Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.05.2023
Share:

By Village Missionary Movement

Thursday, 04-May-2023

ಧೈನಂದಿನ ಧ್ಯಾನ(Kannada) – 04.05.2023

 

ಬಲವಾದ ನಂಬಿಕೆ

 

"...ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ;..." - ಇಬ್ರಿಯ 11:6

 

ಶದ್ರಕ್‌ ಮೇಷಕ್‌ ಅಬೇದ್‌ ನೆಗೋ ಎಂಬ ಇಬ್ರಿಯ ಯುವಕರು ನೆಬೂಕದ್ನೆಚ್ಚರನ ಮುಂದೆ ನಂಬಿಕೆಯಿಂದ ಕೂಗಿದರು. "ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಒಂದು ವೇಳೆ ತಪ್ಪಿಸದಿದ್ದರೂ ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ" ಎಂದು ಧೈರ್ಯವಾಗಿ ಹೇಳಿದರು. ಅವರ ನಂಬಿಕೆಯು ದೇವರಿಗೆ ಮೆಚ್ಚಿಕೆಯಾದ ಕಾರಣ, ಉರಿಯುವ ಬೆಂಕಿಯ ಆವಿಗೆಯಲ್ಲಿ ಮೂವರ ಮಧ್ಯದಲ್ಲಿ ನಾಲ್ಕನೆಯ ವ್ಯಕ್ತಿಯಾಗಿ ಕರ್ತನು ಸಂಚರಿಸುತ್ತಿದ್ದರು. ನಂಬಿಕೆ ಇಲ್ಲದ ಜೀವನ ನಿರ್ಜೀವ ಜೀವನ.

 

ರಕ್ತ ಸಾಕ್ಷಿಯಾಗಿ ಸತ್ತ ಬೆಲೆಂಟಿನಾ ಅವರ ಸಾಕ್ಷ್ಯವನ್ನು ನೋಡಿ. ಅವಳು ಗುಲಾಮ ಹುಡುಗಿ. ಅವಳು ದುರ್ಬಲ ದೇಹವನ್ನು ಹೊಂದಿದ್ದಳು. ಆದರೆ ಹೆದರಿಕೆ ಇಲ್ಲದ ಹೃದಯವುಳ್ಳವಳು. ರೋಮಾಪುರದಲ್ಲಿರುವ ಆಟದ ಕ್ರೀಡಾಂಗಣದಲ್ಲಿ ಈಕೆಯನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ವಿಗ್ರಹಗಳನ್ನು ಪೂಜಿಸುವಂತೆ ಒತ್ತಾಯಿಸಲಾಯಿತು. ಆಕೆ ಕ್ರಿಸ್ತನ ಹೆಸರಿನಲ್ಲಿಟ್ಟಿದ್ದ ತನ್ನ ನಂಬಿಕೆಯನ್ನು ಪ್ರತಿಪಾದಿಸಲು ಸ್ವಲ್ಪವೂ ಹಿಂಜರಿಯಲಿಲ್ಲ. "ನಾವು ಕ್ರಿಸ್ತನ ಸೇವಕರು" ಎಂದು ಹೇಳಿದಳು. ಅವರು ಅವಳನ್ನು ಆಟದ ಮೈದಾನದಲ್ಲಿ ಮರದ ಕಂಬಕ್ಕೆ ಕಟ್ಟಿ, ಕಾಡು ಪ್ರಾಣಿಗಳನ್ನು ಪಂಜರದಿಂದ ಹೊರಗೆ ಬಿಟ್ಟು ಬಿಟ್ಟರು. ಕಂಬಕ್ಕೆ ಕಟ್ಟಲ್ಪಟ್ಟಿದ್ದ ಸ್ಥಿತಿಯಲ್ಲೇ ಅವಳು ಮಂಡಿಯೂರಿ ಪ್ರಾರ್ಥಿಸುತ್ತಿದ್ದಳು. ಪ್ರಾಣಿಗಳು ಅವಳ ವಾಸನೆ ನೋಡಿ ಯಾವ ಹಾನಿಯನ್ನೂ ಮಾಡಲಿಲ್ಲ. ಅವರು ಅವಳನ್ನು ಮತ್ತೆ ಜೈಲಿಗೆ ಕರೆದೊಯ್ದರು. ಕ್ರೀಡೋತ್ಸವದ ಕೊನೆಯ ದಿನದಂದು ಬೆಲೆಂಟಿನಾ ಅವರನ್ನು ಮತ್ತೆ ಅಖಾಡಕ್ಕೆ ತರಲಾಯಿತು. ಅವರು ಅವಳನ್ನು ಕಬ್ಬಿಣದ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು, ದಾರದಿಂದ ಮಾಡಿದ ಬಲೆಯಲ್ಲಿ ಅವಳನ್ನು ಕಟ್ಟಿಹಾಕಿದರು ಮತ್ತು ಗೂಳಿಗಳು ಅವಳನ್ನು ತಮ್ಮ ಕೊಂಬುಗಳಿಂದ ಚುಚ್ಚಿ, ಚುಚ್ಚಿ ಅಲ್ಲಿ ಇಲ್ಲಿ ಎಸೆಯುವಂತೆ ಮಾಡಿದರು. ಅವಳು ಅಂತಿಮವಾಗಿ ಕತ್ತಿಯಿಂದ ಕೊಲ್ಲಲ್ಪಟ್ಟು, ವೈಭವದಿಂದ ಪರಲೋಕಕ್ಕೆ ಕರೆದೊಯ್ಯಲ್ಪಟ್ಟಳು.

 

ಪ್ರಿಯರೇ! ನಿಮ್ಮ ನಂಬಿಕೆ ಹೇಗಿದೆ? ಬಂಡೆಯ ಮೇಲೆ ಕಟ್ಟಿದ ಮನೆಯಂತೆ ದೃಢವಾಗಿ? ಅಥವಾ ಮರಳಿನ ಮೇಲೆ ಕಟ್ಟಿದ ಮನೆಯಂತೆ ಅಸ್ಥಿರವೇ? ನೀವೇ ಯೋಚಿಸಿರಿ. ನಿಮ್ಮ ನಂಬಿಕೆಯು ದೇವರಿಗೆ ಮೆಚ್ಚಿಕೆಯಾಗುವಂತೆ ಪವಿತ್ರಾತ್ಮನು ನಿಮ್ಮನ್ನು ಬಲಪಡಿಸಲಿ. ಕರ್ತನು ನಿಮ್ಮನ್ನು ಆಶೀರ್ವದಿಸಲಿ.

- Mrs. ಜೆಮಿಮಾ ರಾಜಾಸಿಂಗ್

 

ಪ್ರಾರ್ಥನಾ ಅಂಶ:

ವಿವಿಬಿಎಸ್ ಸೇವೆಗಳ ಮೂಲಕ ಭೇಟಿಯಾಗುವ 3000 ಕ್ಕೂ ಹೆಚ್ಚು ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al