By Village Missionary Movement
Monday, 01-May-2023ಧೈನಂದಿನ ಧ್ಯಾನ(Kannada) – 01.05.2023
ಮಹತ್ವದ ಚಿಕ್ಕಮಕ್ಕಳ ಸೇವೆ
"...ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವದು" - ಮಾರ್ಕನು 11:23
ತಂದೆಯಿಲ್ಲದ ಒಂದು ಕ್ರೈಸ್ತ ಮಹಿಳೆಗೆ 14 ಮತ್ತು 12 ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಅವರು ತಪ್ಪದೇ ಚರ್ಚ್‌ಗೆ ಹೋಗುವವರು, ಸಬ್ಬತ್ ಶಾಲೆ ಮತ್ತು ವಿಬಿಎಸ್‌ನಲ್ಲಿ ಭಾಗವಹಿಸುವವರು. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯೊಂದಿಗೆ ಆಸ್ಪತ್ರೆಗೆ ಹೋದವರಿಗೆ ಭಾರೀ ಆಘಾತ ಕಾದಿತ್ತು. ಕ್ಯಾನ್ಸರ್ ಜಾಸ್ತಿಯಾಗಿ ತುಂಬಾ ಬಳಲುತ್ತಿದ್ದ ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆ ಗರಿಷ್ಠ 6 ತಿಂಗಳು ಮಾತ್ರ ಬದುಕುತ್ತಾಳೆ ಎಂದು ವೈದ್ಯರು ಹೇಳಿಬಿಟ್ಟರು.
ಅವಳು ತನ್ನ ಸ್ಥಿತಿಯನ್ನು ಪರಿಗಣಿಸಿ ಬಹಳ ಆತಂಕ ಮತ್ತು ನೋವಿನಿಂದ ಅಳುತ್ತಿದ್ದಳು. ಹಿರಿಯ ಮಗ ಬೈಬಲ್ ತಂದು ತನ್ನ ತಾಯಿಯ ಹತ್ತಿರ ಕುಳಿತು ಮಾರ್ಕನು 11:24 ಅನ್ನು ಓದಿದನು. "ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ." ಎಂಬ ಈ ವಾಕ್ಯದ ಪ್ರಕಾರ ನಾವು ನಂಬಿಕೆಯೊಂದಿಗೆ ಪ್ರಾರ್ಥಿಸೋಣ ಅಮ್ಮ. ನೀವು ಬದುಕುತ್ತೀರ ಎಂದು ಮಕ್ಕಳು ಧೈರ್ಯಪಡಿಸಿದರು.
ಆ ಮಹಿಳೆಯು ಸಹ ಸತತವಾಗಿ ನಂಬಿಕೆಯಿಂದ ಪ್ರಾರ್ಥಿಸಲು ಪ್ರಾರಂಭಿಸಿದಳು. ಸತ್ಯವೇದವನ್ನು ಸರಿಯಾಗಿ ಓದದೆ, ಧ್ಯಾನಿಸದೆ ಬದುಕಿದ ಆ ಮಹಿಳೆ ಪ್ರತಿದಿನ ಸತ್ಯವೇದವನ್ನು ಓದಲು ಪ್ರಾರಂಭಿಸಿದಳು. ಕ್ರಮವಾಗಿ ವಾಕ್ಯಗಳನ್ನು ಓದಲು ಪ್ರೇರೇಪಿಸಲಾಯಿತು. ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ಅಪರಾಧಗಳನ್ನು ಕ್ಷಮಿಸುವಂತೆ ಇತರರ ಅಪರಾಧಗಳನ್ನು ಕ್ಷಮಿಸಿ. ಈ ವಾಕ್ಯ ಅವಳೊಂದಿಗೆ ಮಾತನಾಡಲು ಪ್ರಾರಂಭಿಸಿತು. ತನ್ನ ಸಂಬಂಧಿಕರನ್ನು ಕ್ಷಮಿಸಲು ಸಾಧ್ಯವಾಗದ ತನ್ನ ಅಸಮರ್ಥತೆಯನ್ನು ಅರಿತು, ಮನ ಒಡೆಯುವಂತೆ ಅತ್ತು ಬೇಡಿಕೊಂಡು ಎಲ್ಲರನ್ನು ಕ್ಷಮಿಸಿದಳು. ಎಂಥಾ ಆಶ್ಚರ್ಯ! ಹಲವು ತಿಂಗಳುಗಳಿಂದ ನಿದ್ದೆಯಿಲ್ಲದೆ ನರಳುತ್ತಿದ್ದ ಮಹಿಳೆ ಆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದಳು. ಅವಳಲ್ಲಿನ ನಂತರದ ಬದಲಾವಣೆಗಳು ವೈದ್ಯರನ್ನು ಆಶ್ಚರ್ಯಗೊಳಿಸಿದವು. ಕ್ಯಾನ್ಸರ್ ಕೋಶಗಳು ಸಂಪೂರ್ಣವಾಗಿ ನಾಶವಾದವು ಮತ್ತು ಅವಳು ಗುಣಮುಖಳಾದಳು. ಅವರು ದೇವರನ್ನು ಮಹಿಮೆಪಡಿಸಿ ಕ್ಯಾನ್ಸರ್ ರೋಗಿಗಳ ಮಧ್ಯೆ ಸೇವೆ ಸಲ್ಲಿಸುತ್ತಿದ್ದಾರೆ.
ಹೌದು, ನನ್ನ ಪ್ರಿಯರೇ! ಚಿಕ್ಕ ಮಕ್ಕಳ ಸೇವೆಯು ಖಂಡಿತವಾಗಿಯೂ ಕುಟುಂಬಗಳಲ್ಲಿ ಮತ್ತು ಸಭೆಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಬಲ್ಲದು. ಇಂತಹ ಹಲವು ಘಟನೆಗಳು ನಡೆಯುತ್ತಿವೆ. ಬರೆಯಲು ಪುಟ ಸಾಕಾಗುವುದಿಲ್ಲ. ಈ ತಿಂಗಳಲ್ಲಿ ನಡೆಯುವ ಸತ್ಯವೇದ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸೋಣ. ನಿಮಗೆ ಚಿಕ್ಕ ಮಕ್ಕಳ ಮಧ್ಯೆ ಸೇವೆ ಮಾಡುವ ಅವಕಾಶ ಸಿಕ್ಕರೆ ಅದನ್ನು ಕಡ್ಡಾಯವಾಗಿ ಉಪಯೋಗಿಸಿಕೊಳ್ಳಿ. ಅಧಃಪತನವನ್ನು ತರುತ್ತಿರುವ ಈ ಸಮಾಜದಲ್ಲಿ ದೇವರು ನಮ್ಮ ಚರ್ಚ್‌ನ ಮಕ್ಕಳನ್ನು ದೇವರು ಸೇವಾ ಯೋಧರನ್ನಾಗಿ ಉಪಯೋಗಿಸಲಿ.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ದೇವರು ಸಂದೇಶಕರನ್ನು ಶಕ್ತಿಯುತವಾಗಿ ಉಪಯೋಗಿಸುವಂತೆ ಮತ್ತು ಭಾಗವಹಿಸುವ ಪ್ರತಿ ಯೌವನಸ್ಥರು ದೇವರ ಕೈಯಲ್ಲಿ ಆಯುಧಗಳಾಗಿ ಬಳಸಲ್ಪಡಲಿ ಎಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482