Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.04.2023
Share:

By Village Missionary Movement

Sunday, 30-Apr-2023

ಧೈನಂದಿನ ಧ್ಯಾನ(Kannada) – 30.04.2023

 

ಪರಾಕ್ರಮಶಾಲಿಯೇ!

 

"ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ" - ರೋಮಾ 8:37

 

ಹಾಯ್ ಪುಟಾಣಿಗಳೇ! ನಿಮಗೆ ದೇವದೂತರ ಕಥೆಗಳನ್ನು ಕೇಳಲು ತುಂಬಾ ಇಷ್ಟಾನಾ? ನೀವು ಸಹ ದೇವದೂತರಂತೆ ಆಗಬೇಕು, ತಲೆಯ ಮೇಲೆ ಚಿನ್ನದ ಕಿರೀಟವಿರಬೇಕು ಎಂದೆಲ್ಲಾ ಕನಸು ಕಂಡಿರುತ್ತೀರ ಅಲ್ವಾ? ಆದರೆ ದೇವದೂತನು ಮಾತನಾಡಿದ ಗಿದ್ಯೋನ್ ಅಂಕಲ್ ಬಗ್ಗೆ ಸತ್ಯವೇದದಿಂದ ಒಂದು ಘಟನೆಯನ್ನು ಹೇಳ್ಳಾ?

 

ರಷ್ಯಾ ಮತ್ತು ಉಕ್ರೇನ್‌ನಂತೆ ಇಸ್ರಾಯೇಲ್ಯರಿಗೆ ಮತ್ತು ಮಿದ್ಯಾನ್ಯರಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಇಸ್ರಾಯೇಲ್ಯರು ದೇವರನ್ನು ತಿಳಿದಿದ್ದರೂ, ಅವರು ಆತನಿಗೆ ವಿಧೇಯರಾಗದೇ ಹೋದದ್ದರಿಂದ ಮಿದ್ಯಾನ್ಯರ ಕೈಗಳಲ್ಲಿ ದೇವರು ಅವರನ್ನು ಬಿಟ್ಟು ಬಿಟ್ಟರು. ಕೆಲವೊಮ್ಮೆ ಮಿಡತೆಗಳು ಹಿಂಡು ಹಿಂಡಾಗಿ ಹೊಲದಲ್ಲಿನ ಎಲ್ಲಾ ಬೆಳೆಗಳನ್ನು ನಾಶಮಾಡುತ್ತವೆ. ಅದೇ ರೀತಿಯಲ್ಲಿ ಮಿದ್ಯಾನ್ಯರು ಗುಂಪುಗುಂಪಾಗಿ ಬಂದು ಉತ್ತಮವಾದ ಬೆಳೆಗಳನ್ನು ಹಾಳುಮಾಡಿ ಇಸ್ರಾಯೇಲ್ಯರ ಕುರಿ ದನಗಳನ್ನು ಮತ್ತು ಆಹಾರಕ್ಕಾಗಿ ಇದ್ದ ಎಲ್ಲವನ್ನೂ ತೆಗೆದುಕೊಂಡು ಹೋಗಿಬಿಡುತ್ತಿದ್ದರು.

 

ಇಸ್ರಾಯೇಲ್ಯರು ಬಹಳ ಕಷ್ಟಪಟ್ಟರು. ಅವರ ವಿರುದ್ಧ ಹೋರಾಡುವವರು ಯಾರೂ ಇಲ್ಲ. ತನ್ನ ಹೊಲದಲ್ಲಿ ಬೆಳೆದ ಗೋಧಿಯನ್ನು ಕೊಯ್ಲು ಮಾಡಿ ಹೇಗಾದರೂ ಮನೆಗೆ ತಂದುಬಿಡಬೇಕೆಂದು ಗಿದ್ಯೋನ್ ಅಂಕಲ್ ಭಯದಿಂದ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ದೇವದೂತನು ಪ್ರತ್ಯಕ್ಷನಾಗಿ "ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾರೆ" ಎಂದು ಹೇಳಿದ್ದನ್ನು ಕೇಳಿದ ಕೂಡಲೇ ಗಿದ್ಯೋನ್ ಅಂಕಲ್ ಗೆ ಸಂತೋಷವಾಗಲಿಲ್ಲ ಯೆಹೋವನು ನಮ್ಮ ಸಂಗಡ ಇದ್ದರೆ ಯಾಕೆ ನಮ್ಮನ್ನು ಮಿದ್ಯಾನ್ಯರ ಕೈಯಲ್ಲಿ ಬಿಟ್ಟು ಬಿಟ್ಟರು ಎಂದು ದೇವದೂತನೊಂದಿಗೆ ಮಾತನಾಡಿದರು. ಈ ನಿನ್ನ ಬಲದಿಂದ ಹೋಗು. ನಿನ್ನೊಂದಿಗೆ ಇರುವುದು ನಾನಲ್ಲವೇ, ಎಂದು ಹೇಳಿದ ದೇವದೂತನ ಮಾತನ್ನು ಕೇಳಿದ ಕೂಡಲೇ ಗಿದ್ಯೋನ್ ಅಂಕಲ್ ಗೆ ಒಂದು ಹೊಸ ನಂಬಿಕೆ ಬಂತು.

 

ಕೇವಲ 300 ಜನರೊಂದಿಗೆ ಮಿದ್ಯಾನ್ಯರ ದೊಡ್ಡ ಸೈನ್ಯವನ್ನು ಸೋಲಿಸಿದನು. ಅವನು ಹೇಡಿ ಎಂದು ಹೇಳಿದ ಅನೇಕರು ಗಿದ್ಯೋನನನ್ನು ನೋಡಿ ಸೆಲ್ಯೂಟ್ ಹೊಡೆದರು.

 

ಪ್ರೀತಿಯ ಸಹೋದರ, ಸಹೋದರಿ! ನಿಮ್ಮಿಂದ ಮಾಡಲು ಸಾಧ್ಯವಾಗದ ವಿಷಯಗಳ ಬಗ್ಗೆ ಭಯಪಡುತ್ತಿದ್ದೀರಾ? ಯೇಸಪ್ಪ ನಿಮ್ಮನ್ನು ನೋಡಿ, "ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ" ಎನ್ನುತ್ತಿದ್ದಾರೆ. ಆದ್ದರಿಂದ ನೀವು ಮಾಡಲಾಗದ ಕಾರ್ಯವನ್ನು ಸುಲಭವಾಗಿ ಮಾಡಿ Win ಆಗುವಂತೆ ಮಾಡುತ್ತಾರೆ. ನಿಮ್ಮ ವಿದ್ಯಾಭ್ಯಾಸ, ಕ್ರೀಡೆ, ಫಲಿತಾಂಶಗಳ ಬಗ್ಗೆ ಯಾವ ಭಯವಿದ್ದರೂ, ಯೇಸು ನಿಮ್ಮೊಂದಿಗಿರುವಾಗ, ಹೆದರುಪುಕ್ಕಳನನ್ನು ಪರಾಕ್ರಮಶಾಲಿಯಾಗಿ ಮಾರ್ಪಡಿಸಲು ನಮ್ಮ ಯೇಸಪ್ಪನಿಂದ ಮಾತ್ರವೇ ಸಾಧ್ಯ. ನೀವು ಏನು ಹೇಳುತ್ತೀರಿ! ಓಕೆ ಅಲ್ವಾ!

- Sis. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel