By Village Missionary Movement
Sunday, 07-May-2023ಧೈನಂದಿನ ಧ್ಯಾನ(Kannada) – 07.05.2023 (Kids Special)
VBS ಬಂದು ಬಿಡ್ತು
"ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು." - ಜ್ಞಾನೋಕ್ತಿ 11:30
ಹಲೋ ಪುಟಾಣಿಗಳೇ, ಹೇಗಿದ್ದೀರಾ? ಬೇಸಿಗೆ ರಜೆ ಬಂದು ಬಿಡ್ತು, ತುಂಬಾ ಜಾಲಿ ಅಲ್ವಾ, ಹೌದು ತಾನೇ! ಮೇ ತಿಂಗಳಿನಲ್ಲಿ ಬಿಸಿಲು ಭಯಂಕರವಾಗಿರುತ್ತೆ, ಬಿಸಿಲಲ್ಲಿ ಊರು ಸುತ್ತಬಾರದು, ಹೆಚ್ಚು ನೀರು ಕುಡಿಯಬೇಕು, ಅಪ್ಪ ಅಮ್ಮನ ಮಾತಿಗೆ ವಿಧೇಯರಾಗಬೇಕು, ಓಕೇನಾ? ಮೇ ತಿಂಗಳು ಬಂದ ಕೂಡಲೇ ನಿಮಗೆ ಏನು ನೆನಪಾಗುತ್ತೆ? Super. Correct - ಆಗಿ ಹೇಳುದ್ರಿ. ಹೌದು VBS - ಎಂದರೆ ಹೊಸ ಹಾಡು, ವಾಕ್ಯ, Puppet, ಕಥೆಯೆಲ್ಲಾ ಕೇಳಬಹುದು. Okay. ಖಂಡಿತವಾಗಿಯೂ ನೀವು ನಿಮ್ಮ ಊರಿನಲ್ಲಿ ನಡೆಯುವ VBS ಗೆ ಹೋಗಬೇಕು ಸರೀನಾ? ಈಗ ಒಂದು ಕಥೆ ಕೇಳೋಣ್ವಾ?
ರಮೇಶ್ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಅಮ್ಮನ ಬಳಿ ಹೋಗಿ "ಅಮ್ಮಾ ಊಟ ಕೊಡು, ಟೈಮ್ ಆಯಿತು" ಎಂದನು. ಅಮ್ಮನಿಗೆ ಏನೂ ಅರ್ಥವಾಗುತ್ತಿಲ್ಲ. ಅದಕ್ಕವರು "ಏನಾಯ್ತೋ ನಿಂಗೆ ಎಲ್ಲಿಗೋ ಹೋಗೋಕೆ ಇಷ್ಟು ಬೇಗ ಹೊರಡ್ತಿದೀಯಾ, ಇನ್ನೇನು ನಿನಗೆ ಸ್ಕೂಲ್ ಕೂಡ ಲೀವ್ ಕೊಟ್ಟು ಬಿಟ್ರಲ್ಲಾ" ಅಂದರು. ರಮೇಶ್ ಮುಗುಳ್ನಗುತ್ತಾ "ಅಯ್ಯೋ ಅಮ್ಮಾ! ಇದು ಯಾವ ತಿಂಗಳು ಗೊತ್ತಾ?" ಅಂದನು. ಅದಕ್ಕೆ ಅಮ್ಮ ಕೂಡಲೇ "ಇದು ಮೇ ತಿಂಗಳು" ಎಂದು ದೀರ್ಘವಾಗಿ ಹೇಳುತ್ತಲೇ "ಓಹ್, ನೀನು ವಿಬಿಎಸ್‌ಗೆ ಹೋಗ್ತಿದೀಯಾ? ಹೌದು 9 ಗಂಟೆಗೆ ತಾನೇ ಪ್ರಾರಂಭವಾಗುತ್ತೆ, ನೀನ್ಯಾಕೆ ಇಷ್ಟು ಬೇಗ ಹೊರಟಿದ್ದೀಯ?" ಎಂದರು. ತಕ್ಷಣ ರಮೇಶ್ ತನ್ನ ತಾಯಿಗೆ, ಕಳೆದ ವರ್ಷ ವಿಬಿಎಸ್ ಕಲಿಸಲು ಬಂದಿದ್ದ ಆ ಸಹೋದರರು ಮುಂದಿನ ವರ್ಷ ವಿಬಿಎಸ್‌ಗೆ ಬರುವಾಗ ಇಬ್ಬರು ಹೊಸ ಜನರನ್ನಾದರೂ ಕರೆದುಕೊಂಡು ಬರಬೇಕು ಎಂದು ಹೇಳಿದ್ದರು. ಅದಕ್ಕೇ ನಮ್ಮ ಊರಿಗೆ ಹೊಸದಾಗಿ ಬಂದಿದ್ದಾರಲ್ಲಾ ಗೋಪಿ uncle ಅವರ ಮಕ್ಕಳನ್ನೂ, ಅವರ ಮನೆಗೆ Guest - ಆಗಿ ಬಂದಿರುವ ಆ ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ. ನಾವು ಅರಿತುಕೊಂಡಿರುವ ಯೇಸುವನ್ನು ಬೇರೆಯವರಿಗೂ ತೋರಿಸಬೇಕಲ್ಲವೇ? ಅದಕ್ಕೇ ಇಷ್ಟು ಬೇಗ ಹೋಗ್ತಿದೀನಿ" ಎಂದು ಹೇಳಿದನು. ಅಮ್ಮಾ ಕೂಡ ಸಂತೋಷವಾಗಿ ಕಳುಹಿಸಿಕೊಟ್ರು.
ಪುಟ್ಟ ತಮ್ಮ, ತಂಗಿ! ನೀನು ಕೂಡ ರಮೇಶ್ ನಂತೆ ಈ ವರ್ಷ ನಿಮ್ಮ ಮನೆಗೆ ಮತ್ತು ಪಕ್ಕದ ಮನೆಗೆ Guest - ಆಗಿ ಬಂದಿರುವ ಮಕ್ಕಳನ್ನು ಸಹ ವಿಬಿಎಸ್ ಗೆ ಕರೆದುಕೊಂಡು ಹೋಗಿ. ಇದು ನಿಮ್ಮ ಕರ್ತವ್ಯ ಎಂದೂ ಹೇಳಬಹುದು. ಅದರೊಂದಿಗೆ ಕ್ರೈಸ್ತರಲ್ಲದ ನಿನ್ನ Friends - ಅನ್ನು ಕೂಡ ಕರೆದುಕೊಂಡು ಹೋಗು. ನೀನು VBS ಗೆ ಕರೆದುಕೊಂಡು ಹೋಗುವ ಅವರು ಖಂಡಿತವಾಗಿಯೂ ನಿನ್ನೊಂದಿಗೆ ಪರಲೋಕಕ್ಕೆ ಬರುತ್ತಾರೆ.
- Mrs. ಸಾರಾ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482