By Village Missionary Movement
Thursday, 13-Apr-2023ಧೈನಂದಿನ ಧ್ಯಾನ(Kannada) – 13.04.2023
ಕಪ್ಪು ಮತ್ತು ಬಿಳಿ
"ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವುದಿಲ್ಲ" - ಯೋಹಾನ 3:20
ಅಜ್ಜ ಮತ್ತು ಮೊಮ್ಮಗ ಒಂದು ಉದ್ಯಾನವನದಲ್ಲಿ ಕುಳಿತು ಮಾತನಾಡುತ್ತಿದ್ದರು. ನಾಲ್ಕನೇ ತರಗತಿ ಓದುತ್ತಿದ್ದ ಆ ಹುಡುಗ ತನ್ನ ಅಜ್ಜನಿಗೆ ಒಂದು ಪ್ರಶ್ನೆ ಕೇಳಿದನು. 'ಅಜ್ಜ! ಅಜ್ಜ! ನನ್ನ ಕನಸಿನಲ್ಲಿ ಎರಡು ನಾಯಿಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಒಂದು ಕಪ್ಪು ಮತ್ತು ಇನ್ನೊಂದು ಬಿಳಿ. ಅವು ಯಾವಾಗಲೂ ಜಗಳವಾಡುತ್ತಿರುತ್ತವೆ. ಈ ಎರಡು ನಾಯಿಗಳಲ್ಲಿ ಯಾವುದು ಗೆಲ್ಲುತ್ತದೆ ಎಂದು ಗೊತ್ತಿಲ್ಲ? ಎಂದನು. ಅದಕ್ಕೆ ಅಜ್ಜ, ‘ಯಾವ ನಾಯಿಗೆ ಆಹಾರ ಕೊಡಲ್ಪಟ್ಟಿತೋ ಆ ನಾಯಿಯೇ ಗೆಲ್ಲುತ್ತದೆ’ ಎಂದರು.
ನಿಜವೇ, ಮಾನವ ಜೀವನದಲ್ಲೂ ಹೀಗೆಯೇ. ನಾವು ನಮ್ಮ ಹೃದಯದಲ್ಲಿ ಯಾವುದಕ್ಕೆ ಹೆಚ್ಚು ಸ್ಥಾನವನ್ನು ನೀಡುತ್ತೇವೆಯೋ ಅದು ನಮ್ಮ ಆಲೋಚನೆಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ ಮತ್ತು ಕ್ರಿಯೆಯಲ್ಲಿ ಆಕಾರವನ್ನು ಪಡೆಯುತ್ತದೆ. "...ಹೃದಯದ ಸಮೃದ್ಧಿಯಿಂದ ಅವನವನ ಬಾಯಿ ಮಾತನಾಡುತ್ತದೆ." ಅದು ಕ್ರಿಯೆಯಾಗಿಯೂ ಮಾರ್ಪಡುತ್ತದೆ.
ಶಾರೀರಿಕವಾದ ಚಿಂತನೆಯು ಮರಣ. ನಮ್ಮ ಜೀವನದಲ್ಲಿ ಅನೇಕ ಕರಾಳ ವಿಷಯಗಳಿದ್ದರೆ, ಯೇಸು ನಮ್ಮಲ್ಲಿ ವಾಸಿಸಲು ಸಾಧ್ಯವಿಲ್ಲ. ಲೋಕಕ್ಕೆ ಬಂದು ಪ್ರತಿಯೊಬ್ಬ ಮನುಷ್ಯನನ್ನು ಪ್ರಕಾಶಿಸುವ ನಿಜವಾದ ಬೆಳಕಾಗಿರುವ ಯೇಸುಕ್ರಿಸ್ತನ ಬಳಿ ನಮ್ಮನ್ನು ಸಮರ್ಪಿಸಿಕೊಂಡರೆ, ನಮ್ಮ ಪಾಪಗಳನ್ನು ಕ್ಷಮಿಸಿ, ಅವುಗಳಿಂದ ನಮಗೆ ಬಿಡುಗಡೆ ಕೊಟ್ಟು, ನಮ್ಮ ಕಾರ್ಯಗಳನ್ನು ಒಳ್ಳೆಯ ಕಾರ್ಯಗಳಾಗಿ ಪರಿವರ್ತಿಸುತ್ತಾರೆ. "ಯೇಸು ಜನರನ್ನು ನೋಡಿ: ನಾನು ಲೋಕಕ್ಕೆ ಬೆಳಕಾಗಿದ್ದೇನೆ, ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೇ ಜೀವ ಬೆಳಕನ್ನು ಹೊಂದುವನು ಎಂದರು."
ಪರಿಶುದ್ಧ ಗ್ರಂಥದಲ್ಲಿ ಗಲಾತ್ಯದವರಿಗೆ 5: 19-21 ನೇ ವಚನಗಳಲ್ಲಿ ಶರೀರದ ಕ್ರಿಯೆಗಳು ಯಾವುವು ಎಂಬುದರ ಬಗ್ಗೆಯೂ, 22 ಮತ್ತು 23 ನೇ ವಚನಗಳಲ್ಲಿ ನಮ್ಮ ಜೀವನದಲ್ಲಿ ಇರಬೇಕಾದ ಫಲಗಳ ಬಗ್ಗೆಯೂ ತಿಳಿದುಕೊಳ್ಳಲು ಸಾಧ್ಯ. ಯೇಸುವೇ ಮಾರ್ಗವು, ಸತ್ಯವು, ಜೀವವೂ ಆಗಿದ್ದಾರೆ. ಆದ್ದರಿಂದ, ನಾವು ಆತನನ್ನು ನಮ್ಮ ದೇವರೆಂದು ಸ್ವೀಕರಿಸಿ ಆತನನ್ನು ಅನುಸರಿಸಿದರೆ, ನಾವು ತೀರ್ಪಿನಿಂದ ಪಾರಾಗಿ ನಿತ್ಯ ಜೀವವನ್ನು ಪಡೆಯಬಹುದು.
- Mrs. ಜಯಂತಿ ಬಾಕ್ಕಿಯನಾದನ್
ಪ್ರಾರ್ಥನಾ ಅಂಶ:
7000 ಪ್ರಾರ್ಥನಾ ಗುಂಪುಗಳನ್ನು ರಚಿಸುವ ಕೆಲಸದಲ್ಲಿ ಸೇವಾಕ್ಷೇತ್ರದ ಸೇವಕರಿಗೆ ದೇವರ ಸಹಾಯವು ದೊರೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482