By Village Missionary Movement
Friday, 21-Apr-2023ಧೈನಂದಿನ ಧ್ಯಾನ(Kannada) – 21.04.2023
ಕುಗ್ಗಿ ಹೋಗಬೇಡ, ಮುನ್ನಡೆ
“...ಆತನು--ನೀನು ಹಿಂದಟ್ಟು; ನಿಶ್ಚಯವಾಗಿ ನೀನು ಅವರನ್ನು ಹಿಂದಟ್ಟಿ ಎಲ್ಲರನ್ನು ಬಿಡಿಸಿಕೊಳ್ಳುವಿ ಅಂದನು" - 1 ಸಮುವೇಲ 30:8
ಸ್ಕಾಟ್ಲೆಂಡ್‌ನಲ್ಲಿ ಜನಿಸಿದ ಅಲೆಕ್ಸಾಂಡರ್ ಡಫ್ ಭಾರತೀಯ ರಾಷ್ಟ್ರಕ್ಕೆ ಸುವಾರ್ತೆ ಸಾರಲು ಹೊರಟರು. ಸಮುದ್ರಯಾನದ ಸಮಯದಲ್ಲಿ, ಅವರು ಹಡಗು ಅಪಘಾತದಲ್ಲಿ ತಮ್ಮ ಆಸ್ತಿ ಮತ್ತು ಪ್ರಮಾಣಪತ್ರಗಳನ್ನು ಕಳೆದುಕೊಂಡರು. ನೀನು ಮಿಷಿನರಿ ಸೇವೆಗೆ ಹೋಗಿದ್ದು ದೇವರ ಇಚ್ಛೆಯಲ್ಲ. ಅದಕ್ಕಾಗಿಯೇ ಇಷ್ಟೊಂದು ಹೋರಾಟಗಳು ಬರುತ್ತಿವೆ ಎಂದರು. ಆದರೂ ಛಲ ಬಿಡದೆ ಭಾರತಕ್ಕೆ ಬಂದು ಮೇಲ್ಜಾತಿಯ ಜನರು ದೇವರನ್ನು ತಿಳಿದುಕೊಳ್ಳಲು, ಪಾಶ್ಚಾತ್ಯ ಕಲೆ, ವಿಜ್ಞಾನ, ಇಂಗ್ಲಿಷ್ ಇವುಗಳ ಜೊತೆಗೆ ಸತ್ಯವೇದವನ್ನು ಕಲಿಸಿಕೊಡಬೇಕು ಎಂಬ ತಮ್ಮ ಕಲ್ಪನೆಯನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು. ಆದರೆ ಭಾರತದ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದರು. ಆದರೂ 5 ವಿದ್ಯಾರ್ಥಿಗಳೊಂದಿಗೆ ಆಲದ ಮರದ ಕೆಳಗೆ ಶಾಲೆ ಆರಂಭಿಸಿದರು. ಒಂದು ವಾರದಲ್ಲಿ 300 ವಿದ್ಯಾರ್ಥಿಗಳು ಸೇರಿಕೊಂಡರು. ನಂತರ ಅವರು ಮೇಲ್ಜಾತಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ಇದಲ್ಲದೆ, ಅನೇಕ ಜನರು ಸ್ವಇಚ್ಛೆಯಿಂದ ಅಧ್ಯಯನ ಮಾಡಿದರು. 3 ವರ್ಷಗಳಲ್ಲಿ 3 ಜನರು ಕರ್ತನನ್ನು ಅಂಗೀಕರಿಸಿದರು. 800 ವಿದ್ಯಾರ್ಥಿಗಳು ಶಾಲೆಗೆ ದಾಖಲಾದರು. ಕೆಲವೇ ತಿಂಗಳುಗಳಲ್ಲಿ 33 ಜನರು ದೇವರನ್ನು ಅಂಗೀಕರಿಸಿದರು. ಇವರು ಮಿಷನರಿಗಳಾಗಿಯೂ, ಸಭೆಯ ನಾಯಕರುಗಳಾಗಿಯೂ ಮಾರ್ಪಟ್ಟರು.
ನಷ್ಟ ಮತ್ತು ವಿರೋಧದ ನಡುವೆಯೂ ಡಫ್ ಮುಂದಿಟ್ಟ ಕಾಲು ಹಿಂತೆಗೆಯದೆ ಸತತವಾಗಿ ಮುಂದುವರೆಸಿದರು. ಇದರಿಂದ ಜನರ ಅಜ್ಞಾನದ ಅಂಧಕಾರ ದೂರವಾಯಿತು. ಅವರು ದೇವರನ್ನು ಕಂಡುಕೊಂಡರು. ಇಂಗ್ಲಿಷ್ ಶಿಕ್ಷಣ ಭಾರತಕ್ಕೆ ಬಂದಿತು.
ಸತ್ಯವೇದದಲ್ಲಿಯೂ ಸಹ ದಾವೀದನು ಮತ್ತು ಅವನೊಂದಿಗೆ ಇದ್ದವರು ತಮ್ಮ ಹೆಂಡತಿಯರನ್ನು, ಮಕ್ಕಳನ್ನು ಮತ್ತು ಆಸ್ತಿಯನ್ನು ಕಳೆದುಕೊಂಡರು. ಎಲ್ಲರೂ ತಮ್ಮ ಬಲ ಕುಗ್ಗಿ ಹೋಗುವವರೆಗೂ ಅಳುತ್ತಿದ್ದರು. ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡು ಪ್ರಾರ್ಥಿಸುತ್ತಾರೆ. ದೇವರು "ನೀನು ಹಿಂದಟ್ಟು, ನಿಶ್ಚಯವಾಗಿ ನೀನು ಅವರನ್ನು ಹಿಂದಟ್ಟಿ, ಎಲ್ಲರನ್ನು ಬಿಡಿಸಿಕೊಳ್ಳುವಿ" ಅಂದರು. ದಾವೀದನೊಂದಿಗೆ ಹೊರಟಿದ್ದು ಒಂದು ಸಣ್ಣ ಗುಂಪು, ಆದರೆ ದೇವರು ಎಲ್ಲವನ್ನೂ ತಿರುಗಿಸಿಕೊಳ್ಳಲು ಸಹಾಯ ಮಾಡಿದರು.
ಹೌದು, ನಷ್ಟಗಳಲ್ಲಿ ನಿಮ್ಮಲ್ಲಿರುವ ಶೂನ್ಯವನ್ನು ಸಾಂತ್ವನದ ದೇವರೇ ತುಂಬಬೇಕು. ಅವರು ನಮ್ಮನ್ನು ತುಂಬಿದರೆ ಮಾತ್ರವೇ ನಾವು ನಿಲ್ಲದೆ ವಿಜಯಶಾಲಿಗಳಾಗಿ ಮುಂದೆ ಓಡಬಹುದು. ವಿರೋಧ, ಹೋರಾಟದ ನಿಮಿತ್ತವಾಗಿ ನೀವು ಮಾಡುತ್ತಿರುವ ಕಾರ್ಯವನ್ನು, ಗುರಿಯನ್ನು ಬಿಟ್ಟು ಹಿಂಜರಿಯಬೇಡಿ. ನಿಮ್ಮ ಉದ್ದೇಶವೆಲ್ಲಾ ಗುರಿಯನ್ನು ಸಾಧಿಸುವುದೇ ಆಗಿರಬೇಕು. ವಿರೋಧ ಮತ್ತು ಹೋರಾಟದತ್ತ ನಿಮ್ಮ ಗಮನಹರಿಸಬೇಡಿ. ನಿಮ್ಮ ಯಶಸ್ಸು ಕೇವಲ ಕೈಗೆಟುವಷ್ಟು ದೂರದಲ್ಲೇ ಇದೆ. ಮನಸೋತು ಹೋಗದಂತೆ ಮುನ್ನಡೆಯಿರಿ.
- Mrs. ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಕಡಿಮೆ ಬಾಡಿಗೆಗೆ ವ್ಯಾನ್‌ಗಳು ಸಿಗುವಂತೆ, ವ್ಯಾನ್ ಚಾಲಕರು ಎಚ್ಚರಿಕೆಯಿಂದ ಓಡಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482