Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.04.2023
Share:

By Village Missionary Movement

Tuesday, 18-Apr-2023

ಧೈನಂದಿನ ಧ್ಯಾನ(Kannada) – 18.04.2023

 

ಒಳ್ಳೆಯ ಕ್ರಿಯೆಗಳು

 

"ಯಾರು ಪ್ರಭಾವ ಮಾನ ನಿರ್ಲಯತ್ವಗಳನ್ನು ಹೊಂದಬೇಕೆಂದು ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ ಅವರಿಗೆ ನಿತ್ಯಜೀವವನ್ನು ಕೊಡುವನು" - ರೋಮಾ 2:7

 

ಒಬ್ಬ ಟೈಲರ್ ತನ್ನ ಅಂಗಡಿಯಲ್ಲಿ ಬಟ್ಟೆ ಹೊಲಿಯುತ್ತಿದ್ದರು. ಅವರ ಮಗ ಅವರ ಕೆಲಸವನ್ನು ಹತ್ತಿರದಿಂದ ನೋಡುತ್ತಿದ್ದನು. ಟೈಲರ್ ಹೊಸ ಉಡುಪನ್ನು ಎತ್ತಿಕೊಂಡರು. ಅವನು ಅದನ್ನು ಸುಂದರವಾದ ಹೊಳೆಯುವ ಕತ್ತರಿಯಿಂದ ತುಂಡುಗಳಾಗಿ ಕತ್ತರಿಸಿದರು. ನಂತರ ಕತ್ತರಿಯನ್ನು ಕಾಲಿನ ಬಳಿ ಇಟ್ಟು ಬಟ್ಟೆ ಹೊಲಿಯತೊಡಗಿದ. ಬಟ್ಟೆಯನ್ನು ಹೊಲಿದ ನಂತರ ಅವರು ಒಂದು ಸಣ್ಣ ಸೂಜಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲಿನ ಟೋಪಿಗೆ ಚುಚ್ಚಿ ಭದ್ರಪಡಿಸಿದರು.

 

ಇದನ್ನು ನೋಡಿದ ಮಗ ಅವರಿಗೆ, "ಅಪ್ಪಾ, ಕತ್ತರಿ ದುಬಾರಿ ಮತ್ತು ಸುಂದರವಾಗಿದೆ, ನೀವು ಅದನ್ನು ಅಜಾಗರೂಕತೆಯಿಂದ ನಿಮ್ಮ ಪಾದಗಳ ಬಳಿ ಹಾಕಿದ್ದೀರ. ಸೂಜಿ ಚಿಕ್ಕದಾಗಿದೆ ಮತ್ತು ಚೂಪಾಗಿದೆ. ಆದರೆ ನೀವು ಅದನ್ನು ನಿಮ್ಮ ತಲೆಯ ಮೇಲೆ ಭದ್ರಪಡಿಸುತ್ತಿದ್ದೀರ. ಅದು ಏಕೆ?" ಎಂದು ಕೇಳಿದನು. ಹೀಗೆ ಕುತೂಹಲವಾಗಿ ಕೇಳಿದ ಮಗನಿಗೆ ಇದರಿಂದ ಏನಾದರೂ ಒಳ್ಳೆಯ ವಿಷಯ ಅವನ ಮನದೊಳಗೆ ಆಳವಾಗಿ ಇಳಿಯುವಂತೆ ಕಲಿಸಿಕೊಡಬೇಕೆಂದು ಬಯಸಿದರು. ಸೂಜಿಯನ್ನು ಎಲ್ಲೆಲ್ಲೋ ಹಾಕಿದರೆ ಹುಡುಕುವುದು ಕಷ್ಟ, ಕಳೆದುಹೋಗುತ್ತದೆ ಎಂಬುದು ಮೊದಲ ಕಾರಣವಾದರೂ, ಅವರು ಹೇಳಿದ ಉತ್ತರವು ಹುಡುಗನ ಹೃದಯದಲ್ಲಿ ಬಹಳ ಆಳವಾಗಿ ಇಳಿಯಿತು.

 

“ಮಗನೇ, ಕತ್ತರಿ ಸುಂದರ ಮತ್ತು ಬೆಲೆಯುಳ್ಳದ್ದಾಗಿದ್ದರೂ ಅದರ ಕೆಲಸ ಕತ್ತರಿಸುವುದು, ಅಂದರೆ, ವಿಭಜಿಸುವುದು! ಆದರೆ ಸೂಜಿ ಚಿಕ್ಕದಾಗಿದೆ ಮತ್ತು ಚೂಪಾಗಿದೆ, ಆದರೆ ಅದರ ಕ್ರಿಯೆಯು ಸೇರಿಸುವಂತದ್ದಾಗಿದೆ. ವ್ಯಕ್ತಿಯ ಮೌಲ್ಯವು ಅವನ ಕಾರ್ಯಗಳಿಂದ ನಿರ್ಧರಿಸಲ್ಪಡುತ್ತದೆ. ರೂಪದಿಂದಲ್ಲ.

 

ಹೌದು ಪ್ರಿಯರೇ! ನಾವೂ ಕೂಡ ಯಾವ ರೀತಿಯ ಫಲವುಳ್ಳವರಾಗಿದ್ದೇವೆ. ಒಳ್ಳೆಯ ಮರವು ಒಳ್ಳೆಯ ಫಲವನ್ನು ನೀಡುತ್ತದೆ ಎಂದು ನಾವು ನೋಡುತ್ತೇವೆ. ಅದೇ ರೀತಿಯಲ್ಲಿ ನಾವು ಕೂಡ ಆತ್ಮದ ಒಂಬತ್ತು ಫಲಗಳನ್ನು ಧರಿಸಿಕೊಳ್ಳೋಣ. (ಗಲಾತ್ಯ. 5:22-23).

 

ನಾವು ಸತ್ಯವೇದದಲ್ಲಿಯೂ ಸಹ ಪೌಲನನ್ನು ನೋಡುವಾಗ, ಅವರು ಕಠಿಣವಾದ ಸೌಲನಾಗಿದ್ದರು ಮತ್ತು ಅವರು ಪೌಲನಾದ ನಂತರ ಬಹಳ ಫಲಗಳನ್ನು ಕೊಟ್ಟರು. ಅವರು ತನ್ನನ್ನು ಸಂಪೂರ್ಣವಾಗಿ ಕ್ರಿಸ್ತನಿಗೆ ಅರ್ಪಿಸಿಕೊಂಡರು. ಅವರ ಮುಂದಿನ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಬೇರ್ಪಟ್ಟವರನ್ನು (ಫಿಲೆಮೋನ, ಓನೇಸಿಮನು) ಒಂದುಗೂಡಿಸುವುದು, ಜೈಲಿನಲ್ಲಿದ್ದಾಗಲೂ ಸಭೆಗಳಿಗೆ ಸುವಾರ್ತೆ ಪ್ರಕಟಿಸುವುದು, ಸಭೆಗಳಿಗೆ ಸಲಹೆ ನೀಡುವುದು ಹೀಗೆ ಅವರ ಫಲಗಳು ಬೆಳೆಯುತ್ತಲೇ ಇದ್ದವು.

 

ನಾವು ಯಾವ ರೀತಿಯ ಪರಿಸ್ಥಿತಿಯಲ್ಲಿದ್ದೇವೆ? ನಾವು ಇತರರಿಗೆ ಒಳ್ಳೇದನ್ನು ಮಾಡುತ್ತಿದ್ದೇವಾ? ಅಥವಾ, ಕೆಟ್ಟದ್ದಕ್ಕೆ ಕೆಟ್ಟದ್ದನ್ನು ಮಾಡುತ್ತಿದ್ದೇವಾ? ಸ್ವಲ್ಪ ಯೋಚಿಸೋಣ. ಕ್ರಿಸ್ತನಂತೆ, ಪೌಲನಂತೆ, ಪಾಡುಗಳ ಮಧ್ಯೆಯೂ ಇತರರಿಗೆ ಒಳ್ಳೆಯ ಫಲವನ್ನು ನೀಡೋಣ. ಕ್ರಿಸ್ತನ ಪ್ರೀತಿಯನ್ನು ಎಲ್ಲೆಡೆ ಸಾರೋಣ. ಆಮೆನ್.  

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ತಿರುಚ್ಚಿ ಯೌವನಸ್ಥರ ಉಜ್ಜೀವನ ಕೂಟಕ್ಕೆ ತಮಿಳುನಾಡಿನಲ್ಲಿರುವ ಎಲ್ಲಾ ಸಭೆಗಳಿಂದಲೂ ಸಹಾಯ ಮಾಡುವಂತೆ, ಯೌವನಸ್ಥರನ್ನು ಕಳುಹಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin