Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.04.2023 (Kids Special)
Share:

By Village Missionary Movement

Sunday, 16-Apr-2023

ಧೈನಂದಿನ ಧ್ಯಾನ(Kannada) – 16.04.2023 (Kids Special)

 

ಮ್ಯಾಜಿಕ್ ಕೆಲಸ ಮಾಡೋದಿಲ್ಲ

 

"ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ" - ಕೀರ್ತನೆ 119:72

 

ಕೂ... ಚಿಕುಬುಕು... ಚಿಕುಬುಕು.. ಎಂಬ ಸದ್ದು ಕೇಳಿದ ಕೂಡಲೇ... ಹೈ Train ಹೋಗ್ತಿದೆ ಅಂತ ಟಾಟಾ ಹೇಳುತ್ತೇವೆ. Happy ಯಾಗಿ ಇರುತ್ತೆ ಅಲ್ವಾ ಪುಟಾಣಿಗಳೇ. ಯಾರೆಲ್ಲಾTrain ನಲ್ಲಿ ಹೋಗಿದೀರ... ತುಂಬಾ ಜಾಲಿಯಾಗಿರುತ್ತೆ ಅಲ್ವಾ... ಇಂದು ನಾವು Train ನಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯ ಬಗ್ಗೆ ಕೇಳಲಿದ್ದೇವೆ? ಕೇಳೋಣ್ವಾ? ಆರ್ ಯು ರೆಡಿ?

 

ಕೆಲಸಕ್ಕೆ ಹೋಗುವವರು, ಟೂರ್ ಹೋಗುವವರು, ಕಾಲೇಜಿಗೆ ಹೋಗುವವರು ಬಹಳಷ್ಟು ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ ಅಲ್ವಾ? ಒಮ್ಮೆ ಯೇಸಪ್ಪಗಾಗಿ ಕೆಲಸ ಮಾಡುವ ಒಂದು ಅಂಕಲ್ ಅದರಲ್ಲಿ ಪ್ರಯಾಣಿಸಿದರು. ಒಬ್ಬ ಮ್ಯಾಜಿಕ್ ಮಾಡೋ ವ್ಯಕ್ತಿ ಕೂಡ ಹತ್ತಿದ. ಮ್ಯಾಜಿಕ್ ಎಂದ ಕೂಡಲೇ ಸಂಡೇ ಸ್ಕೂಲ್ ಮತ್ತು VBS ನಲ್ಲಿ ನಿಮ್ಮನ್ನು ಸಂತೋಷಪಡಿಸಲು ಮಾಡುವ ಮ್ಯಾಜಿಕ್ ಅಂತಾ ಅಂದ್ಕೋಬೇಡಿ. ಇದು ಮಾಯಾವಿದ್ಯೆಯನ್ನು ಬಳಸಿ ಮಾಡ್ತಾರೆ! ಅವರು ಮಂತ್ರಗಳನ್ನು ಜಪಿಸುತ್ತಾ ತನಗೆ ತಿಳಿದ ಜಾದೂ ಮಾಡುತ್ತಾ ಹಣ ಸಂಪಾದಿಸುತ್ತಿದ್ದರು. “ಎಲ್ಲರೂ ನನ್ನನ್ನು ನೋಡಿ. ಈ ಡಬ್ಬಿ ಖಾಲಿಯಾಗಿದೆ” ಡಬ್.. ಡಬ್.. ಎಂದು ಮೇಲೆ ಕೆಳಗೆ ತಟ್ಟಿದರು. ಅದೇ ಡಬ್ಬವನ್ನು ತೆರೆದು ಡಬ್ ಡಬ್ ಎಂದು ಹೊಡೆದಾಗ ಅದರೊಳಗಿಂದ ತುಂಬಾ ಕಾಸು ಬಿತ್ತು. ಎಲ್ಲರಿಗೂ ಬಹಳ ಆಶ್ಚರ್ಯವಾಯಿತು. ಹೀಗೆ ಒಂದೊಂದು ಕೋಚ್ ಗೆ ಹೋಗಿ ಕೈತುಂಬಾ ಹಣ ಸಂಪಾದಿಸಿದರು. ಈಗ ಸೇವೆ ಮಾಡುತ್ತಿರುವ ಅಂಕಲ್ ಇರುವ ಕೋಚ್ ನಲ್ಲಿ ಅದೇ ಜಾದೂ ಮಾಡಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಡಬ್ಬಿ ತೆರೆದು ಸುರಿದರೆ ನಾಣ್ಯ ಬೀಳಲಿಲ್ಲ, ಸುತ್ತಲೂ ತಿರುಗಿ ನೋಡಿದರು. ಸೇವೆ ಮಾಡುತ್ತಿರುವ ಅಂಕಲ್ ಬೈಬಲ್ ಓದುತ್ತಿದ್ದರು. ಹೀಗಾಗಲು ಈ ಬೈಬಲ್ ಕಾರಣ ಎಂದು ಭಾವಿಸಿ ಅದನ್ನು ತೆಗೆದುಕೊಂಡು ದೂರ ಇಟ್ಟರು.

 

ಸರಿ, ಈಗ ನಮ್ಮ ಕೆಲಸ ಶುರು ಮಾಡೋಣ ಅಂತ ಎಲ್ಲರೂ ನನ್ನ ಕಡೆ ನೋಡಿ ಖಾಲಿ ಡಬ್ಬದಿಂದ ಹಣದ ಮಳೆ ಸುರಿಯುತ್ತೆ ಅಂದಾಗ ಎಲ್ಲರೂ ಅವನನ್ನೇ ನೋಡುತ್ತಿದ್ದಾಗ ಏನೂ ಆಗಲಿಲ್ಲ. ಅವರಿಗೆ ಬೇಜಾರಾಗೋಯ್ತು. ಸೇವಕರಾದ ಅಂಕಲ್ ಹೇಳಿದರು, “ನೀವು ಬೈಬಲ್ ತೆಗೆದುಕೊಂಡು ದೂರ ಇಟ್ಟರೂ, ವಾಕ್ಯಗಳು ನನ್ನ ಹೃದಯದಲ್ಲಿ ಇವೆಯಲ್ಲಾ! ಯೇಸಪ್ಪ ನನ್ನಲ್ಲಿ ಇರುವುದರಿಂದ ಆತನ ಶಕ್ತಿಯೂ ಇಲ್ಲಿದೆ” ಎಂದು ಹೇಳಿದ ಕೂಡಲೇ ಇದೇನು? ಯೇಸಪ್ಪನ ಶಕ್ತಿಯ ಮುಂದೆ ಮ್ಯಾಜಿಕ್ ಕೆಲಸ ಮಾಡುವುದಿಲ್ಲವಂತೆ, ಯೇಸುವೇ ನಿಜವಾದ ದೇವರು ಎಂದು ತಿಳಿದು ಆ ಕೋಚ್‌ನಲ್ಲಿ ಪ್ರಯಾಣಿಸಿದ ಪ್ರತಿಯೊಬ್ಬರೂ ಯೇಸಪ್ಪನ ಮೇಲೆ ನಂಬಿಕೆ ಇಟ್ಟರು. ಆ ಸೇವಕರು ಯಾರು ಗೊತ್ತಾ? ಅವರೇ ಸಾಧು ಸುಂದರಸಿಂಗ್. ಅವರಲ್ಲಿದ್ದ ಈ ದೇವರ ವಾಕ್ಯಗಳು ಎಷ್ಟು ದೊಡ್ಡ ಬದಲಾವಣೆಯನ್ನು ಉಂಟುಮಾಡಿತು ನೋಡುದ್ರಾ? ಪ್ರೀತಿಯ ಪುಟಾಣಿಗಳೇ! ನಿಮಗೆ ಕಲಿಸುವ ದೇವರ ವಾಕ್ಯಗಳನ್ನು ಮರೆಯಬಾರದು. ಅಷ್ಟೇ ಅಲ್ಲ ಪ್ರತಿದಿನ ಒಂದು ವಾಕ್ಯವನ್ನಾದರೂ ಕಂಠಪಾಠ ಮಾಡುವುದನ್ನು ಕಲಿಯಬೇಕು. ಜೀವವುಳ್ಳ ಈ ವಾಕ್ಯವು ನಿನಗೂ ಮತ್ತು ನಿನ್ನ ಮೂಲಕ ಇತರರಿಗೂ ದೇವರ ಶಕ್ತಿಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಏನು ಪುಟಾಣಿಗಳೇ, ಸತ್ಯವೇದವು ಎಷ್ಟು ಶ್ರೇಷ್ಠವೆಂದು ನಿಮಗೆ ಗೊತ್ತಾಯ್ತು ಅಲ್ವಾ? ಇಂದಿನಿಂದಲೇ ಸತ್ಯವೇದವನ್ನು ಓದಲು ಪ್ರಾರಂಭಿಸಿರಿ. Ok ತಾನೇ!

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet