By Village Missionary Movement
Saturday, 08-Apr-2023ಧೈನಂದಿನ ಧ್ಯಾನ(Kannada) – 08.04.2023
ಅಂತಿಮವಾಗಿ...
"...ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಎಂದು ಮಹಾಧ್ವನಿಯಿಂದ ಕೂಗಿದನು;..." - ಲೂಕ 23:46
ಶಿಲುಬೆಯಲ್ಲಿ ಯೇಸು ನುಡಿದ ಏಳನೆಯ ಮಾತು:
ಮರಣದ ಅಂಚಿನಲ್ಲಿರುವ ಒಂದು ವ್ಯಕ್ತಿ ಸಾಯುವ ಮೊದಲು, ಅವನ ಬಾಯಿಂದ ಯಾವುದಾದರೊಂದು ಮಾತು ಬರುತ್ತದಾ ಎಂದು ಅವನ ಕುಟುಂಬ ಸದಸ್ಯರು ಕಾತುರದಿಂದ ಕಾಯುತ್ತಿರುತ್ತಾರೆ. ಅವರು ಹೇಳಿದ ಕೊನೆಯ ಮಾತನ್ನು ಪ್ರಮುಖವಾದ ಮಾತೆಂದು ಪರಿಗಣಿಸುತ್ತಾರೆ. ಕರ್ತನಾದ ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟಾಗ ನುಡಿದ 7 ಮಾತುಗಳಲ್ಲಿ 7 ನೆಯ ಮಾತು, "ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ " ಎಂಬುದೇ. ಮೊದಲನೆಯ ಮಾತಿನಲ್ಲೂ ತಂದೆಯೇ ಎಂದು ಕರೆದು ಕೊನೆಯ ಮಾತಿನಲ್ಲೂ ತಂದೆಯೇ ಎಂದು ಹೇಳಿ ಪ್ರಾರ್ಥಿಸುವುದನ್ನು ನೋಡುತ್ತೇವೆ.
ಕರ್ತನಾದ ಯೇಸು ಕ್ರಿಸ್ತನನ್ನು ತಂದೆಯು ಈ ಜಗತ್ತಿಗೆ ಕಳುಹಿಸಿದ ಏಕೈಕ ಕಾರಣವೆಂದರೆ ತನ್ನನ್ನು ಮನುಕುಲದ ಪಾಪಗಳಿಗಾಗಿ ಬಲಿಯಾಗಿ ಅರ್ಪಿಸಲು! ಪಾಪದಿಂದ ವಿಮೋಚನೆ ಹೊಂದಲು 33ವರೆ ವರ್ಷ ಈ ಲೋಕದಲ್ಲಿ ಮನುಷ್ಯನಾಗಿ ವಿಶ್ರಮಿಸದೆ ತಂದೆ ಕೊಟ್ಟ ಜವಾಬ್ದಾರಿಯನ್ನು ಪೂರೈಸಲು ಪಾಡುಗಳು, ಹೋರಾಟಗಳು, ಶೋಧನೆಗಳು, ಅವಶ್ಯಕತೆಗಳು ಎಲ್ಲವನ್ನು ಸಹಿಸಿಕೊಂಡು ಸಫಲವಾದ ಸಂಪೂರ್ಣ ಬದುಕನ್ನು ಮುಗಿಸಿದರು.
ಒಬ್ಬರು ಈ ಭೂಮಿಯಲ್ಲಿ ಎಷ್ಟು ವರ್ಷಗಳು ಜೀವಂತವಾಗಿದ್ದರು ಎಂಬುದು ಮುಖ್ಯವಲ್ಲ; ಹೇಗೆ ಜೀವಿಸಿದರು ಎಂಬುದೇ ಮುಖ್ಯ. ನಮ್ಮ ಜೀವನವು ದೇವರನ್ನು ಮಹಿಮೆಪಡಿಸುವ ಜೀವನವಾಗಿ, ನಮಗೆ ಕೊಡಲ್ಪಟ್ಟ ಸಮಯದಲ್ಲಿ ದೇವರ ಚಿತ್ತವನ್ನು ನೆರವೇರಿಸಲ್ಪಟ್ಟ ಜೀವನವಾಗಿ, ಇದೆಯೇ ಎಂಬುದನ್ನು ಶೋಧಿಸಿ ನೋಡೋಣ.
ತಂದೆಯ ಚಿತ್ತವನ್ನು ನೆರವೇರಿಸುವುದೇ ಯೇಸುಕ್ರಿಸ್ತನ ಆಹಾರವಾಗಿದೆ ಎಂದು ಸತ್ಯವೇದದಲ್ಲಿ ಓದುತ್ತೇವೆ. ಹಸಿದವನು ಆಹಾರಕ್ಕಾಗಿ ಹೇಗೆ ಹಾತೊರೆಯುತ್ತಾನೆಯೋ ಹಾಗೆಯೇ ಯೇಸು ದೇವರ ಚಿತ್ತವನ್ನು ಮಾಡಲು ಬಹು ಆತುರವುಳ್ಳವರಾಗಿದ್ದರು.
ಒಲಂಪಿಕ್ ಪಂದ್ಯದಲ್ಲಿ, ಒಲಿಂಪಿಕ್ ಜ್ಯೋತಿಯನ್ನು ಹೊತ್ತ ವ್ಯಕ್ತಿಯು ಸ್ವಲ್ಪ ದೂರ ಓಡಿ ನಂತರ ಅದನ್ನು ಇನ್ನೊಬ್ಬ ವ್ಯಕ್ತಿಗೆ ರವಾನಿಸುತ್ತಾನೆ ಮತ್ತು ಅದನ್ನು ಸ್ವೀಕರಿಸಿದ ವ್ಯಕ್ತಿಯು ಸ್ವಲ್ಪ ದೂರ ಓಡಿ 3 ನೇ ವ್ಯಕ್ತಿಗೆ ರವಾನಿಸಿ ಅವರೊಂದಿಗೆ ಓಡುತ್ತಾನೆ. ಆ ದೀಪವು 4 ನೇ ವ್ಯಕ್ತಿ, 5 ನೇ ವ್ಯಕ್ತಿ ಎಂದು pass on ಮಾಡಲಾಗುತ್ತದೆ ಅಂತಿಮವಾಗಿ ಟಾರ್ಚ್ ಹೊತ್ತಿ ಉರಿಯುತ್ತದೆ. ಇದೇ ರೀತಿ ಯೇಸು ತಂದೆ ನೀಡಿದ ಜವಾಬ್ದಾರಿಯನ್ನು ಪೂರೈಸಿ ನಮಗೆ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ಪೂರೈಸಿ ಬೆಳಕಿನ ಬಂಧವನ್ನು ಬೆಳಗಿಸೋಣ. ದೇವರ ಚಿತ್ತವನ್ನು ಕೊನೆಯವರೆಗೂ ಪೂರೈಸಿ ನಮ್ಮ ಜೀವನದ ಓಟವನ್ನು ದೇವರಲ್ಲಿ ಸಂತೋಷದಿಂದ ಪೂರ್ಣಗೊಳಿಸೋಣ.
- Mrs. ಜೆಬಾ ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ತಿರುಚ್ಚಿಯಲ್ಲಿ ನಡೆಯಲಿರುವ ಯೌವ್ವನಸ್ಥರ ಉಜ್ಜೀವನದ ಕೂಟಕ್ಕಾಗಿ ನಮ್ಮ ಸೇವಕರು ತೆಗೆದುಕೊಳ್ಳುತ್ತಿರುವ ಪ್ರಯಾಸ ಗಳಲ್ಲಿ ದೇವರ ಹಸ್ತವು ಜೊತೆಯಿರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482