿಸುತ್ತಿದ್ದನು. ಅವನು ಪ್ರತಿದಿನ ಏನು ಮಾಡಲು ಮರೆತರೂ, ಈ ಪ್ರಾರ್ಥನೆಯನ್ನು ಪ್ರಾರ್ಥಿಸಲು ಮಾತ್ರ ಎಂದಿಗೂ ಮರೆಯುತ್ತಿರಲಿಲ್ಲ. ಒಂದು ದಿನ ಅವನು, ದೇವರೇ! ಚಿಕ್ಕಂದಿನಿಂದಲೂ ನನ್ನನ್ನು ಹಾಕಿಯಲ್ಲಿ ಚಾಂಪಿಯನ್ ಆಗಿ ಮಾಡಿ ಎಂದು ಬೇಡುತ್ತಿದ್ದೇನೆ. ನನಗಾಗಿ ಏನಾದರೂ ಮಾಡಿದ್ದೀರಾ? ಎಂದು ಕೇಳಿದನು. ತಕ್ಷಣವೇ ದೇವರು ನನಗೆ ನಿನ್ನನ್ನು ಚಾಂಪಿಯನ್ ಮಾಡಲು ಆಸೆಯೇ. ಆದರೆ ನೀನು ಮೈದಾನಕ್ಕೆ ಹೋಗಿ ಆಟವಾಡಿದರೆ ತಾನೇ ನಿನ್ನನ್ನು ಚಾಂಪಿಯನ್ ಆಗಿ ಮಾಡಬಹುದು. ಆದರೆ ನೀನು ಮನೆಯಲ್ಲೇ ಕುಳಿತು ಟಿವಿಯಲ್ಲಿ ಹಾಕಿ ಆಟವನ್ನು ನೋಡುತ್ತಿದ್ದರೆ ನಿನ್ನ ಆಸೆಯನ್ನು ನಾನು ಹೇಗೆ ಪೂರೈಸಲು ಸಾಧ್ಯ? ಎಂದು ಹೇಳಿದರಂತೆ. ಇಂದು ನಮ್ಮಲ್ಲಿ ಅನೇಕರು ಈ ಯುವಕನಂತೆಯೇ ಇದ್ದಾರೆ.

 

ಇದನ್ನು ಋತುಮಾನಕ್ಕನುಗುಣವಾಗಿ ನೋಡಿದರೆ, ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಓದಲು ಪ್ರಯತ್ನಿಸದೆ ಆಟವಾಡುತ್ತಾರೆ ಮತ್ತು ಪರೀಕ್ಷೆಯ ಸಮಯದಲ್ಲಿ ಅವರು ಭಯಂಕರವಾಗಿ ದೇವರನ್ನು ಹುಡುಕುತ್ತಾರೆ. ದೇವರು ಅವರಿಗಾಗಿ ಏನಾದರೂ ಮಾಡಲು ಸಾಧ್ಯವೇ? ಕಾಲೇಜ್ ಗೆ ಹೋಗುವ ಸಮಯದಲ್ಲಿ ಈಗ ಲೈಫ್ ಎಂಜಾಯ್ ಮಾಡೋಣ ಎಂದು ಫೋನು, ಇಂಟರ್ ನೆಟ್, ಕ್ಲಬ್ ಗಳಿಗೆ ಹೋಗಿ ದಿನಗಳನ್ನು, ಸಮಯವನ್ನು ಹಾಳು ಮಾಡಿಬಿಟ್ಟು.ಪರೀಕ್ಷಾ ದಿನಗಳು ಬಂದ ಕೂಡಲೇ ಪುಸ್ತಕ ತೆರೆದು ಅಜ್ಜಿ ನನಗಾಗಿ ಪ್ರೆಯರ್ ಮಾಡಿ ಅಂತ ಹೇಳಿಬಿಟ್ಟು ಪುಸ್ತಕ ತೆರೆದರೆ ಎಲ್ಲವೂ ಹೊಸದಾಗಿ ಕಾಣಿಸುತ್ತಾ, ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಅನಿಸುತ್ತದೆ. ಆ ದಿನ ಕಣ್ಣೀರು ಸುರಿಸಿದರೂ ಪ್ರಯೋಜನವಿದೆಯೇ?

 

ನಮ್ಮಲ್ಲಿ ಕೆಲವರು ಸತ್ಯವೇದವನ್ನು ಓದುವುದೇ ಇಲ್ಲ. ಆದರೆ ದೇವರೇ ನನಗೆ ಸತ್ಯವೇದದ ಗುಪ್ತ ಅರ್ಥವನ್ನು ತೋರಿಸಿ. ಅಂತರಂಗದಲ್ಲಿರುವ ನಿಧಿಯನ್ನು ನನಗೆ ತೋರಿಸಿ, ಸತ್ಯವೇದದಲ್ಲಿ ಯಾರಿಗೆ ಯಾವ ಸಂದೇಹವಿದ್ದರೂ ತಕ್ಷಣವೇ ಉತ್ತರಿಸುವ ವೇದ ವಿದ್ವಾಂಸನನ್ನಾಗಿ ಮಾಡು ಎಂದು ಪ್ರಾರ್ಥಿಸುತ್ತೇವೆ. ದೇವರು ಅದಕ್ಕೆ ಏನು ಉತ್ತರ ನೀಡುತ್ತಾರೆ? ಮೊದಲು ನೀನು ಸತ್ಯವೇದವನ್ನು ದಿನವೂ ಕ್ರಮವಾಗಿ ಪ್ರಾರ್ಥನೆಯೊಂದಿಗೆ, ಆಸೆಯಿಂದ ಓದು, ನಂತರ ನಾನು ನಿನಗೆ ರಹಸ್ಯವನ್ನು ಬಹಿರಂಗಪಡಿಸುತ್ತೇನೆ ಎನ್ನುತ್ತಾರೆ.

 

ಪ್ರಿಯರೇ! ನಮ್ಮ ಆಧ್ಯಾತ್ಮಿಕ ಜೀವನದಲ್ಲಿ, ನಾವು ಅಭಿಷೇಕ ಹೊಂದಬೇಕು, ಪರಿಶುದ್ದವಾಗಿ ಜೀವಿಸಬೇಕು, ದೇವರನ್ನು ದರ್ಶಿಸಬೇಕು ಎಂದೆಲ್ಲಾ ಬಯಸುತ್ತೇವೆ. ಆದರೆ ನಾವು ಅದಕ್ಕಾಗಿ ಪ್ರಯಾಸಪಟ್ಟು, ಕಾದಿದ್ದು ಪ್ರಾರ್ಥಿಸಿದ್ದೇವೆಯೇ? ಕ್ರಿಯೆ ಇಲ್ಲದ ನಂಬಿಕೆ ಸತ್ತದ್ದಾಗಿರುವಂತೆ, ನಂಬಿಕೆಯಿಲ್ಲದ ಕ್ರಿಯೆಯೂ ವ್ಯರ್ಥವಾಗಿದೆ.

- Mrs. ನಂದಿನಿ ಸೆಲ್ವಿನ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಯೌವನಸ್ಥರು ಮತ್ತು ಮಕ್ಕಳನ್ನು ದೇವರು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş