Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.05.2023
Share:

By Village Missionary Movement

Monday, 08-May-2023

ಧೈನಂದಿನ ಧ್ಯಾನ(Kannada) – 08.05.2023

 

ಶೋಧನೆ!

 

"ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು" - ಮತ್ತಾಯ 6:13

 

ಈ ಜಗತ್ತಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಶೋಧನೆಗಳುಂಟು. ಸತ್ಯವೇದದಲ್ಲಿ ಶೋಧನೆಯ ಬಗ್ಗೆ ನೋಡುವುದಾದರೆ, ಅಬ್ರಹಾಮನ ನಂಬಿಕೆಯನ್ನು ಶೋಧಿಸಲಾಯಿತು. ಯೇಸು ಕ್ರಿಸ್ತನು ಸೈತಾನನಿಂದ ಶೋಧನೆನೆಗೆ ಒಳಗಾದರು. ಯೋಬನು ಚೊಕ್ಕ ಬಂಗಾರವಾಗಿ ಕಾಣಲ್ಪಡಲು ಶೋಧಿಸಲ್ಪಟ್ಟರು. ಯೋಸೇಫನಿಗೆ ಬಂದದ್ದೋ ಪಾಪದ ಶೋಧನೆ. ಹೀಗೆ ಯಾವುದೋ ಒಂದು ಕಾರ್ಯದ ಮೂಲಕ ನಾವು ಶೋಧಿಸಲ್ಪಡುತ್ತೇವೆ. ಇಂದು ಯೋಸೇಫನ ಜೀವನದಲ್ಲಿ ಬಂದ ಶೋಧನೆಗಳನ್ನು ಮತ್ತು ಅವುಗಳನ್ನು ಜಯಿಸುವಲ್ಲಿ ಅವರು ಮಾಡಿದ ಸಾಧನೆಗಳನ್ನು ನೋಡೋಣ.

 

ಯೋಸೇಫನು ಒಬ್ಬ ಸುಂದರ ಯುವಕನಾಗಿದ್ದನು. ಇವನು ಪೋಟೀಫರನ ಮನೆಯಲ್ಲಿ ಗುಲಾಮನಾಗಿದ್ದನು, ಆದರೂ ದೇವರಿಗೆ ಸ್ವತಂತ್ರನು! ದೇವರು ಯಾವಾಗಲೂ ಅವನೊಂದಿಗೆ ಇದ್ದರು. ಗುಲಾಮನಾದ ಯೋಸೇಫನನ್ನು ದೇಶದ ಅಧಿಪತಿಯನ್ನಾಗಿ ಮಾಡಲು ದೇವರು ನಿರ್ಧರಿಸಿದರು. ಪಂದ್ಯವಿಲ್ಲದೆ ಪದಕವನ್ನು ಪಡೆಯಲು ಸಾಧ್ಯವೇ? ಸಾಧ್ಯವೇ ಇಲ್ಲ ಅಲ್ವಾ? ಆದ್ದರಿಂದಲೇ ಅವರು ಪರಿಶುದ್ಧತೆಯ ಕುರಿತು ಶೋಧನೆಯನ್ನು ನೇಮಿಸಿದರು. ಬಹಳ ಕಷ್ಟಕರವಾದ ಶೋಧನೆಯೇ. ಒಂದು ಕಾರಣ ಸುಲಭವಾಗಿ ಸಿಲುಕಿಕೊಳ್ಳುವಂತಹ ಯೌವ್ವನ ಮತ್ತು ಇನ್ನೊಂದು ದೊಡ್ಡ ಸ್ಥಳದಿಂದ ಬಂದಂತಹ ಕರೆ. ಆದರೂ ಯೋಸೇಫನು ಶೋಧನೆಯನ್ನು ಜಯಿಸಿದನು. ಕಾರಣ ದೇವರಿಗೆ ಭಯಪಟ್ಟಂತಹ ಜೀವನ, ಆದರೂ ವ್ಯರ್ಥ ಆರೋಪಗಳು, ಜೈಲುವಾಸ, ನಂಬಿಕೆ ದ್ರೋಹ, ಆದರೆ ಮುಕ್ತಾಯ ದೇಶವನ್ನು ಆಳುವ ಜವಾಬ್ದಾರಿ.

 

ಪ್ರೀತಿಯ ಯೌವನಸ್ಥರೇ! ಈ ಪಾಪದ ಶೋಧನೆಯು ರಕ್ಷಣೆಯಿಲ್ಲದ ಸಮಯದಲ್ಲಿ ತಂತ್ರವಾಗಿ ನುಗ್ಗುವಂತಹ ಗುಣವುಳ್ಳದ್ದು. ಇದಕ್ಕೆ ದಾವೀದನು ಸಿಕ್ಕಿಹಾಕಿಕೊಂಡರು. ಯೋಸೇಫನು ದೃಢವಾಗಿ ನಿಂತರು. ಮೊದಲನೆಯದಾಗಿ, ನಾವು ಈ ಶೋಧನೆಗೆ ಸ್ಥಳ ಕೊಟ್ಟು ಬಿಟ್ಟೋ ಎಂದರೆ, ಪಾಪವನ್ನು ವಿರೋಧಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಒಮ್ಮೆ ಪಾಪ ಮಾಡಿದರೆ ಅದನ್ನು ಪುನರಾವರ್ತಿಸುವುದು ಸುಲಭ. ಹಾಗಾಗಿ ನಮ್ಮನ್ನು ನಾವು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಸರಿ... ಈ ಪಾಪದ ಶೋಧನೆಯನ್ನು ತಪ್ಪಿಸಲು ನಾವು ಕೆಲವು ಪ್ರಾಯೋಗಿಕ ಸಲಹೆಗಳನ್ನು ನೋಡೋಣವೇ?

 

1. ಸತ್ಯವೇದವನ್ನು ಪಾಲಿಸಿರಿ: ಮುಚ್ಚಲ್ಪಟ್ಟಿರುವ ಸತ್ಯವೇದವು ನಮ್ಮನ್ನು ಎಚ್ಚರಿಸುವುದಿಲ್ಲ. ಆದ್ದರಿಂದ ಪ್ರತಿದಿನ ಸತ್ಯವೇದವನ್ನು ತೆರೆದು ಓದಿ ಎಚ್ಚರಿಕೆಯನ್ನು, ಬುದ್ಧಿವಂತಿಕೆ ಮತ್ತು ಪ್ರೋತ್ಸಾಹವನ್ನು ಸ್ವೀಕರಿಸಿ.

 

2. ಏಕಾಂತವನ್ನು ತಪ್ಪಿಸಿ: ಒಂಟಿಯಾಗಿರುವ ಮೇಕೆ ನರಿಗೆ ಆಹಾರವಾಗುತ್ತದೆ. ಅಗ್ನಿಕುಂಡದಿಂದ ತೆಗೆದ ಮರದ ದಿಮ್ಮಿ ಬೇಗನೆ ಆರಿಹೋಗುತ್ತದೆ. ಆದ್ದರಿಂದ ದೇವರೊಂದಿಗೆ, ಸಭೆ ಐಕ್ಯತೆಯೊಂದಿಗೆ ಮತ್ತು ಉತ್ತಮ ಸ್ನೇಹಿತರೊಂದಿಗೆ ತೊಡಗಿಸಿಕೊಳ್ಳಿ.

 

3. ಸೋಮಾರಿತನವನ್ನು ತೊಲಗಿಸಿ: ಸೋಮಾರಿಯ ಹೃದಯ ಸೈತಾನನ ಕಾರ್ಯಾಗಾರ ಎಂದರು ಒಬ್ಬರು. ಆದ್ದರಿಂದ ದೇವರು ನಿಮಗೆ ಕೊಟ್ಟಿರುವ ಲೌಕಿಕ ಕೆಲಸವನ್ನು ಪೂರ್ಣ ಶಕ್ತಿ, ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಮಾಡಿ.

 

ಹೌದು, ನಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಮೂಲಕ ಮತ್ತು ವಿರುದ್ಧ ಲಿಂಗದೊಂದಿಗೆ ಅನಗತ್ಯ ಅನ್ಯೋನ್ಯತೆಯನ್ನು ತಪ್ಪಿಸುವ ಮೂಲಕ, ನಾವು ಪಾಪದ ಶೋಧನೆಗಳನ್ನು ಜಯಿಸಿ ಬಾಡದ ಜೀವ ಕಿರೀಟವನ್ನು ಪಡೆಯೋಣ.

- Sis. ಶೇಲ್ ಕ್ರಿಸ್ಟಿ

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಅಡೆತಡೆಯಿಲ್ಲದೆ ಎಲ್ಲಾ ಚಾನಲ್‌ಗಳಲ್ಲಿ ಪ್ರಸಾರವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al