Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.04.2023
Share:

By Village Missionary Movement

Wednesday, 19-Apr-2023

ಧೈನಂದಿನ ಧ್ಯಾನ(Kannada) – 19.04.2023

 

ಯೇಸುವಿಗಾಗಿ ಭಾರವನ್ನು ಹೊರೋಣ

 

"ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು” - ಮತ್ತಾಯ 11:28

 

ಆಗಸ್ಟ್ 9, 1945 ರಂದು, ಜಗತ್ತನ್ನು ಬೆಚ್ಚಿಬೀಳಿಸುವ ಘಟನೆ ಸಂಭವಿಸಿತು. ಎರಡನೆಯ ಮಹಾಯುದ್ಧದ ಸಮಯದಲ್ಲಿ, US ಮಿಲಿಟರಿಯು ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಪರಮಾಣು ಬಾಂಬ್‌ಗಳನ್ನು ಬೀಳಿಸಿತು, 200,000 ಕ್ಕೂ ಹೆಚ್ಚು ಜನರನ್ನು ಕೊಂದಿತು. ಆಗ ಅಮೆರಿಕದ ಯುವ ಸೇನಾಧಿಕಾರಿಯೊಬ್ಬರು ವಿನಾಶದ ಮೇಲ್ವಿಚಾರಣೆಗೆ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಬಂದರು. ಭಯಾನಕ ದೃಶ್ಯಗಳ ಸರಣಿಯನ್ನು ಛಾಯಾಚಿತ್ರ ಮಾಡುವಾಗ, ತನ್ನ ಸತ್ತ ಸಹೋದರನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಒಬ್ಬ ಹುಡುಗನನ್ನು ಚಿತ್ರೀಕರಿಸಿದನು. ಅವರು ಆ ಚಿಕ್ಕ ಹುಡುಗನನ್ನು ನೋಡಿ, “ಲೋ ತಮ್ಮಾ, ಸತ್ತ ಆ ಶವವನ್ನು ಎಸೆದು ಬಿಟ್ಟು ಹೋಗು. ಇಲ್ಲದಿದ್ದರೆ, ನೀನು ಶೀಘ್ರದಲ್ಲೇ ದಣಿದು ಆಯಾಸಗೊಳ್ಳುತ್ತೀಯ" ಎಂದರು. ಅದಕ್ಕೆ ಆ ಹುಡುಗ “ಇವನು ನನ್ನ ಸಹೋದರ. ಇವನು ನನಗೆ ಹೊರೆಯಲ್ಲ. ” ಅಂದನು. ಅದನ್ನು ಕೇಳಿದ ಅವರು ಸ್ತಬ್ಧರಾಗಿ ನಿಂತು ಕಣ್ಣೀರು ಸುರಿಸಿದರು. ಅವರು ತೆಗೆದ ಫೋಟೋ ಮತ್ತು ಶೀರ್ಷಿಕೆ ಈಗ ಜಪಾನ್‌ನಾದ್ಯಂತ ಐಕ್ಯವಾಗಿರಲು ಆಧಾರವಾಯಿತು.

 

ಇಂದು ಲಕ್ಷಾಂತರ ಯುವಕರು ಸತ್ತಿದ್ದಾರೆ ಮತ್ತು ಯೇಸುವನ್ನು ತಿಳಿಯದೆ ವಿನಾಶದತ್ತ ಸಾಗುತ್ತಿದ್ದಾರೆ. ಕಾಯಿನನಂತೆ ನಾನೇನು ನನ್ನ ತಮ್ಮನಿಗೆ ಕಾವಲುಗಾರನೋ ಎಂದು ಹೇಳುವ ಮನಸ್ಥಿತಿಯಲ್ಲಿದ್ದೇವಾ? ಅಥವಾ, ಅವರನ್ನೆಲ್ಲಾ ಯೇಸುವಿನ ಬಳಿಗೆ ಕರೆತರಬೇಕು ಎಂಬ ಬಯಕೆ ಇದೆಯೇ? ಪಾಪ, ಶಾಪ, ರೋಗ, ಸಾಲ, ಕಾಮ, ನಿರುದ್ಯೋಗ ಇತ್ಯಾದಿಗಳ ಹೊರೆಯಿಂದ ನರಕಯಾತನೆಯತ್ತ ಸಾಗುತ್ತಿರುವ ವ್ಯಕ್ತಿಗಳನ್ನು ಪ್ರೀತಿಯಿಂದ ಆಹ್ವಾನಿಸುವ ಪ್ರಿಯನ ಇಂಪಾದ ಸನ್ನಿಧಾನಕ್ಕೆ ನಾವೂ ಸಹ ಆ ಪುಟ್ಟ ಬಾಲಕನಂತೆ, ಅವರನ್ನು ಹೊತ್ತುಕೊಂಡು ಬರೋಣವಾ? ಅವರ ಮೇಲೆ ಪ್ರೀತಿ ಇದ್ದರೆ “ನನಗೆ ಭಾರವಾಗಿಲ್ಲ” ಎನ್ನುತ್ತೇವೆ. ಏಕೆಂದರೆ ಅವನು ನನ್ನ ಸ್ವಂತ ಸಹೋದರ ಮತ್ತು ಸಹೋದರಿ! "ಭಾರತದ ಯೌವನಸ್ಥರು ಯೇಸುವಿಗೆ" ಎಂಬ "ಭಾರ" ಇಂದು ನಮ್ಮಲ್ಲಿ ಮೂಡಲಿ! ಯೇಸುವಿಗಾಗಿ ಭಾರವನ್ನು ಹೊರಲು ನಿರ್ಧರಿಸೋಣ.

- Bro.ಭಾಕ್ಯನಾದನ್

 

ಪ್ರಾರ್ಥನಾ ಅಂಶ:

ನಾವು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸೇವಾ ಕ್ಷೇತ್ರಗಳಿಂದಲೂ ಒಂದು ಲಕ್ಷ ಯೌವನಸ್ಥರು ಈ ಯೌವನಸ್ಥರ ಉಜ್ಜೀವನ ಕೂಟದಲ್ಲಿ ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş