By Village Missionary Movement
Tuesday, 11-Apr-2023ಧೈನಂದಿನ ಧ್ಯಾನ(Kannada) – 11.04.2023
ಶಿಲುಬೆಯ ಹತ್ತಿರ
“ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು;..." - ಯೆಶಾಯ 53:5
ಕ್ರೈಸ್ತ ಕುಟುಂಬದಲ್ಲಿ ಜನಿಸಿದ ನಾನು ಕುಟುಂಬ ಪ್ರಾರ್ಥನೆ, ಚರ್ಚ್ ಆರಾಧನೆ ಮತ್ತು ಸಬ್ಬತ್ ಶಾಲೆ ಹೀಗೆ ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದೆ. ಬೋಧಕರು ಹೇಳುವ ವಾಕ್ಯಗಳನ್ನು ಎಲ್ಲರಿಗಿಂತ ಮೊದಲು ನಾನೇ ತೆಗೆದು ಓದುತ್ತಿದ್ದೇನೆ ಎಂಬ ಹೆಮ್ಮೆ ನನಗಿತ್ತು. ಒಂದು ಸಾರಿ ರಜೆಯಲ್ಲಿ ನನ್ನ ಅಜ್ಜಿಯ ಮನೆಗೆ ಹೋಗಿದ್ದಾಗ, ಒಂದು ಕನ್ವೆಂಷನ್ ಕೂಟದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿತು. ಇನ್ನೇನು, ನಾನು ಎಲ್ಲದರಲ್ಲೂ ಸರಿಯಾಗಿದ್ದೇನೆ. ಹಾಗಾಗಿಯೇ ನನಗೆ ಅವಕಾಶಗಳು ಬರುತ್ತಿವೆ. ನನ್ನಲ್ಲಿ ಅನೇಕ ಪ್ರತಿಭೆಗಳಿವೆ ಎಂದು ನನ್ನ ಮನಸ್ಸು ಚಡಪಡಿಸುತ್ತಾ ಹಾರಾಡುತ್ತಿತ್ತು. ಸಭೆಯ ಮೊದಲ ದಿನವೇ ಬೋಧಕರು ನೀಡಿದ ದೇವರ ವಾಕ್ಯದ ಮೂಲಕ ಅನೇಕ ಜನರು ತಮ್ಮ ಪಾಪದ ಚಟಗಳನ್ನು ಒಪ್ಪಿಕೊಂಡು ಸಿಗರೇಟ್, ಬೀಡಿ, ನಶೆ ಡಬ್ಬಿ ಇಂತವುಗಳನ್ನು ಎತ್ತಿ ಬಿಸಾಡಿ, ದೇವರಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು. ಇದನ್ನು ನೋಡಿದ ನಾನು ತುಂಬಾ ಭಕ್ತಿಯುಳ್ಳವಳಂತೆ ಎಲ್ಲವನ್ನೂ ಗಮನಿಸುತ್ತಿದ್ದೆ. ಸಭೆಯ ಎರಡನೇ ದಿನ, ಯೇಸುಕ್ರಿಸ್ತನ ಪ್ರೀತಿ ಮತ್ತು ಆತನ ಶಿಲುಬೆಗೇರಿಸುವಿಕೆಯನ್ನು ವಿವರಿಸಿದಾಗ, ನನ್ನ ಹೃದಯ ಒಡೆದುಹೋಯಿತು ಮತ್ತು ನಾನು ಪಾಪಿ ಎಂದು ಒಪ್ಪಿಕೊಂಡೆ. ನಾನು ನನ್ನ ಎಲ್ಲಾ ಪಾಪಗಳನ್ನು, ಹೆಮ್ಮೆಯನ್ನು ಮತ್ತು ನನ್ನೊಳಗಿನ ಸುಳ್ಳುಗಳನ್ನು ಒಪ್ಪಿಕೊಂಡೆ ಮತ್ತು ಪುನರ್ಜನ್ಮದ ಅನುಭವವನ್ನು ಪಡೆದುಕೊಂಡೆ.
ಯೇಸುವನ್ನು ಶಿಲುಬೆಗೇರಿಸಿದಾಗ, ಇಬ್ಬರು ಕಳ್ಳರನ್ನು ಅವರೊಂದಿಗೆ ಶಿಲುಬೆಗೇರಿಸಲಾಯಿತು. ಒಬ್ಬ ಕಳ್ಳ ಹೆಮ್ಮೆಯಿಂದ ಮಾತನಾಡಿ ಯೇಸುವನ್ನು ಅಪಹಾಸ್ಯ ಮಾಡಿದನು. ಇನ್ನೊಬ್ಬ ಕಳ್ಳನು ಅವರು ಶಿಲುಬೆಯಲ್ಲಿ ಹೇಳಿದ ಮಾತುಗಳನ್ನು ಕೇಳಿ ತನ್ನ ಪಾಪವನ್ನು ಗ್ರಹಿಸಿ ನಮಗಾದರೂ ನ್ಯಾಯಯುತವಾಗಿ ಶಿಕ್ಷೆಯಾಗುತ್ತಿದೆ ಎಂದು ತನ್ನನ್ನು ತಾನೇ ವಿಚಾರಿಸಿ ತಿಳಿದುಕೊಂಡು, ತನ್ನ ಪಾಪಗಳನ್ನು ಒಪ್ಪಿಕೊಂಡನು. ಪರಿಣಾಮವಾಗಿ ಅವನು ರಕ್ಷಣೆಯ ಸಂತೋಷವನ್ನು ಪಡೆದುಕೊಂಡು ಪರಲೋಕ ನಿವಾಸಿಯಾಗಿ ಮಾರ್ಪಟ್ಟನು.
ನನ್ನ ಪ್ರಿಯರೇ! ಶಿಲುಬೆಗೇರಿಸುವ ಮೊದಲು ತನ್ನ ಪಾಪಗಳನ್ನು ಅರಿತುಕೊಂಡ ಕಳ್ಳನಂತೆ, ಶಿಲುಬೆಗೇರಿಸುವಿಕೆಯು ನನ್ನನ್ನು ಬದಲಾಯಿಸಿತು. ಹೌದು, ಶಿಲುಬೆಯ ಮುಂದೆ ಮೊದಲು ನಮ್ಮ ಹೆಮ್ಮೆಗಳು ಒಡೆಯಲ್ಪಡಬೇಕು. ನಾವು ಅವರ ತ್ಯಾಗವನ್ನು ನಮ್ಮ ತ್ಯಾಗದೊಂದಿಗೆ, ಅವರ ಸಂಕಟವನ್ನು ನಮ್ಮ ಸಂಕಟದೊಂದಿಗೆ ಹೋಲಿಸಲು ಸಾಧ್ಯವೇ? ಆತನ ಕಾರ್ಯಗಳ ಮುಂದೆ ನಮ್ಮ ಕಾರ್ಯಗಳು ನಿಲ್ಲಲು ಸಾಧ್ಯವೇ? ಹೌದು, ಶಿಲುಬೆಯು ಹತ್ತಿರ ಬಂದು ನಮ್ಮ ಜೀವನವನ್ನು ಸರಿಮಾಡಿಕೊಳ್ಳೋಣ. ನಮ್ಮ ಸ್ವಾರ್ಥವು ಸಾಯಲಿ.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಯೌವ್ವನಸ್ಥರ ಉಜ್ಜೀವನ ಕೂಟದ ಆರ್ಥಿಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482