Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.04.2023
Share:

By Village Missionary Movement

Friday, 07-Apr-2023

ಧೈನಂದಿನ ಧ್ಯಾನ(Kannada) – 07.04.2023

 

ಮುಗಿಯಿತು

 

"ಯೇಸು... ತೀರಿತು ಎಂದು ಹೇಳಿ ತಲೇಬಾಗಿಸಿ, ಆತ್ಮವನ್ನು ಒಪ್ಪಿಸಿಕೊಟ್ಟನು" - ಯೋಹಾನ 19:30

 

ಯೇಸು ಶಿಲುಬೆಯ ಮೇಲೆ ನುಡಿದ ಆರನೆಯ ಮಾತು:

ಶಿಲುಬೆಯಲ್ಲಿ ನೇತಾಡುವ ಸಮಯದಲ್ಲಿ ಯೇಸುಕ್ರಿಸ್ತನು ಮಾತನಾಡಿದ 7 ಮಾತುಗಳಲ್ಲಿ 6 ನೆಯ ಮಾತು "ಮುಗಿಯಿತು". ಯಾವುದೆಲ್ಲಾ ಮುಗಿಯಿತು ಎಂದು ನೋಡೋಣವಾ?

 

ದೇವರ ಮಗನ ಮಾನವ ಪ್ರಯಾಣವು ಮುಗಿಯಿತು: ಆದಾಮ ಹವ್ವಳ ಪಾಪವನ್ನು ತೊಡೆದುಹಾಕಲು ಮಾನವನಾದನು ಮತ್ತು ಮಾನವಕುಲವನ್ನು ವಿಮೋಚಿಸಲು ಪ್ರಾಯಶ್ಚಿತ್ತ ಯಜ್ಞವಾಗುವಲ್ಲಿ ಮುಗಿಯಿತು. ಪ್ರವಾದನೆಗಳು ನೆರವೇರಿ ಮುಗಿಯಿತು: ಮೋಶೆ ಮೊದಲುಗೊಂಡು ಎಲ್ಲಾ ಪ್ರವಾದಿಗಳು ಬರೆದ ದೇವರ ವಾಕ್ಯಗಳೆಲ್ಲಾ ನೆರವೇರಿ ಮುಗಿಯಿತು. 

 

ತಂದೆಯಾದ ದೇವರು ಕೊಟ್ಟ ಕೆಲಸವೆಲ್ಲಾ ಮುಗಿಯಿತು: ಯೇಸು ಶಿಷ್ಯರಿಗೆ, "ನನ್ನನ್ನು ಕಳುಹಿಸಿ ಕೊಟ್ಟಾತನ ಚಿತ್ತದಂತೆ ಮಾಡಿ, ಆತನ ಕೆಲಸವನ್ನು ಮುಗಿಸುವುದೇ ನನ್ನ ಆಹಾರವಾಗಿದೆ" ಎಂದು ಹೇಳಿದರು. ರಕ್ಷಣೆಯ ಯೋಜನೆಯು ಶಿಲುಬೆಯ ಯಜ್ಞದಲ್ಲಿ ನೆರವೇರಿ ಮುಗಿಯಿತು. ಆದ್ದರಿಂದಲೇ, ಯೋಹಾನ 17:4 ರಲ್ಲಿ

"ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು"

 

"ನಾನು ಮಾಡಲು ನೀವು ನನಗೆ ನೇಮಿಸಿದ ಕೆಲಸವನ್ನು ನಾನು ಮಾಡಿ ಮುಗಿಸಿದೆ" ಎಂದು ಯೇಸು ಕ್ರಿಸ್ತನು ದೃಢವಾಗಿ ಹೇಳಿದರು.

 

"ಧರ್ಮಶಾಸ್ತ್ರವನ್ನು ನೆರವೇರಿಸುವುದಕ್ಕಾಗಿಯೇ ಬಂದೆ" ಎಂದು ಹೇಳಿದ ಯೇಸುಕ್ರಿಸ್ತನು, ಅದನ್ನು ಶಿಲುಬೆಯ ಮೇಲೆ ಮಾಡಿ ಮುಗಿಸಿದರು. (ಇಬ್ರಿಯ 9:22) ಧರ್ಮಶಾಸ್ತ್ರದ ಪ್ರಕಾರ ಸ್ವಲ್ಪಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. "ರಕ್ತಧಾರೆಯಿಲ್ಲದೆ ಪಾಪಪರಿಹಾರ ಉಂಟಾಗುವದಿಲ್ಲ" ಅದರಂತೆಯೇ ತನ್ನ ಸ್ವಂತ ರಕ್ತವನ್ನು ಚೆಲ್ಲಿ ನಮಗೆ ಪಾಪ ಕ್ಷಮಾಪಣೆಯನ್ನು ಕೊಟ್ಟ ಮಹತ್ವದ ಕೆಲಸ ಮುಗಿಯಿತು. ಹೀಗೆ ಯೇಸು ಕ್ರಿಸ್ತನು ಎಲ್ಲವನ್ನು ಮುಗಿಸಿ ಮುಗಿಯಿತು ಎಂದು ಹೇಳಿದರು. ಅದು ವೇದನೆಯ ಧ್ವನಿಯಲ್ಲ, ವಿಜಯದ ಕೂಗು! ದೇವರ ಚಿತ್ತವನ್ನು ಪೂರೈಸಿದ ತೃಪ್ತಿ.

 

ತನ್ನ ಜೀವನದ ಪ್ರಯಾಣವನ್ನು ಕೊನೆಗೊಳಿಸುವ ಸಮಯದಲ್ಲಿ ಕೆಲವರು ನುಡಿದ ಮಾತುಗಳನ್ನು ನೋಡೋಣ. ದೇವರಿಲ್ಲ ಎಂದು ಹೇಳುತ್ತಾ ಬದುಕಿದ ವಾಲ್ಟೇರ್ ಸಾವಿನ ಅಂಚಿನಲ್ಲಿ “ಅಯ್ಯೋ, ಮನುಷ್ಯರಿಂದ, ದೇವರಿಂದ ಕೈಬಿಡಲ್ಪಟ್ಟ ಸ್ಥಿತಿಗೆ ಬಂದುಬಿಟ್ಟೆನೆ, ನಾನು ನರಕಕ್ಕೇ ತಾನೇ ಹೋಗುತ್ತೇನೆ?” ಎಂದು ಶಬ್ದವಾಗಿ ಪ್ರಲಾಪಿಸಿದರು.

 

ಸುವಾರ್ತೆಗಾಗಿ ಪ್ರಪಂಚದಾದ್ಯಂತ ಬಳಸಲ್ಪಟ್ಟ ಮತ್ತು ಅನೇಕರನ್ನು ಯೇಸುವಿನ ಬಳಿಗೆ ಕರೆದೊಯ್ದ ದೇವರ ಮನುಷ್ಯನಾದ ಡಿ.ಎಲ್ ಮೂಡಿ ತನ್ನ ಕೊನೆಯ ಕ್ಷಣಗಳಲ್ಲಿ “ಇದು ಸಾವಿನ ದಿನವಲ್ಲ. ನನ್ನ ಪಟ್ಟಾಭಿಷೇಕದ ದಿನ. "ನನ್ನ ಯೇಸು ಕ್ರಿಸ್ತನು ಕಿರೀಟವನ್ನಿಟ್ಟುಕೊಂಡು ನನಗಾಗಿ ಕಾಯುತ್ತಿದ್ದಾರೆ" ಎಂದು ನುಡಿದರು.

 

ನಮ್ಮ ಅಂತಿಮ ದಿನವನ್ನು ನಾವು ಹೇಗೆ ಕೊನೆಗೊಳಿಸಲಿದ್ದೇವೆ? ಯೋಚಿಸೋಣ! ಕಾರ್ಯಮಾಡೋಣ!!

- Mrs. ವನಜಾ ಪಾಲ್ ರಾಜ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯಲ್ಲಿ ಕೆಲಸ ಮಾಡಲು ಉತ್ತಮ ಅನುಭವಿ ತಂತ್ರಜ್ಞರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş