By Village Missionary Movement
Tuesday, 09-May-2023ಧೈನಂದಿನ ಧ್ಯಾನ(Kannada) – 09.05.2023
ಮಾತನಾಡಬಹುದಲ್ಲಾ!
"ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” - ಜ್ಞಾನೋಕ್ತಿ 25:11
ಹೊಸದಾಗಿ ಮದುವೆಯಾದ ಒಂದು ದಂಪತಿಗಳು ಕೆಲಸದ ನಿಮಿತ್ತವಾಗಿ ಹಳ್ಳಿಯಿಂದ ಪಟ್ಟಣಕ್ಕೆ ತೆರಳಿದರು. ಅವರು ನೆಲೆಸಿದ್ದ ಮನೆಯಲ್ಲಿ ಮುಖ ನೋಡಿಕೊಳ್ಳುವ ಒಂದು ಸಣ್ಣ ಕನ್ನಡಿಯನ್ನು ಗೋಡೆಯೊಳಗೆ ಅಳವಡಿಸಲಾಗಿತ್ತು. ಹಿಂದೆಂದೂ ಕನ್ನಡಿಯೇ ನೋಡಿರದ ಆ ವ್ಯಕ್ತಿ ಅದರಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವಾಗ ತನ್ನ ತಂದೆಯನ್ನು ನೋಡಿದಂತೆ ಅನಿಸುತ್ತಿತ್ತು. ಅವರಿಗೆ ತುಂಬಾ ಸಂತೋಷವಾಯಿತು! ಹಾಗಾಗಿ ಪ್ರತಿದಿನ ಬೆಳಗ್ಗೆ ಎದ್ದು ನೇರವಾಗಿ ಕನ್ನಡಿ ಮುಂದೆ ನಿಂತು ತನ್ನ ಅಪ್ಪನನ್ನು ನೋಡುತ್ತಿದ್ದೇನೆ ಅಂದುಕೊಂಡು ಖುಷಿಯಿಂದ ಕೆಲಸಕ್ಕೆ ಹೋಗುತ್ತಿದ್ದನು. ಇದನ್ನು ಕೆಲವು ದಿನಗಳಿಂದ ಗಮನಿಸಿದ ಹೆಂಡತಿ ಒಂದು ದಿನ ಗಂಡ ಕೆಲಸಕ್ಕೆ ಹೋದ ಮೇಲೆ ಬಂದು ಕನ್ನಡಿ ನೋಡಿದಳು. ಅದರಲ್ಲಿ ಒಬ್ಬ ಸುಂದರ ಮಹಿಳೆಯ ಮುಖ ಕಾಣಿಸಿತು. ಅವಳು ಆಘಾತಕ್ಕೊಳಗಾದಳು ಮತ್ತು ಆ ಕ್ಷಣದಿಂದ ಅವಳು ತನ್ನ ಗಂಡನನ್ನು ಅನುಮಾನಿಸಲು ಪ್ರಾರಂಭಿಸಿದಳು. ಅವಳು ತನ್ನ ಶಾಂತಿಯನ್ನು ಕಳೆದುಕೊಂಡಳು. ಮನೆಗೆಲಸವನ್ನು ಸರಿಯಾಗಿ ಮಾಡಲಾಗದೆ ಖಿನ್ನಳಾಗಿ ಕಾಣುತ್ತಿದ್ದಳು. ಅದೊಂದು ದಿನ ಸಹಿಸಲಾರದೆ ನೆರೆಮನೆಯ ಅಜ್ಜಿಗೆ ತನ್ನ ಮನೆಯ ಪರಿಸ್ಥಿತಿಯನ್ನು ತಿಳಿಸಿದಳು. ವಿವರ ತಿಳಿಯಲು ಮನೆಯೊಳಗೆ ಬಂದ ಆ ಅಜ್ಜಿ ಕನ್ನಡಿಯಲ್ಲಿ ಇಬ್ಬರ ಮುಖವನ್ನೂ ನೋಡಿ ಮುಗುಳ್ನಗುತ್ತಾ ಇದು ಕನ್ನಡಿ, ಮುಂದೆ ನಿಂತವರ ಮುಖ ಮಾತ್ರವೇ ಅದರಲ್ಲಿ ಕಾಣುತ್ತದೆ ಎಂದರು. ಗಂಡ ಮತ್ತು ಹೆಂಡತಿ ಇಬ್ಬರೂ ಎಲ್ಲಾ ಅನುಮಾನಗಳನ್ನು ಮೊದಲು ಪರಸ್ಪರ ಚರ್ಚಿಸಿ ತಿಳಿದುಕೊಳ್ಳಿ. ಮೊದಲ ದಿನ ನಿನ್ನ ಗಂಡನ ನಡತೆ ನೋಡಿದಾಗಲೇ ವಿಚಾರಿಸಿದ್ದರೆ ತೊಂದರೆಯೇ ಆಗುತ್ತಿರಲಿಲ್ಲ ಎಂದು ಹೇಳಿ ಅಜ್ಜಿ ಹೊರಟು ಹೋದರು.
ಇಸಾಕ ಮತ್ತು ರೆಬೆಕ್ಕ ಎಂಬ ದಂಪತಿಗಳ ಬಗ್ಗೆ ಆದಿಕಾಂಡದಲ್ಲಿ ಓದುತ್ತೇವೆ. ಅವರಿಗೆ ಏಶಾವನು ಮತ್ತು ಯಾಕೋಬನು ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಈ ಮಕ್ಕಳನ್ನು ಬೆಳೆಸುವಲ್ಲಿ ಮತ್ತು ಪ್ರೀತಿಸುವಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಂಡು ಒಮ್ಮನಸ್ಸಿನಿಂದಿರುವುದನ್ನು ಬಿಟ್ಟು , ತಂದೆ ಒಬ್ಬರನ್ನು ಮತ್ತು ತಾಯಿ ಇನ್ನೊಬ್ಬರನ್ನು ಪ್ರೀತಿಸಿದರು. ಈ ಮನಸ್ಥಿತಿಯಿಂದಾಗಿ ನಂತರದ ದಿನಗಳಲ್ಲಿ ಮಕ್ಕಳಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬೆಳೆದು ಒಬ್ಬರನ್ನೊಬ್ಬರು ಸಾಯಿಸುವ ಮಟ್ಟಕ್ಕೆ ಬೆಳೆದು ಬಿಟ್ಟಿತು.
ಪ್ರೀತಿಯ ದಂಪತಿಗಳೇ! ನಿಮ್ಮ ಜೀವನ ಹೇಗಿದೆ? ದಿನನಿತ್ಯದ ಕೆಲಸ, ಭವಿಷ್ಯದ ಯೋಜನೆ, ಮಕ್ಕಳ ವಿದ್ಯಾಭ್ಯಾಸ, ಬಜೆಟ್, ಏನೇ ಇರಲಿ, ಪರಸ್ಪರ ಮಾತನಾಡೋಣ ಮತ್ತು ಹಂಚಿಕೊಳ್ಳೋಣ, ನಾವು ಮೌನವಾಗಿಯೇ ಇದ್ದು ಕಹಿಯನ್ನು ಬೆಳೆಸಿಕೊಳ್ಳುತ್ತಲೇ ಇದ್ದರೆ, ವ್ಯರ್ಥ ಸಮಸ್ಯೆಗಳು, ಅನುಮಾನಗಳು ಮತ್ತು ಒಡಕುಗಳು ಉದ್ಭವಿಸುತ್ತವೆ. ದೇವರು ನಮ್ಮನ್ನು ವಿಚಾರಿಸುವವರಾಗಿರುವದರಿಂದ, ನಾವು ಸಹ ಒಬ್ಬರನ್ನೊಬ್ಬರು ವಿಚಾರಿಸಿ ನಮ್ಮ ಕುಟುಂಬಗಳನ್ನು ಪ್ರೀತಿಯಿಂದ ಕಟ್ಟೋಣ.
- Mrs. ಅನಿತಾ ಅಲಗರಸ್ವಾಮಿ
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿ ಮೂಲಕ ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೂ ದೇವರ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482