Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.05.2023
Share:

By Village Missionary Movement

Saturday, 06-May-2023

ಧೈನಂದಿನ ಧ್ಯಾನ(Kannada) – 06.05.2023

 

ಮುರಿದ ಹೃದಯ

 

“ಬಿಡಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿದುಕೊಳ್ಳಿರಿ” - ಕೀರ್ತನೆ 46:10

 

ನವೀನ ಕಾಲದ ಮಿಷನರಿಗಳ ಪಿತಾಮಹ ಎಂದು ಕರೆಯಲ್ಪಡುವ ವಿಲಿಯಂ ಕೇರಿಯವರ ಜೀವನದಲ್ಲಿ ಒಂದುದಿನ ಮಧ್ಯಾಹ್ನದ ವೇಳೆಯಲ್ಲಿ, ಅವರ ಪ್ರಿಂಟಿಂಗ್ ಪ್ರೆಸ್ ಮತ್ತು ಶೇಖರಣಾ ಕೊಠಡಿಯಲ್ಲಿ ಬೆಂಕಿ ಜ್ವಾಲೆಯು ಹೊತ್ತಿ ಉರಿಯಲು ಪ್ರಾರಂಭಿಸಿತು. ಪ್ರಿಂಟಿಂಗ್ ಪ್ರೆಸ್ ಯಂತ್ರವೆಲ್ಲಾ ಸುಟ್ಟು ಬೂದಿಯಾಯಿತು. ಈ ಅನಿರೀಕ್ಷಿತ ನಷ್ಟವು ಅವರಿಗೆ ಸಹಿಸಲು ಸಾಧ್ಯವಾಗದಷ್ಟು ಮೋಸವಾಗಿತ್ತು. ಅವರ ಹೃದಯ ಒಡೆದು ಹೋಯಿತು. ಕೇರಿ ಒಬ್ಬ ಅತ್ಯುತ್ತಮ ಅನುವಾದಕ. ಇಡೀ ಬೈಬಲ್ ಅನ್ನು 20 ಭಾಷೆಗಳಿಗೆ ಮತ್ತು ಹೊಸ ಒಡಂಬಡಿಕೆಯನ್ನು 40 ಭಾಷೆಗಳಿಗೆ ಭಾಷಾಂತರಿಸಲು ಅವರು ಕಾರಣರಾಗಿದ್ದರು. ಅವರು ಸತ್ಯವೇದದ ಕೆಲವು ಭಾಗಗಳನ್ನು 12 ಕ್ಕೂ ಹೆಚ್ಚು ಭಾರತೀಯ ಭಾಷೆಗಳಿಗೆ ಅನುವಾದಿಸಿದ್ದರು. ಹೀಗಾಗಿ, ಅವರು ಅನುವಾದಿಸಿದ್ದ ಅನೇಕ ಪ್ರಮುಖ ಸುರುಳಿಗಳನ್ನು ತಮ್ಮ ಶೇಖರಣಾ ಕೋಣೆಯಲ್ಲಿ ಭದ್ರವಾಗಿಟ್ಟಿದ್ದರು. ಇದು ಒಂದು ದಿನ ಅಥವಾ ಎರಡು ದಿನದ ಪ್ರಯತ್ನವಲ್ಲ. ಅನೇಕ ವರ್ಷಗಳು ರಾತ್ರಿ ಹಗಲು ನಿದ್ದೆಗೆಟ್ಟು ಮಾಡಿದ ಕಠಿಣ ಪರಿಶ್ರಮ ಮತ್ತು ಸತತವಾದ ಪ್ರಯತ್ನದ ಫಲ. ಅವರು ಬರೆದದ್ದನ್ನು ಶೇಖರಿಸಿಡಲು ಗಣಕಯಂತ್ರದ ಸೌಲಭ್ಯವಾಗಲೀ, ಬರೆಯಲು ಅನುಕೂಲವಾಗುವಂತೆ ಜೆರಾಕ್ಸ್ ಸೌಲಭ್ಯವಾಗಲೀ ಇರಲಿಲ್ಲ. ರಾಶಿಗಟ್ಟಲೆ ಬರೆದು ಜೋಡಿಸಿಟ್ಟಿದ್ದ ಪ್ರಮುಖ ಪತ್ರಿಕೆಗಳೆಲ್ಲ ಸುಮಾರು ಎರಡು ಗಂಟೆಯೊಳಗೆ ಬೂದಿಯಾದವು. ಎಂತಹ ನಷ್ಟ! ಆದರೂ ಅವರು ಮೌನವಾಗಿ ದೇವರ ಸನ್ನಿಧಾನದಲ್ಲಿ ಕುಳಿತು ಮತ್ತೆ ಎಲ್ಲಾ ಕೆಲಸಗಳನ್ನು ಮಾಡಿದರು.

 

ಕೀರ್ತನೆ 46:10 ರಲ್ಲಿ "ಬಿಡಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿದುಕೊಳ್ಳಿರಿ" ಎಂದು ಓದುತ್ತೇವೆ. ಹೌದು, ದೇವರ ಸನ್ನಿಧಾನದಲ್ಲಿ ಕುಳಿತುಕೊಳ್ಳುವವರಾಗಿರಬೇಕು. ಅವರ ಸನ್ನಿಧಾನದಲ್ಲಿ ಕುಳಿತಾಗ ಮಾತ್ರವೇ ಕಾರ್ಯದ ಆಳವನ್ನು ನಾವು ತಿಳಿಯಬಹುದು. ಆ ಕೀರ್ತನೆಯನ್ನು ಹಾಗೆ ಮುಂದೆ ನಾವು ಓದುವಾಗ, ಅನೇಕ ನಷ್ಟಗಳು, ಭಯಗಳು ಮತ್ತು ಅಪಾಯಗಳು ನಮ್ಮನ್ನು ಸುತ್ತುವರೆದಿದ್ದರೂ, ನಾವು ಅವರ ಸನ್ನಿಧಾನದಲ್ಲಿ ಕುಳಿತಾಗ ಅವರು ಎಲ್ಲವನ್ನೂ ಜಯಿಸುವಂತಹ ಹೃದಯವನ್ನು ನೀಡುತ್ತಾರೆ ಎಂದು ವಾಕ್ಯವು ನಮಗೆ ತಿಳಿಸುತ್ತಿದೆ.

 

ಹೌದು, ಪ್ರಿಯರೇ! ನಾವು ಸಂಪೂರ್ಣವಾಗಿ ದಣಿಯದಂತೆ ದೇವರ ಕೈಗಳಲ್ಲಿ ಕಾಯಲ್ಪಡುತ್ತಿದ್ದೇವೆ. ಸಕಲವನ್ನೂ ಆಳ್ವಿಕೆ ಮಾಡುವ ದೇವರ ದೈವೀಕ ಗುಣಮಟ್ಟವನ್ನು, ಬುದ್ಧಿವಂತಿಕೆಯನ್ನು ನಾವು ಆಲೋಚಿಸಿ ನೋಡಿದರೆ, ದೇವರ ಬಳಿಯಿಂದ ಸಾಂತ್ವನವನ್ನು ಪಡೆಯಬಹುದು. ದೇವರು ನಮಗೆ ಮಾಡುವಂತಹ ಎಲ್ಲಾ ವಿಷಯಗಳನ್ನು ನಾವು ಶಾಂತಿಯಿಂದ ಸ್ವೀಕರಿಸಲು ಶಕ್ತರಾಗಿರಬೇಕು. ನಷ್ಟದ ಸಮಯದಲ್ಲೂ ನಾವು ದೇವರ ಮೇಲೆ ಕದಲಿಸಲಾಗದ ನಂಬಿಕೆಯನ್ನಿಡೋಣ. ವಿಲಿಯಂ ಕೇರಿಯ ಮನಸ್ಥಿತಿ ನಮಗೂ ಸ್ಫೂರ್ತಿಯಾಗಲಿ. ಸಮೃದ್ಧಿಯ ಸಮಯದಲ್ಲಿ ದೇವರನ್ನು ಹೃತ್ಪೂರ್ವಕವಾಗಿ ಸ್ತುತಿಸುವುದು ಸುಲಭ. ಆದರೆ ಸೋಲಿನಲ್ಲಿ, ನಷ್ಟದಲ್ಲಿ, ಅನಾರೋಗ್ಯದಲ್ಲಿ, ಸಾಲದಲ್ಲಿ, ಕಣ್ಣೀರಿನಲ್ಲಿ, ನಾವು ಅವರ ಮೇಲೆ ನಂಬಿಕೆ ಇಡೋಣ!

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಒಂದು ಗ್ರಾಮದಲ್ಲಿ ವಿವಿಬಿಎಸ್ ನಡೆಸಲು ಅಗತ್ಯವಿರುವ ರೂ.5000 ದೇಣಿಗೆ ನೀಡಿ ಸಹಾಯ ಮಾಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş