Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.05.2023
Share:

By Village Missionary Movement

Friday, 05-May-2023

ಧೈನಂದಿನ ಧ್ಯಾನ(Kannada) – 05.05.2023

 

3A ವಿಧಾನ

 

"...ಪುರುಷನು... ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು." - ಆದಿಕಾಂಡ 2:24

 

ಕುಟುಂಬ ಎಂಬುದು ದೇವರು ಆರಂಭದಲ್ಲಿ ಮನುಷ್ಯನಿಗೆ ನೀಡಿದ ಒಂದು ಅದ್ಭುತವಾದ ಸಂಬಂಧವಾಗಿದೆ. ಪತಿ-ಪತ್ನಿಯರ ನಡುವಿನ ಸಂಬಂಧವು ದೇವರಿಂದ ಸ್ಥಾಪಿಸಲ್ಪಟ್ಟಿದೆ. ಇಂದು ಪೋಷಕರು ನಿರ್ವಹಿಸುವ ಮದುವೆಗಳು ಕೂಡ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ ಆದರೆ ಪ್ರಾಥಮಿಕವಾಗಿ ಪರಸ್ಪರ ತಿಳುವಳಿಕೆಯ ಕೊರತೆ. ಇಂದಿಗೂ ಪತಿ-ಪತ್ನಿ ಸಂಬಂಧವನ್ನು ಬಲಪಡಿಸಲು, "A" ದಿಂದ ಪ್ರಾರಂಭವಾಗುವ 3 ಪದಗಳ ಪರಿಕಲ್ಪನೆಯನ್ನು ನೋಡೋಣ.

 

1. Accept - ಸ್ವೀಕರಿಸು:

ಮೊದಲು, ನಿಮ್ಮ ಜೀವನ ಸಂಗಾತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಒಪ್ಪಿಕೊಳ್ಳಿ. ಅವನು/ಅವಳು ಆ ವ್ಯಕ್ತಿಯಂತೆ ಇಲ್ಲ ಎಂಬ ಕಾರಣಕ್ಕೆ ಅವನನ್ನು/ಅವಳನ್ನು ಬೇರೆಯವರಿಗೆ ಹೋಲಿಸಬೇಡಿ. ಪ್ರತಿಯೊಬ್ಬ ವ್ಯಕ್ತಿಯು ನ್ಯೂನತೆಗಳನ್ನು ಹೊಂದಿರುತ್ತಾನೆ. ಕೊರತೆಯಿಲ್ಲದ ಗಂಡ ಮತ್ತು ಹೆಂಡತಿ ಎಂದು ಯಾರೂ ಇಲ್ಲ. ನಿಮ್ಮ ಸಂಗಾತಿ ಒಂದೇ ಒಂದು ತಪ್ಪನ್ನೂ ಸಹ ಮಾಡಬಾರದು ಎಂದು ನೀವು ನಿರೀಕ್ಷಿಸಿದರೆ, ನೀವು ಅತೃಪ್ತರಾಗುತ್ತೀರಿ. ನಿರೀಕ್ಷೆಗಳನ್ನು ಬಿಟ್ಟು ಬಿಟ್ಟು ನಾನು ಉತ್ತಮ ಪಾಲುದಾರನಾಗಿರಲು ಪ್ರಯತ್ನಿಸುತ್ತೇನೆ ಎಂದು ನಿರ್ಧರಿಸಿರಿ.

 

2. Adjust - ತಕ್ಕ ಹಾಗೆ ನಿನ್ನನ್ನು ಮಾರ್ಪಡಿಸಿಕೋ: ನಿಮ್ಮ ಜೀವನ ಸಂಗಾತಿಯ ಹವ್ಯಾಸಗಳು ಇಚ್ಛೆಗಳು ನಿಮ್ಮ ಇಚ್ಛೆಗೆ ಅನುಗುಣವಾಗಿ ಮಾರ್ಪಡಬೇಕೆಂದು ಅವನ (ಳ) ಮೇಲೆ ಸಲಹೆಗಳನ್ನು ಹೇರುವ ಬದಲು ನಿಮ್ಮ ಸಂಗಾತಿಯ ವ್ಯಕ್ತಿತ್ವಕ್ಕೆ ತಕ್ಕಂತೆ ನಿಮ್ಮನ್ನು ಅಡ್ಜಸ್ಟ್ ಮಾಡಲು ಕಲಿಯಿರಿ. ಉತ್ತಮ ಕುಟುಂಬ ಸಂಬಂಧವನ್ನು ನಿರ್ಮಿಸಲು ಅದುವೇ ಭದ್ರವಾದ ಬುನಾದಿಯಾಗಿದೆ.

 

3. Appreciate - ಹೊಗಳಿಕೆ: ಊಟ ಚೆನ್ನಾಗಿದೆ ಎಂದು ನೀವು ನಿಮ್ಮ ಹೆಂಡತಿಗೆ ಹೇಳಿದಾಗ, ಅವಳು ಮುಂದಿನ ಬಾರಿ ಇನ್ನೂ ಹೆಚ್ಚು ರುಚಿಕರವಾದ ಅಡುಗೆ ಮಾಡಲು ಬಯಸುತ್ತಾಳೆ. ನಿಮ್ಮ ಪತಿಯ ಶ್ರಮವನ್ನು ಹೊಗಳುವುದರಿಂದ ಅವರು ಇನ್ನಷ್ಟು ಸಂತೋಷದಿಂದ ಕೆಲಸ ಮಾಡಲು ಸಿದ್ಧರಾಗುತ್ತಾರೆ. ಅವನ ಕಾರ್ಯಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಆತನು ತೃಪ್ತನಾಗುತ್ತಾನೆ. ಹೀಗೆ ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುವುದು ಕೂಡ ಪ್ರೀತಿಯ ಒಂದು ಭಾಗ. ನೀವು ನಿಮ್ಮ ಮೆಚ್ಚುಗೆಯನ್ನು ತೋರಿಸಿದರೆ ಮತ್ತು ನಿಮ್ಮ ಸಂಗಾತಿಯನ್ನು ಪ್ರೀತಿಸಿದರೆ ನೀವು ಅವರಲ್ಲಿ ದೊಡ್ಡ ಬದಲಾವಣೆಯನ್ನು ನೋಡುತ್ತೀರಿ. ತಪ್ಪು ಹುಡುಕುವುದು ಮತ್ತು ದೂರುವುದು ನಿಮ್ಮ ಸಂಗಾತಿಯನ್ನು ಸರಿಪಡಿಸುವುದಿಲ್ಲ. ಆದರೆ ಹೊಗಳಿಕೆ ಖಂಡಿತವಾಗಿಯೂ ಯಾರನ್ನಾದರೂ ಬದಲಾಯಿಸಬಲ್ಲದು.

 

ಮೇಲಿನದನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತಂದರೆ ಇಬ್ಬರ ನಡುವಿನ ಪ್ರೀತಿಯ ಬಾಂಧವ್ಯ ಗಟ್ಟಿಯಾಗುತ್ತದೆ. ಕೌಟುಂಬಿಕ ಸಂಬಂಧಗಳೂ ಸುಂದರವಾಗಿರುತ್ತದೆ.

- Mrs. ಜೆಬಾ ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ವಿವಿಬಿಎಸ್ ಸೇವೆಗಳ ಮೂಲಕ ಭೇಟಿಯಾಗುವ ಚಿಕ್ಕ ಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel