By Village Missionary Movement
Wednesday, 12-Apr-2023ಧೈನಂದಿನ ಧ್ಯಾನ(Kannada) – 12.04.2023
ಕೋಳಿಯ ಕೂಗು
"ಅದಕ್ಕೆ ಅವನು--ಆ ಮನುಷ್ಯನನ್ನು ನಾನು ಅರಿಯೆನು ಎಂದು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಕೋಳಿ ಕೂಗಿತು" - ಮತ್ತಾಯ 26:74
ಮುಂಜಾನೆಯೇ ಜನರನ್ನು ಎಬ್ಬಿಸುವ ಕೋಳಿ ಇದು. ಸತ್ಯವೇದದಲ್ಲಿ ದೇವರು ಇದಕ್ಕೂ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. ಕೋಳಿ ನಮ್ಮ ಮುಂದೆ ನಡೆದು ಬರುವಾಗ, ಅದರ ಗಾಂಭೀರ್ಯವಾದ ನೋಟವು ತುಂಬಾ ಸುಂದರವಾಗಿರುತ್ತದೆ. ಅದನ್ನು ನೋಡುವ ಮಾಂಸದ ಅಂಗಡಿಯವನು, 'ಈ ಕೋಳಿ ಒಳ್ಳೆಯ ಬೆಲೆಗೆ ಹೋಗುತ್ತದೆ' ಎಂದು ಯೋಚಿಸುತ್ತಾನೆ, ‘ಇದು ಯಾರ ಮನೆಯ ಕೋಳಿ, ನಮ್ಮ ತೋಟವನ್ನು ತೋಡಲು ಬಂದಿದೆ’ ಎಂದುಕೊಳ್ಳುತ್ತೇವೆ. ಆದರೆ ಕ್ರೈಸ್ತ ಸಮುದಾಯದಲ್ಲಿ ಕೋಳಿ ಎಂದ ಕೂಡಲೇ ಪೇತ್ರನು ನೆನಪಿಗೆ ಬರುತ್ತಾರೆ. ಕೋಳಿ ಒಂದು ಪ್ರಬಲವಾದ ಎಚ್ಚರಿಕೆಯ ಸಂದೇಶವಾಹಕ ಎಂದು ಸಹ ಹೇಳಬಹುದು. ಪೇತ್ರನನ್ನು ಮನನೊಂದು ಅಳುವಂತೆ ಮಾಡಿದ್ದು ಕೋಳಿ . ಎಷ್ಟೇ ಶುಭವಾರ್ತೆ ಸಾರುವ ಸಂದೇಶಕರು ಬಂದರೂ ಒಬ್ಬರ ಹೃದಯದಲ್ಲೂ ಉಜ್ಜೀವನದ ಬೆಂಕಿ ಹೊತ್ತಿಕೊಂಡಿಲ್ಲ. ಈ ಕೋಳಿ ರಾತ್ರಿಯ ಕತ್ತಲೆಯಲ್ಲಿ ತನ್ನ ಧ್ವನಿಯನ್ನು ಎತ್ತಿ ಕೂಗುವಾಗ ಪೇತ್ರನನ್ನು ಅಳಿಸಿಬಿಟ್ಟಿತು. ಕೋಳಿಯ ಮೂಲಕ ಪೇತ್ರನಿಗೆ ಅರಿವಾಯಿತು. ಶಿಲುಬೆಯ ಮುಂದೆ ನಮ್ಮನ್ನು ಸಂಪೂರ್ಣವಾಗಿ ತಗ್ಗಿಸಿಕೊಳ್ಳುವಾಗ ಯಾವುದರ ಮೂಲಕವಾದರೂ ದೇವರು ನಮ್ಮೊಂದಿಗೆ ಮಾತನಾಡುತ್ತಾರೆ. ಅಷ್ಟೇಕೆ ಪ್ರವಾದಿಯಾದ ಬಿಳಾಮನನ್ನು ಎಚ್ಚರಿಸಲು ದೇವರು ಕತ್ತೆಯ ಬಾಯಿಯನ್ನು ತೆರೆಯಲಿಲ್ಲವೇ?
ಈ ಕೋಳಿಯ ಸ್ವರ ‘ನಾವು ಇರುವುದು ದೇವರ ಕೃಪೆಯಿಂದಲೇ’ ಎಂಬ ಸಂದೇಶವನ್ನೂ ಹೇಳುತ್ತಿದೆ. ಆದರೆ ಮನುಷ್ಯನು ತನ್ನ ಸ್ವಂತ ಶಕ್ತಿಯ ಬಗ್ಗೆ ಹೆಮ್ಮೆಪಡುತ್ತಾನೆ ಕೆಳಗೆ ಬಿದ್ದುಹೋಗುತ್ತಾನೆ. ಕರ್ತನು ಹೇಳಿದಾಗ, ಪೇತ್ರನು ತನ್ನ ದೌರ್ಬಲ್ಯವನ್ನು ಅರಿತುಕೊಳ್ಳಲಿಲ್ಲ ಸ್ವಯಂ-ಬಲವನ್ನು ನಂಬಿದನು. ಗೆತ್ಸೇಮನೆಯ ತೋಟದಲ್ಲಿ ಪ್ರಾರ್ಥಿಸುವ ಸಮಯದಲ್ಲಿ ಪ್ರಾರ್ಥಿಸಿದ್ದರೆ, ಆತನು ದೇವರ ಶಕ್ತಿಯನ್ನು ಪಡೆಯಬಹುದಿತ್ತು. ಆದರೆ ಪೇತ್ರನು ತನ್ನ ಬಲಹೀನತೆಯನ್ನು ಗ್ರಹಿಸಲಿಲ್ಲ, ಸ್ವಯಂ-ಬಲವನ್ನು ನಂಬಿದನು.
ದೇವರ ಮಕ್ಕಳೇ, ಆ ದಿನ ಕೋಳಿಯ ಕೂಗು ಪೇತ್ರನಿಗೆ ಅರಿವು ಮೂಡಿಸಿತು. ಈ ಧ್ಯಾನದ ಮೂಲಕ ದೇವರು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ದೇವರ ವಾಕ್ಯವು ನಿಮ್ಮ ಬಳಿಗೆ ಬಂದಾಗ, ಸರಿಪಡಿಸಬೇಕಾದ ವಿಷಯಗಳನ್ನು ಸರಿಪಡಿಸಿಕೊಳ್ಳಿರಿ, ಮನಸ್ಸನ್ನು ಕಠಿಣಮಾಡಿಕೊಳ್ಳಬೇಡಿರಿ. ಹೃದಯ ಮುರಿದವರಿಗೆ ದೇವರು ಹತ್ತಿರವಾಗಿದ್ದಾರೆ. ಕರ್ತನು ಪೇತ್ರನಿಗೆ ಹೇಗೆ ಮೂಲ ಪ್ರೀತಿಯನ್ನು ತಿಳಿಸಿ ಹೊಸ ಜೀವನವನ್ನು ಕೊಟ್ಟರೋ, ಹಾಗೆಯೇ ನಿಮಗೂ ಮಾಡಲು ಶಕ್ತನಾಗಿದ್ದಾರೆ. ಪುನಃ ಕರ್ತನ ಬಳಿಗೆ ಓಡಿಬಂದ ಪೇತ್ರನಂತೆ ನೀವೂ ಸಹ ಅವರ ಬಳಿಗೆ ಓಡಿ ಬನ್ನಿರಿ.
- Mrs. ಗ್ರೇಸ್ ಜೀವಮಣಿ
ಪ್ರಾರ್ಥನಾ ಅಂಶ:
ನಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482