By Village Missionary Movement
Friday, 12-May-2023ಧೈನಂದಿನ ಧ್ಯಾನ(Kannada) – 12.05.2023
ದೃಢವಾದ ಮಾತು
"ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ ಅಧರ್ಮಿಗಳ ಭ್ರಾಂತಿಯ ಸೆಳವಿಗೆ ಸಿಕ್ಕಿಕೊಂಡು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಟರಾಗದಂತೆ ಎಚ್ಚರಿಕೆಯಾಗಿರಿ” - 2 ಪೇತ್ರ 3:17
ವೇಲ್ಸ್‌ನ ಪ್ರಸಿದ್ಧ ಬೋಧಕರಲ್ಲಿ ಕ್ರಿಸ್ಮಸ್ ಇವಾನ್ಸ್ ವಿಶೇಷವಾದವರು. ಅವರ ಮೂಲಕ ವೇಲ್ಸ್ ದೇಶದಲ್ಲಿ ದೊಡ್ಡ ಉಜ್ಜೀವನ ಉಂಟಾಯಿತು. ಅವರು ಮಾನಸಾಂತರ ಹೊಂದಿದ್ದನ್ನು ಕಂಡು ಅವರ ಹಳೆಯ ದುಷ್ಟ ಸ್ನೇಹಿತರು ಇವರನ್ನು ಹಿಡಿದು ಒಡೆದು ಬಾಧಿಸಿದಾಗ ಇವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಇವರು ಆಂಗ್ಲೆಸಿ ದ್ವೀಪದಲ್ಲಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆದರೆ ನಂತರದ ದಿನಗಳಲ್ಲಿ ಇವರು ಹಿಂಜಾರಿಹೋದ ಸ್ಥಿತಿಗೆ ತಳ್ಳಲ್ಪಟ್ಟರು. ಇವರ ಆಧ್ಯಾತ್ಮಿಕ ಜೀವನ ತಣ್ಣಗಾಗಿ ಬಿಟ್ಟಿತು. ಸತ್ಯವೇದವನ್ನು ಓದುವುದು, ಪ್ರಾರ್ಥಿಸುವುದು ಮತ್ತು ಬೋಧನೆ ಎಲ್ಲವೂ ಕಡಿಮೆಯಾಗಿ ಬಿಟ್ಟಿತು. ಈ ಸಂದರ್ಭದಲ್ಲಿ, ಒಂದು ದಿನ ಪವಿತ್ರಾತ್ಮವು ಇವರೊಂದಿಗೆ ಬಲವಾಗಿ ಕಾಣಿಸಿದರು. ಈ ಅನುಭವದ ನಂತರ "ದೇವರೊಂದಿಗಿನ ಒಡಂಬಡಿಕೆ" ಎಂಬ ಶೀರ್ಷಿಕೆಯ ಕೆಳಗಿನ ದೃಢೀಕರಣಗಳನ್ನು ಬರೆದರು ಮತ್ತು ಅವುಗಳಲ್ಲಿ ಪ್ರತಿಯೊಂದಕ್ಕೂ ಸಹಿ ಹಾಕಿದರು. ಅವು ಈ ಕೆಳಗಿನಂತಿವೆ:
1. ನಾನು ನನ್ನ ಆತ್ಮ ಮತ್ತು ದೇಹವನ್ನು ಯೇಸುಕ್ರಿಸ್ತನೇ ನಿಮಗೆ ಕೊಡುತ್ತೇನೆ. ಪಾಪದಿಂದಲೂ ಮತ್ತು ನಿತ್ಯ ಮರಣದಿಂದಲೂ ನನ್ನನ್ನು ಬಿಡಿಸಿ ನಿತ್ಯ ಜೀವದೊಳಗೆ ನನ್ನನ್ನು ನಡೆಸಿ. ಆಮೆನ್.
2. ನಾನು ನಿಮ್ಮನ್ನು ಪೂರ್ಣಹೃದಯದಿಂದ ಪ್ರೀತಿಸುವಂತೆ ಸುನ್ನತಿ ಮಾಡಿಸಿಕೊಂಡ ಹೃದಯವನ್ನು ನನಗೆ ಕೊಡಿ. ನಿಮ್ಮ ನ್ಯಾಯತೀರ್ಪಿನಲ್ಲಿ ನಾನು ನಾಚಿಕೆಪಟ್ಟು ಕಪಟಿಯ ಹಾಗೆ ಕಾಣದಂತೆ ನನ್ನನ್ನು ಆವರಿಸಿ. ಆಮೆನ್.
3. ನಾನು ನನ್ನ ಸಮಯ, ಹಣ, ಪ್ರತಿಭೆ ಮತ್ತು ಬಲವನ್ನು ಸಭೆಯ ಭಕ್ತಿ ವೃದ್ಧಿಗಾಗಿ ಅರ್ಪಿಸುತ್ತೇನೆ. ಆಮೆನ್.
4. ನಾನು ನಿಮ್ಮ ಮೇಲೆ ಗುಣುಗುಟ್ಟುವಂತೆ ಮತ್ತು ನಿಮ್ಮನ್ನು ಗಾಯಪಡಿಸುವಂತೆ ಯಾವುದಾದರೂ ಎಡುವಟ್ಟುಗಳಲ್ಲಿ ಬಿದ್ದು ಹೋದರೂ, ನನ್ನ ಸಮಾಧಾನಕ್ಕೆ ಭಂಗ ಬಾರದೆ ಭದ್ರವಾಗಿರುವಂತೆ ಕೃಪೆ ತೋರಿಸಿ. ಆಮೆನ್.
5. ಯಾವುದೇ ಪಾಪವು ನನ್ನನ್ನು ನಿಮ್ಮಿಂದ ಬೇರ್ಪಡಿಸದಂತೆಯೂ, ಯಾವುದೇ ರೀತಿಯ ಪಾಪದ ಕಾರ್ಯದಿಂದಲೂ ನಿಮ್ಮ ಕೃಪೆಯನ್ನು ಕಳೆದುಕೊಳ್ಳದಂತೆ, ನನ್ನ ಜೀವನ ಮುಗಿಯುವುದರೊಳಗಾಗಿ ನಿಷ್ಪ್ರಯೋಜಕನಾಗದಂತೆ ಕಾಪಾಡಿ. ಆಮೆನ್.
6. ನನ್ನನ್ನು ಪರೀಕ್ಷಿಸುವ ನಿತ್ಯ ನ್ಯಾಯತೀರ್ಪು ನನ್ನ ಮೇಲೆ ಬರುವಾಗ ನಾನು ಬೇರೆ ರೀತಿಯಲ್ಲಿ ಕಾಣದಂತೆ ನಿಮ್ಮ ದೃಷ್ಟಿಯಲ್ಲಿ ಹೇಗೆ ಕಾಣುತ್ತೇನೋ ಅದೇ ರೀತಿಯಲ್ಲಿ ನಾನು ನನ್ನನ್ನು ಕಾಣುವಂತೆ ಕೃಪೆ ತೋರಿಸಿ. ನೀವು ನನ್ನ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ನಾನು ಯೋಚಿಸದಂತೆ ಕೃಪೆ ತೋರಿಸಿ. ಆಮೆನ್.
7. ಆಕಾಶದ ಪಕ್ಷಿಗಳನ್ನು ಪೋಷಿಸುವ ಹಾಗೂ, ಕಾಡಿನ ಪುಷ್ಪಗಳಿಗೆ ತೊಡಿಸುವ ಹಾಗೂ ಅಲ್ಲ. ನಿಮ್ಮ ಕುಟುಂಬದ ಮಗುವನ್ನು ಪೋಷಿಸುವ ಹಾಗೆ ಅಪಾತ್ರನಾದ ನನ್ನನ್ನು ಕಾಪಾಡಿ. ಆಮೆನ್.
ಇಂದು ಕ್ರಿಸ್ಮಸ್ ಇವಾನ್ಸ್ನ ಈ ದೃಢೀಕರಣಗಳನ್ನು ನಾವೂ ತೆಗೆದುಕೊಳ್ಳೋಣ.
- S. ಜಯಕುಮಾರಿ
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿಗಾಗಿ ಮೀಡಿಯಾದಲ್ಲಿ ಕೆಲಸ ಮಾಡಲು ಅನುಭವವುಳ್ಳ ವ್ಯಕ್ತಿಗಳು ಜೊತೆಗೂಡಿ ಕಾರ್ಯ ನಿರ್ವಹಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482