Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.04.2023
Share:

By Village Missionary Movement

Wednesday, 19-Apr-2023

ಧೈನಂದಿನ ಧ್ಯಾನ(Kannada) – 20.04.2023

 

ಅಲ್ಪವಾಗಿ ನೆನೆಸಬೇಡಿರಿ

 

"ಆದದರಿಂದ ಯಾರೂ ಅವನನ್ನು ಹೀನೈಸಬಾರದು..." -1 ಕೊರಿಂಥ 16:11

 

ವಸಂತ ತುಂಬಾ ಬಡ ಕುಟುಂಬದಲ್ಲಿ ಜನಿಸಿದಳು. ನೋಟ ಮತ್ತು ಮಾತಿನಲ್ಲಿ ಯಾರ ಗಮನವನ್ನೂ ಸೆಳೆಯಲು ಸಾಧ್ಯವಾಗದವಳು. ಅವಳು ಲೋಕದವರಿಂದಲೂ ಸ್ವಂತ ಕುಟುಂಬದವರಿಂದಲೂ ಅಲಕ್ಷ್ಯವಾಗಿ ಎಣಿಸಲ್ಪಟ್ಟವಳು. ಆದರೆ ದೇವರ ದೃಷ್ಟಿಯಲ್ಲಿ ಅವಳು ಅಮೂಲ್ಯಳೂ ಮತ್ತು ರೂಪವತಿಯೂ ಆಗಿದ್ದಳು. ಕಾರಣ ಅವಳು ದೇವರಿಗೆ ಭಯಪಡುವುದರಲ್ಲೂ ಮತ್ತು ಸತ್ಯವೇದವನ್ನು ಪಾಲಿಸುವುದರಲ್ಲೂ ತುಂಬಾ ನಂಬಿಗಸ್ತಳಾಗಿದ್ದಳು. ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವಳ ಮುಗ್ಧತೆಯಿಂದಾಗಿ ಎಲ್ಲರಿಂದ ಅಪಹಾಸ್ಯ ಮತ್ತು ಗೇಲಿಗೆ ಗುರಿಯಾಗಿದ್ದಳು. ಅವರು ತಮ್ಮ ಕೆಲಸವನ್ನೂ ಸಹ ವಸಂತಳ ತಲೆಗೆ ಕಟ್ಟುತ್ತಿದ್ದರು, ಅವಳು ಅದನ್ನೆಲ್ಲಾ ದೊಡ್ಡದಾಗಿ ನೆನಸದೆ ನಗುಮುಖದಿಂದ ಆ ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು. ಆಕೆಯ ಮದುವೆ ಕಾರ್ಯವೂ ಸಹ ಹೋರಾಟವಾಗಿತ್ತು. ಇದರಿಂದ ಮನೆಯವರಿಗೆ ಹೊರೆಯಾಗಿದ್ದಳು. ಹುಡುಗಿಯನ್ನು ನೋಡಲು ಬಂದ ವರನೂ ಮತ್ತು ಕುಟುಂಬಸ್ಥರು ಅವಳ ಬಾಹ್ಯ ಸೌಂದರ್ಯವನ್ನು ಕಂಡು ಹೊರಟು ಹೋದರು. ಆದರೆ ದೇವರು ಅವಳಿಗೆ ಅನಿರೀಕ್ಷಿತ, ಪ್ರಕಾಶಮಾನವಾದ ಜೀವನವನ್ನು ಕೊಟ್ಟರು. ಮದುಮಗನು ದೇವಭಯವುಳ್ಳವನಾಗಿದ್ದನು, ಅವಳ ಆಂತರಿಕ ಸೌಂದರ್ಯದಿಂದ ಆಕರ್ಷಿತನಾದನು ಮತ್ತು ಬಾಹ್ಯ ಸೌಂದರ್ಯವನ್ನು ಸಂಪೂರ್ಣವಾಗಿ ಸ್ವೀಕರಿಸಿದನು. ಇಂದಿಗೂ ಕುಟುಂಬ ಸಮೇತರಾಗಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಸತ್ಯವೇದದಲ್ಲಿ ಅಲ್ಪವಾಗಿ ಪರಿಗಣಿಸಲ್ಪಟ್ಟ ಸ್ತ್ರೀಯ ಬಗ್ಗೆ ನಮಗೆ ಗೊತ್ತು. ಅವಳೇ ಲೇಯಾ. ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿದನು. ಲೇಯಾಳನ್ನು ಅಲ್ಪವಾಗಿ ಪರಿಗಣಿಸಲ್ಪಡುವುದನ್ನು ದೇವರು ನೋಡಿದರು ಮತ್ತು ಅವಳನ್ನು ಗರ್ಭಿಣಿಯಾಗುವಂತೆ ಮಾಡಿದರು. (ಆದಿ. 29: 30-31) ಹೌದು, ಅಲ್ಪಳೆಂದು ಪರಿಗಣಿಸಲ್ಪಟ್ಟಿದ್ದ ಲೇಯಾಳನ್ನು ಕರ್ತನು ನೆನಪಿಸಿಕೊಂಡನು.

 

ಇದನ್ನು ಓದುತ್ತಿರುವ ಪ್ರಿಯರೇ! ಮನುಷ್ಯರ ದೃಷ್ಟಿಯಲ್ಲಿ ನಾವು ಅಲ್ಪವಾಗಿ ಕಾಣಬಹುದು. ಆದರೆ ನಮ್ಮ ದೇವರು ಹಾಗಲ್ಲ, ಈ ಲೋಕದ ದೃಷ್ಟಿಯಲ್ಲಿ ಅಲ್ಪವಾಗಿ ಎನಿಸಲ್ಪಟ್ಟವರನ್ನು ಧೂಳಿನಿಂದ, ತಿಪ್ಪೆಯಿಂದ ಮೇಲಕ್ಕೆತ್ತಿ ಹೆಚ್ಚಿಸುವುದು ದೇವರ ಮಹಾ ಯೋಜನೆ. ಈ ಲೋಕವು ಬುದ್ಧಿವಂತರನ್ನು ಮತ್ತು ಸುಂದರರನ್ನು ಆಯ್ಕೆ ಮಾಡುತ್ತದೆ ಮತ್ತು ಅವರಿಗೆ ಸ್ಥಾನಮಾನಗಳನ್ನು, ಜವಾಬ್ದಾರಿಗಳನ್ನು ನೀಡುತ್ತದೆ. ಇದು ಲೋಕದ ಜ್ಞಾನ. ಆದರೆ ದೇವರು ದೀನರನ್ನು ಬಲ್ಲನು. ಹಾಗಾಗಿ ಯಾರನ್ನೂ ಲಘುವಾಗಿ ಪರಿಗಣಿಸುವುದು ಬೇಡ. ಒಂದು ಸಣ್ಣ ಬೆಂಕಿಕಡ್ಡಿಯ ಶಕ್ತಿಯೇ ಬಹುದೊಡ್ಡ ಕತ್ತಲೆಯನ್ನು ಮಾರ್ಪಡಿಸುತ್ತದೆ.

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಪೋಷಕರು ತಮ್ಮ ಮಕ್ಕಳನ್ನು ಸ್ವಇಚ್ಛೆಯಿಂದ ಈ ಯೌವನಸ್ಥರ ಉಜ್ಜೀವನ ಕೂಟಕ್ಕೆ ಕಳುಹಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş