Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.04.2023
Share:

By Village Missionary Movement

Monday, 10-Apr-2023

ಧೈನಂದಿನ ಧ್ಯಾನ(Kannada) – 10.04.2023

 

ದೇವೆರೇ ಬಲ್ಲ

 

"ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ..." - 2 ಪೂರ್ವಕಾಲ 16:9

 

ಒಂದು ದಿನ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಪಕ್ಕದಲ್ಲಿದ್ದ ಹದಿಹರೆಯದ ಹುಡುಗಿಯೊಬ್ಬಳು ಮೂವರು ಕುಳಿತುಕೊಳ್ಳುವಂತಹ ಸೀಟಿನಲ್ಲಿ ಕುಳಿತು ಹೆಡ್ ಸೆಟ್ ಮೂಲಕ ಹಾಡು ಕೇಳುತ್ತಿದ್ದಳು. ಅವಳ ಪಕ್ಕದಲ್ಲಿ ಒಬ್ಬ ವಯಸ್ಸಾದ ತಾಯಿ ಕುಳಿತಿದ್ದರು. ಸ್ವಲ್ಪ ಸಮಯದ ನಂತರ, ಆ ತಾಯಿ ಆ ಹುಡುಗಿಯ ಬಳಿ, "ನನ್ನ ಫೋನ್ ನಲ್ಲಿ ಚಾರ್ಜ್ ಇಲ್ಲ, ನಿನ್ನ ಕಿವಿಯಲ್ಲಿ ಇರುವುದನ್ನು ತೆಗೆದುಕೊಂಡು ಚಾರ್ಜ್ ಮಾಡಬಹುದೇ?" ಎಂದು ಕೇಳಿದರು. ಅದಕ್ಕೆ ಆ ಹುಡುಗಿ "ನಗುತ್ತಾ ಅಜ್ಜಿ ಇದರಲ್ಲಿ ಚಾರ್ಜ್ ಮಾಡಲು ಸಾಧ್ಯವಿಲ್ಲ” ಎಂದಳು. ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮ ಹೆತ್ತವರು ಅಥವಾ ಮನೆಯಲ್ಲಿ ಹಿರಿಯರು ನೋಡುವುದು ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಇದನ್ನು ಬಳಸಿಕೊಂಡು ಯುವಕರು ನನ್ನ ತಂದೆ ತಾಯಿಗೆ ಏನೂ ಗೊತ್ತಿಲ್ಲ ಎಂದು ಭಾವಿಸಿ ಅನೇಕ ಪಾಪಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ ದೇವರ ಕಣ್ಣುಗಳು ಭೂಮಿಯಲ್ಲೆಲ್ಲಾ ಸಂಚರಿಸುತ್ತಿದೆ ಎಂಬುದನ್ನು ಮರೆಯಬೇಡಿರಿ. ನಾವು ಮಾಡುವ ಪಾಪಕಾರ್ಯಗಳನ್ನು ಅವರು ನೋಡುತ್ತಿದ್ದಾರೆ.

 

ಸತ್ಯವೇದದಲ್ಲಿಯೂ ಸಹ ದೇವರು ಸಂಸೋನನಿಗೆ ಬಲವನ್ನು ಕೊಟ್ಟರು. ಕತ್ತೆಯ ದವಡೆಯ ಮೂಳೆಯಿಂದ ಸಾವಿರ ಜನರನ್ನು ಕೊಂದರು. ಅಷ್ಟೇ ಅಲ್ಲ, ಕುರಿಮರಿಯನ್ನು ಹರಿದು ಹಾಕುವಂತೆ, ಕೈಯಲ್ಲಿ ಏನೂ ಇಲ್ಲದಿದ್ದರೂ ಸಿಂಹವನ್ನು ಹರಿದು ಹಾಕಿದರು. ದೇವರು ಕೊಟ್ಟ ಬಲವನ್ನು ಸರಿಯಾಗಿ ಬಳಸದೆ ಪ್ರಾಪಂಚಿಕ ಆಸೆಗಳಿಗೆ ಸ್ಥಾನ ಕೊಟ್ಟು ಪಾಪಕ್ಕೆ ಬಿದ್ದರು. ತನ್ನ ಹೆತ್ತವರಿಗೆ ವಿಧೇಯನಾಗದೇ, ಅವರ ಇಚ್ಛೆಗೆ ವಿರುದ್ಧವಾಗಿ ಅನ್ಯಜನರಾದ ಸ್ತ್ರೀಯರನ್ನು ಮದುವೆಯಾದರು. ಅವರ ಶಕ್ತಿಯ ಮುಂದೆ ಹೆತ್ತವರ ಮಾತುಗಳು ಅತ್ಯಲ್ಪವಾಗಿ ಮಾರ್ಪಟ್ಟವು. ಫಲಿತಾಂಶ ಶೋಚನೀಯವಾಗಿತ್ತು.

 

ಯೌವ್ವನಸ್ಥರೇ! ನಿಮ್ಮ ಪೋಷಕರು ಅವಿದ್ಯಾವಂತರಾಗಿರಬಹುದು ಅಥವಾ ಲೋಕಜ್ಞಾನ ಇಲ್ಲದವರಾಗಿರಬಹುದು. ಪೋಷಕರಿಗೆ ಏನೂ ಗೊತ್ತಿಲ್ಲ ಎಂದು ನೀವು ಮರುಳು ಮಾಡಬಹುದು. ಆದರೆ ನಿಮ್ಮ ಹೃದಯದಲ್ಲಿ ದೇವರ ಭಯವಿದ್ದರೆ ಲೋಕದ ಕಾಮಕ್ಕೆ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ತಿಳಿಯಿರಿ. ನೀವು ಮಾಡುವ ಪ್ರತಿಯೊಂದು ಪಾಪಕ್ಕೂ ದೇವರು ಒಂದು ದಿನ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ ಎಂಬ ಅಂಶವು ನಿಮ್ಮನ್ನು ಪಾಪದಲ್ಲಿ ಬೀಳದಂತೆ ಮಾಡುತ್ತದೆ. ಯುವಕರೇ, ನಿಮ್ಮ ಮನಸ್ಸಿನಲ್ಲಿರುವ ಪಾಪದ ಆಲೋಚನೆಗಳನ್ನು ಈಗಲೇ ದೇವರ ಬಳಿ ಹರಕೆ ಮಾಡಿ ಬಿಟ್ಟುಬಿಟ್ಟು ದೂರಸರಿಯಿರಿ. ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು (ಜ್ಞಾನೋಕ್ತಿ 28:13) ಎಂಬ ವಾಕ್ಯದ ಪ್ರಕಾರ, ನೀವು ನಿಮ್ಮ ಪಾಪಗಳನ್ನು ಒಪ್ಪಿಕೊಂಡಾಗ, ದೇವರು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾರೆ ಮತ್ತು ನಿಮ್ಮ ಜೀವನದಲ್ಲಿ ಹೊಸದನ್ನು ಮಾಡುತ್ತಾರೆ.

- S. ಅಂಜಲಿ

 

ಪ್ರಾರ್ಥನಾ ಅಂಶ:

ಯೌವನಸ್ಥರ ಕೂಟಕ್ಕೆ ಹೆಚ್ಚಿನ ಯೌವ್ವನಸ್ಥರನ್ನು ಕರೆತರುವ ಸ್ವಯಂಸೇವಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino