Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.04.2023
Share:

By Village Missionary Movement

Saturday, 15-Apr-2023

ಧೈನಂದಿನ ಧ್ಯಾನ(Kannada) – 15.04.2023

 

ಬೆಲೆಕಟ್ಟಲಾಗದ ಮುತ್ತು

 

“ನಾನು ನನ್ನ ನ್ಯಾಯಪ್ರಮಾಣದ ದೊಡ್ಡ ಸಂಗತಿ ಗಳನ್ನು ಅವನಿಗೆ ಬರೆದಿದ್ದೇನೆ; ಆದರೆ ಅವುಗಳು ಅನ್ಯವಾದವುಗಳೆಂದು ಎಣಿಸಲ್ಪಟ್ಟಿವೆ" - ಹೋಶೇಯ 8:12

 

ಕಮ್ಯುನಿಸ್ಟ್ ಮತ್ತು ನಾಸ್ತಿಕ ಕಿರುಕುಳದ ನಡುವೆ ರೊಮೇನಿಯಾದಲ್ಲಿ ಅತ್ಯಂತ ಉತ್ಸಾಹಭರಿತವಾಗಿ ಸೇವೆಯನ್ನು ಮಾಡಿದಂತವರೇ ರಿಚರ್ಡ್ ಉಂಬ್ರಾಂಡ್ಟ್ ಎಂಬ ದೈವಿಕ ವ್ಯಕ್ತಿ. ಅವರು ರೊಮೇನಿಯಾದಲ್ಲಿ ರಷ್ಯಾದ ಗಡಿಯಲ್ಲಿ ಸೇವೆ ಮಾಡುತ್ತಿದ್ದಾಗ ನಡೆದ ಘಟನೆಯನ್ನು ನಾನು ನಿಮಗೆ ಹೇಳುತ್ತೇನೆ. ಅದೊಂದು ಹಿಮಗಾಲ. ಹಿಮದ ಜೊತೆಗೆ ಮೃದುವಾದ ಮಳೆ ಹನಿಗಳು ಅದರೊಂದಿಗೆ ಕಠಿಣವಾದ ಚಳಿಯೂ ಕಂಡುಬಂತು. ಅವರನ್ನು ನೋಡಲು ರಷ್ಯಾದಿಂದ ಇಬ್ಬರು ಬಂದರು. ಅವರನ್ನು ಸ್ವಾಗತಿಸಿದ ಉಂಬ್ರಾಂಡ್, ಅವರನ್ನು ಭೇಟಿ ಮಾಡಲು ಬಂದವರ ಉದ್ದೇಶವನ್ನು ತಿಳಿದು ತುಂಬಾ ಸಂತೋಷಪಟ್ಟರು. ಏಕೆಂದರೆ ಅವರು ಸತ್ಯವೇದವು ಬೇಕು ಎಂದು ಕೇಳಲು ಬಂದಿದ್ದರು. ರೊಮೇನಿಯಾದಂತೆ ರಷ್ಯಾದಲ್ಲಿಯೂ ಕ್ರೈಸ್ತರು ಕಿರುಕುಳಕ್ಕೊಳಗಾದರು. ಎರಡು ವಾರಗಳ ನಂತರ ಧನ್ಯವಾದದ ಪತ್ರ ಬಂದಿತು. ನೀವು ನಮಗೆ ನೀಡಿದ ಸತ್ಯವೇದವು ಬಹಳ ಉಪಯುಕ್ತವಾಗಿದೆ. ಅಷ್ಟೇ ಅಲ್ಲ, ನಮ್ಮ ಬಳಿ ಸತ್ಯವೇದವಿದೆ ಎಂದು ತಿಳಿದ ಅಕ್ಕಪಕ್ಕದ ಹಳ್ಳಿಯ ಕ್ರೈಸ್ತರು ನಮ್ಮ ಬಳಿ ಸತ್ಯವೇದವನ್ನು ತೆಗೆದುಕೊಂಡು ಓದುತ್ತಿದ್ದಾರೆ. ಅನೇಕರು ಕೇಳಿಕೊಂಡದ್ದರಿಂದ ನಾವು ಒಂದು ತೀರ್ಮಾನಕ್ಕೆ ಬಂದು ನೀವು ನಮಗೆ ನೀಡಿದ ಎರಡು ಸತ್ಯವೇದಗಳನ್ನು 32 ತುಂಡುಗಳಾಗಿ ಹರಿದು ಕೊಟ್ಟಿದ್ದೇವೆ. 32 ಹಳ್ಳಿಗಳಲ್ಲಿ ರಷ್ಯಾದ ಹಳ್ಳಿ ಜನರು ಓದಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಬರೆಯಲಾಗಿತ್ತು. ಇದನ್ನು ಓದಿದ ಉಂಬ್ರಾಂಡ್ ರುಮೇನಿಯಾದಲ್ಲಿ ಮಾತ್ರವಲ್ಲದೆ ರಷ್ಯಾದಲ್ಲಿಯೂ ದೇವರ ಕೆಲಸವನ್ನು ಉತ್ಸಾಹದಿಂದ ಮಾಡಿದರು.

 

ಪ್ರಿಯರೇ, ಸತ್ಯವೇದಕ್ಕಾಗಿ ಹಂಬಲಿಸುವ ಅನೇಕ ರೊಮೇನಿಯನ್ನರು ಮತ್ತು ರಷ್ಯನ್ನರು ಇದ್ದಾರೆ. ಆದರೆ ಎಷ್ಟೋ ಕ್ರೈಸ್ತರು ತಮ್ಮ ಕೈಯಲ್ಲಿ ಸತ್ಯವೇದವಿದ್ದರೂ ಅದನ್ನು ಓದುವುದೇ ಇಲ್ಲ! ನಾವು ದೇವರ ನ್ಯಾಯತೀರ್ಪಿನಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ? ವೈದಿಕರು ಎಂದು ಕರೆಯಲ್ಪಡುವ ನಾವು ಎಷ್ಟು ದಿನ ಸತ್ಯವೇದವನ್ನು ಓದುತ್ತೇವೆ? ನಮ್ಮಲ್ಲಿ ಅನೇಕರು ಸತ್ಯವೇದವನ್ನು ಓದದೆಯೇ ವೇಷಧಾರಿಗಳಾಗಿ ಅಲೆದಾಡುತ್ತಿದ್ದೇವೆ. ಅಂದು ಆ ರಷ್ಯನ್ನರು ತಮ್ಮ ಕೈಯಲ್ಲಿ ಸಿಕ್ಕಿದ ಸತ್ಯವೇದವನ್ನು ಆ ಅರ್ಧ ಗಂಟೆಯಲ್ಲಿ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಎಷ್ಟು ಆಸಕ್ತಿಯಿಂದ ಗಮನವಿಟ್ಟು ಪ್ರಾರ್ಥನಾಪೂರ್ವಕವಾಗಿ ಓದಿರಬಹುದು! ಅದರ ಬಗ್ಗೆ ಯೋಚಿಸೋಣ. ಸಮಯ ತೆಗೆದುಕೊಂಡು ಸತ್ಯವೇದವನ್ನು ಓದಿರಿ. ನಿಮ್ಮ ಜೀವನವು ಮುತ್ತಾಗಿ ಮಾರ್ಪಡುತ್ತದೆ. ದೇವರು ಅದ್ಭುತವಾಗಿ ತನ್ನ ಮಾತುಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುವುದನ್ನು ನೋಡುತ್ತೀರಿ.

- Mrs. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಧ್ಯದಲ್ಲಿ ನಡೆಯುವಂತಹ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet