By Village Missionary Movement
Monday, 24-Apr-2023ಧೈನಂದಿನ ಧ್ಯಾನ(Kannada) – 24.04.2023
ಕಾಯುತ್ತಿರುವ ದೇವರು
“ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ" - ಯೋಬ 34:21
ನಾನು ನನ್ನ ಹದಿಹರೆಯದ ವರ್ಷಗಳನ್ನು ದಾಟಿ ಪ್ರೌಢಾವಸ್ಥೆಗೆ ಪ್ರವೇಶಿಸಿದೆ. ಆ ದಿನಗಳಲ್ಲಿ, ಸುವಾರ್ತೆ ಕೂಟಗಳು ಹೆಚ್ಚಾಗಿ ನಡೆಯಲು ಅವಕಾಶವಿಲ್ಲದ ಪಟ್ಟಣದಲ್ಲಿ ನಾನು ವಾಸಿಸುತ್ತಿದ್ದೆ. ಭಾನುವಾರದ ಆರಾಧನೆಗೆ ಹೋಗುವುದರೊಂದಿಗೆ ಸರಿ, ಯೌವ್ವನಸ್ಥರ ಸಭೆಗಳಿಗೆ ಕಳುಹಿಸುತ್ತಿರಲಿಲ್ಲ. ನಾನು ಮನೆಯಲ್ಲೇ ಸತ್ಯವೇದವನ್ನು ಓದಿಕೊಂಡು ಪ್ರಾರ್ಥಿಸುತ್ತಿದ್ದೆ. ಸಿನಿಮಾ ನೋಡುವುದು ತಪ್ಪು ಅಂತ ಯಾರೂ ನನಗೆ ಹೇಳಿಕೊಡಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿದ್ದೆ. "ಲೆಂಟು ದಿನಗಳಲ್ಲಿ ಹೂವುಗಳನ್ನು ಇಡಬಾರದು. ಸಿನಿಮಾಗೆ ಹೋಗಬಾರದು ಎಂಬ ವೈರಾಗ್ಯದಿಂದ ಇರುತ್ತಿದ್ದೆ. ಒಮ್ಮೆ ನಾವು ನನ್ನ ಫ್ಯಾಮಿಲಿ ಫ್ರೆಂಡ್ ಮಗಳ ಜೊತೆ ಒಬ್ಬ ದೊಡ್ಡ ನಿರ್ದೇಶಕರ ಸಿನಿಮಾಗೆ ಹೋಗಿದ್ದೆವು. ನಾವು ಚಿತ್ರವನ್ನು ನೋಡಲಾಗಲಿಲ್ಲ. "ಹೋಗಿ ಹೋಗಿ ಇದಕ್ಕೆ ಬಂದಿದ್ದೇವಲ್ಲಾ" ಎಂದು ಕೊರಗುತ್ತಾ ತಲೆ ಬಗ್ಗಿಸಿಕೊಂಡು ನೋಡಿ ನೋಡದ ರೀತಿಯಲ್ಲಿ ಸಮಯ ಕಳೆದು ಮನೆಗೆ ಬಂದೆವು. ನಾನೇನು ಮಹಾಪಾಪ ಮಾಡಿದಂತೆ ಅನ್ನಿಸಿತು. ನನ್ನ ತಂದೆ ತಾಯಿಯ ಮುಖವನ್ನೂ ಸಹ ನೋಡಲಾಗಲಿಲ್ಲ. ನಾನು ದೇವರನ್ನು ಕ್ಷಮೆ ಕೇಳಿದೆ. "ಇನ್ನು ಮುಂದೆ ನಾನು ನನಗಾಗಿ ಸಿನಿಮಾಗೆ ಹೋಗುವುದಿಲ್ಲ" ಎಂದು ಹರಕೆ ಮಾಡಿದೆ.
ತಿಂಗಳುಗಳು ಕಳೆದವು. ಒಂದು ದಿನ ಪರೀಕ್ಷೆ ಬಂತು. ನಾನು ಶಿಕ್ಷಕನ ಹುದ್ದೆಯಲ್ಲಿ ಕುಳಿತೆ. ಮಕ್ಕಳು ನೋಡುವಂತಹ ಚಿತ್ರ ಎಂದು ಮಕ್ಕಳನ್ನು ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂತು. ನನ್ನೊಂದಿಗೆ ಕೆಲಸ ಮಾಡಿದ ಸಹೋದರಿ “ಇದು ಸರ್ಕಸ್ ಚಿತ್ರ. ಅನೇಕ ದೇಶಗಳನ್ನು ತೋರಿಸುತ್ತಾರೆ. ನಾವು ಅಲ್ಲೆಲ್ಲಾ ಹೋಗೋಕೆ ಆಗುತ್ತಾ? ಸುಮ್ಮನೆ ಬಾ!" ಎಂದು ಹೇಳಿದರು. ನನ್ನ ಮನದಲ್ಲೂ ಒಂದು ಆಸೆ "ಹೋಗೋಣ" ಎಂದುಕೊಂಡೆ.
ಅಂದು ರಾತ್ರಿ ನಾನು ಒಂದು ಕನಸು ಕಂಡೆ. ಉದ್ದವಾದ ರಸ್ತೆ, ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಒಂದು ವ್ಯಕ್ತಿಯೊಂದಿಗೆ ನಾನು ನಡೆದುಕೊಂಡು ಹೋಗುತ್ತಿದ್ದೆ. ದಾರಿಯಲ್ಲಿ ಒಂದು ಥಿಯೇಟರ್ ಇತ್ತು. ನಾನು ಅವರ ಬಳಿ, "ಬನ್ನಿ ನಾವು ಥಿಯೇಟರ್ಗೆ ಹೋಗೋಣ" ಎಂದು ಹೇಳಿದೆ. ಅವರು ಹೇಳಿದರು, “ನಾನು ಬರುವುದಿಲ್ಲ. ನೀನು ಬೇಕಾದರೆ ಹೋಗು. ನೀನು ಬರುವ ತನಕ ನಾನು ನಿನಗಾಗಿ ಕಾಯುತ್ತೇನೆ” ಎಂದರು. ನಾನು ಅವರನ್ನು ನೋಡಿದೆ. "ನೀವು ಬರದ ಸ್ಥಳಕ್ಕೆ ನಾನು ಹೋಗುವುದಿಲ್ಲ, ಬನ್ನಿ ಹೋಗೋಣ" ಎಂದು ಹೇಳಿಬಿಟ್ಟು ಅವರೊಂದಿಗೆ ನಡೆಯಲು ಪ್ರಾರಂಭಿಸಿದೆ, ಬೆಳಗಾಯಿತು ಶಾಲೆಗೆ ಹೋಗಿ ನಾನು "ಬರುವುದಿಲ್ಲ" ಎಂದು ಖಚಿತವಾಗಿ ಹೇಳಿಬಿಟ್ಟೆ.
ಪ್ರೀತಿಯ ಯೌವ್ವನಸ್ಥರೇ! ನಮ್ಮ ದೇವರ ಪ್ರೀತಿಯನ್ನು ನೋಡಿ ನಾವು ದಾರಿ ತಪ್ಪಿದರೂ ನಮಗಾಗಿ ಕಾಯುತ್ತಿರುವ ದೇವರು. ಕಿರಿಯ ಮಗನಿಗಾಗಿ ಕಾಯುತ್ತಿದ್ದ ತಂದೆಯಂತೆ ಈಗಲೂ ನಮಗಾಗಿ ಕಾಯುತ್ತಿದ್ದಾರೆ. ಅವರ ಪ್ರೀತಿಯ ಕಡೆಗೆ ನೇರವಾಗಿ ತಿರುಗೋಣವಾ?
- Mrs. ವನಜಾ ಬಾಲರಾಜ್
ಪ್ರಾರ್ಥನಾ ಅಂಶ:
ಯೌವ್ವನಸ್ಥರ ಕೂಟದಲ್ಲಿ ಭಾಗವಹಿಸುವ ಪ್ರತಿ ಯೌವ್ವನಸ್ಥರು ದೇವರ ಕೈಯಲ್ಲಿ ಸಾಧನವಾಗಿ ಉಫಯೋಗವಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482